ವಾಶಿಂಗ್ಟನ್: ಅಮೆರಿಕಾದಲ್ಲಿ ಮೊದಲ ಬಾರಿಗೆ 7 –ಇಲೆವೆನ್, ಡ್ರೋನ್ ಮೂಲಕ ಚಿಕನ್ ಸ್ಯಾಂಡ್ವಿಚ್, ಹಾಟ್ ಕಾಫಿ ಮತ್ತು ಡೊನಟ್ಸ್ ಡೆಲಿವರಿ ಮಾಡಿದೆ. ಡ್ರೋನ್ ಮೂಲಕ ಆಹಾರವನ್ನು ಕಳುಹಿಸಿ ಅಮೆರಿಕ ಹೊಸ ದಾಖಲೆಯನ್ನು ಬರೆದಿದೆ.
ಅಮೆರಿಕಾದ ನೆವಾಡ ಪ್ರಾಂತ್ಯದ ರೆನೋ ಪಟ್ಟಣಕ್ಕೆ ಡ್ರೋನ್, ಸ್ಯಾಂಡ್ ವಿಚ್ ಮುಂತಾದವುಗಳನ್ನು ತಲುಪಿಸಿದೆ. ಡ್ರೋನ್ ಸ್ಟಾರ್ಟಪ್ ಕಂಪನಿ ಫ್ಲರ್ಟಿಯ ಮುಖ್ಯ ಕಾರ್ಯದರ್ಶಿ ಮ್ಯಾಟ್ ಸ್ವೀನಿ ಅವರು, ‘ನಾವು 7-ಇಲೆವೆನ್ ನ ಕಾರ್ಯವೈಖರಿಯಿಂದ ತುಂಬ ಸಂತುಷ್ಟರಾಗಿದ್ದೇವೆ. ಇದು ಇಡೀ ಜಗತ್ತಿಗೆ ವಸ್ತುಗಳನ್ನು ತಲುಪಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ” ಎಂದಿದ್ದಾರೆ. ವಾಣಿಜ್ಯ ಬಳಕೆಗಾಗಿ ಡ್ರೋನ್ ಹಾರಾಟ ನಡೆಸಲು ಅಮೆರಿಕದ ಕಾನೂನು ಕೂಡ ಈ ವರ್ಷ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ.