ದಿನೇ ದಿನೇ ಜನಪ್ರಿಯತೆ ಪಡೆಯುತ್ತಿರುವ ಪೋಕ್ ಮಾನ್ ಆಟ ಹಲವು ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿದ್ದೂ ಸತ್ಯ. ಇದಕ್ಕೆ ಇಂಬುಕೊಡುವಂತ ಇನ್ನೊಂದು ಘಟನೆ ನಡೆದಿದೆ.
ಪೋಕ್ ಮಾನ್ ತನ್ನ ಇಬ್ಬರು ಆಟಗಾರರನ್ನು ಗಡಿ ದಾಟಿಸಿದ್ದಾನೆ. ಇಬ್ಬರು ಪೋಕ್ ಮಾನ್ ಅಭಿಮಾನಿಗಳು ಆಟದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಅವರಿಗೆ ನಾವು ಎಲ್ಲಿದ್ದೇವೆ, ಎಲ್ಲಿಗೆ ಬಂದಿದ್ದೇವೆ ಎಂಬುದರ ಪರಿವೆಯೇ ಇರಲಿಲ್ಲ.
ಆಟದಲ್ಲಿ ಪೋಕ್ ಮಾನ್ ಅನ್ನು ಹುಡುಕುತ್ತ ಕೆನಡಾದಿಂದ ಹೊರಟ ಇಬ್ಬರು ಬಾಲಕರು ಅಂತರಾಷ್ಟ್ರೀಯ ಗಡಿ ದಾಟಿ ಅಮೆರಿಕಕ್ಕೆ ಹೋಗಿದ್ದಾರೆ. ಗಡಿ ಭಾಗದ ಅಲ್ಬೆರ್ಟಾ ಪ್ರದೇಶದಲ್ಲಿ ಗಡಿ ಭದ್ರತಾ ಸಿಬ್ಬಂದಿ ಇವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರಿಂದ ವಿಚಾರಣೆಗೊಳಪಟ್ಟ ನಂತರ ಇವರು ಸಧ್ಯದಲ್ಲೇ ಬಿಡುಗಡೆ ಹೊಂದಲಿದ್ದಾರೆ.