ಬ್ರೆಜಿಲ್ ನ ರಿಯೋದಲ್ಲಿ ಆಗಸ್ಟ್ 5 ರಿಂದ 21 ರ ವರೆಗೆ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ಜಿಕಾ ವೈರಸ್ ನ ಭೀತಿ ಆವರಿಸಿದೆ. ಜಿಕಾ ಆವರಿಸುವುದೆಂಬ ಹೆದರಿಕೆಯಿಂದ ಕೆಲ ಕ್ರೀಡಾಪಟುಗಳು ಹಾಗೂ ವರದಿಗಾರರು ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.
ಬ್ರೆಜಿಲ್ ನಲ್ಲಿ ಡೆಂಘೀ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಡೆಂಘೀ ಜ್ವರಕ್ಕೆ ಕಾರಣವಾಗುವ ಈಡೀಸ್ ಹೆಣ್ಣುಸೊಳ್ಳೆಯಿಂದಲೇ ಜಿಕಾ ವೈರಸ್ ಹುಟ್ಟುವುದರಿಂದ ರಿಯೋಗೆ ತೆರಳಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಒಲಂಪಿಕ್ ನಲ್ಲಿ ಬಹುತೇಕ ಎಲ್ಲ ದೇಶದ ಕ್ರೀಡಾಪಟುಗಳೂ ಭಾಗವಹಿಸುವುದರಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುವ ಸಾಧ್ಯತೆಯೂ ಹೆಚ್ಚಿದೆ.
ಬ್ರೆಜಿಲ್ ನಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಣಹವೆ ಇರುತ್ತದೆ. ಇದರಿಂದ ಹೆಚ್ಚು ಸೊಳ್ಳೆಗಳು ಇರುವುದಿಲ್ಲ. ಇದರಿಂದ ಯಾರೂ ಜಿಕಾ ವೈರಸ್ ಬಗ್ಗೆ ಭಯಪಡುವುದು ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.