ಜಪಾಟಾ ರೇಸಿಂಗ್ ಕಂಪನಿ, ವಿನೂತನವಾದ ಹೂವರ್ ಬೋರ್ಡ್ ಒಂದನ್ನು ಕಂಡುಹಿಡಿದಿದೆ. ಈಗಾಗಲೇ ಗಿನ್ನಿಸ್ ದಾಖಲೆಗೆ ಸೇರಿರುವ ಇದು, ನೆಲದಿಂದ 10 ಸಾವಿರ ಅಡಿ ಎತ್ತರಕ್ಕೆ ಹಾರಬಲ್ಲದು. ಅಷ್ಟೇ ಅಲ್ಲ ಇದು ನೀರಿನ ಮೇಲೂ ಹಾರಬಲ್ಲದು.
ಹೌದು. ಜೆಟ್ ಟರ್ಬೈನ್ ಇಂಜಿನ್ ಹೊಂದಿರುವ ಹೂವರ್ ಬೋರ್ಡ್ ಮೇಲೆ ನಿಂತು ನಾವು ಏಕಾಂಗಿಯಾಗಿ ಆಕಾಶ ಮಾರ್ಗದಲ್ಲಿ ಹೋಗಬಹುದು. ಜುಲೈ 24 ರಂದು ಅಟ್ಲಾಂಟಿಕ್ ನ ಸೌಸೆಟ್ ಲೇಸ್ ಪಿಸ್ ನಲ್ಲಿ ಒಬ್ಬ ವ್ಯಕ್ತಿ ಹೂವರ್ ಮೂಲಕ 7,388 ಅಡಿ ಎತ್ತರಕ್ಕೆ ಹಾರಿದ್ದಾನೆ!
ಹೂವರ್ ಬೋರ್ಡ್ ನಲ್ಲಿ ಅಳವಡಿಸಲಾಗಿರುವ ಯಂತ್ರದ ಸಹಾಯದಿಂದ ಇದು 10 ನಿಮಿಷದಲ್ಲಿ 150 ಕಿ.ಮೀ. ವೇಗ ಪಡೆಯುತ್ತದೆ. ಈ ಹೂವರ್ ಬೋರ್ಡ್ ಮೇಲೆ ನಿಂತು ಗಾಳಿಯಲ್ಲಿ ವಿಹರಿಸುವ ಚಿತ್ರಗಳು ಈಗಾಗಲೇ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಅಮೆರಿಕ ಸೇನೆ ಇದನ್ನು ಖರೀದಿಸಲು ಮುಂದೆ ಬಂದಿದೆಯಂತೆ.
ಕಂಪನಿಯ ಈ ವಿನೂತನ ತಂತ್ರಜ್ಞಾನದ ಕುರಿತು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹೂವರ್ ಬೋರ್ಡ್ ಸಾಹಸಿಗರ ಮನಸ್ಸಲ್ಲಿ ಹೊಸ ಅಲೆ ಎಬ್ಬಿಸಿರುವುದಂತೂ ನಿಜ.