ಇಸ್ಲಾಮಾಬಾದ್: ಸಹೋದರನ ಮೇಲಿನ ಸೇಡಿನಿಂದ ವ್ಯಕ್ತಿಯೊಬ್ಬ ಭಾರೀ ಅನಾಹುತಕ್ಕೆ ಕಾರಣವಾದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಪಂಜಾಬ್ ಸೆಂಟ್ರಲ್ ನಲ್ಲಿ ತಾರಿಕ್ ಅಹಮ್ಮದ್ ಮತ್ತು ಖಾಲಿದ್ ಅಹಮದ್ ಬೇಕರಿ ನಡೆಸುತ್ತಿದ್ದಾರೆ.
ಹೀಗೆ ಅಣ್ಣ, ತಮ್ಮ ಬೇಕರಿ ನಡೆಸುತ್ತಾ ಅನ್ಯೋನ್ಯವಾಗಿರುವಂತೆ ಕಂಡರೂ, ಅವರ ನಡುವೆ ವೈಮನಸ್ಸು ಇತ್ತೆನ್ನಲಾಗಿದೆ. ಒಮ್ಮೆ ತಾರಿಕ್, ಅಂಗಡಿಯಲ್ಲಿ ಖಾಲಿದ್ ಕುರಿತು ಜನರೆದುರು ಗೇಲಿ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂದ ಖಾಲಿದ್, ಬೇಕರಿ ಸಿಹಿ ತಿನಿಸಿನಲ್ಲಿ ಕ್ರಿಮಿನಾಶಕ ಬೆರೆಸಿದ್ದಾನೆ. ಈ ಸಿಹಿ ತಿನಿಸನ್ನು ಹುಟ್ಟುಹಬ್ಬದ ಸಮಾರಂಭಕ್ಕೆ ತೆಗೆದುಕೊಂಡು ಹೋಗಲಾಗಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಿಹಿತಿಂಡಿ ತಿಂದವರೆಲ್ಲಾ ಸಾವನ್ನಪ್ಪಿದ್ದಾರೆ.
ಹೀಗೆ ಸಿಹಿ ತಿಂಡಿ ಸೇವಿಸಿ ಐವರು ಮಕ್ಕಳು ಸೇರಿದಂತೆ, ಬರೋಬ್ಬರಿ 30 ಮಂದಿ ಸಾವನ್ನಪ್ಪಿದ್ದು, ಐವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಹೋದರರನ್ನು ಬಂಧಿಸಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.