ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.
ಬ್ರೂಪೇನ್ ಒಂದು ಉರಿಯೂತದ ವಿರೋಧಿ ಗುಳಿಗೆಯಾಗಿದ್ದು, ಇದನ್ನು ಸೇವಿಸಿದಾಕ್ಷಣ ನೋವೇ ಇಲ್ಲವೇನೋ ಎಂಬ ಭಾವನೆ ಉಂಟಾಗುತ್ತದೆ. ಏಕೆಂದರೆ ಇದು ನಮ್ಮ ಶರೀರದಲ್ಲಿ ನೋವು ಮತ್ತು ಉರಿಗಳಿಗೆ ಪ್ರತಿಕ್ರಿಯೆ ನೀಡುವ ಪದಾರ್ಥಗಳ ಉತ್ಪಾದನೆಯನ್ನೇ ತಡೆಯುತ್ತದೆ. ಹಾಗಾಗಿ ನಮಗೆ ನೋವುಗಳು ಇದ್ದರೂ ಅದರ ಅನುಭವ ಆಗುವುದಿಲ್ಲ. ಸತತವಾಗಿ ಬ್ರೂಫೇನ್ ಸೇವಿಸುವುದರಿಂದ ತಲೆ ಸುತ್ತು, ಹೊಟ್ಟೆ ಕೆಡುವುದು, ವಾಂತಿ, ಮಲಬದ್ಧತೆ, ಹೃದಯಾಘಾತದ ಸಂಭವವನ್ನು ಹೆಚ್ಚಿಸುತ್ತದೆ.
ಇಷ್ಟು ಅಡ್ಡ ಪರಿಣಾಮ ಬೀರುವ ಬ್ರೂಫೇನ್ ಸೇವಿಸುವ ಬದಲು ಕೆಲವು ಗಿಡಮೂಲಿಕೆಗಳ ಔಷಧಿಯನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಂತಹ ಕೆಲವು ಔಷಧಿಗಳು ಇಲ್ಲಿವೆ:
ನಿತ್ಯದ ಆಹಾರದಲ್ಲಿ ಆಲಿವ್ ಎಣ್ಣೆ ಉಪಯೋಗಿಸಿ. ಇದು ಉರಿ ನಿರೋಧಕ ಗುಣ ಹೊಂದಿದೆ.
ಗಾಯಗಳಿಗೆ ಐಸ್ ಪೀಸ್ ಅಥವಾ ಬಿಸಿ ನೀರಿನ ಶಾಖ ಕೊಡಿ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ.
ಮಾಂಸಖಂಡಗಳ ನೋವಿದ್ದರೆ ಫಿಜಿಕಲ್ ಥೆರಪಿಯನ್ನು ತೆಗೆದುಕೊಳ್ಳಿ.
ಬೆಳ್ಳುಳ್ಳಿಯ ಒಂದು ಎಸಳನ್ನು ನಿತ್ಯ ಸೇವಿಸಿ. ಇದು ಅನೇಕ ನೋವುಗಳನ್ನು ನಿವಾರಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಗಡ್ಡೆಗಳನ್ನು ಕ್ಷೀಣಗೊಳಿಸುವ ಶಕ್ತಿ ಇದಕ್ಕಿದೆ.
ನೋವುಗಳಿರುವ ಜಾಗಕ್ಕೆ ಅರಿಸಿನ ಹಚ್ಚಿ. ಇದರಲ್ಲಿರುವ ಕುರುಕುಮಿನ್ ಅಂಶ ನೋವು ನಿವಾರಕವಾಗಿ ಕೆಲಸ ನಿರ್ವಹಿಸುತ್ತದೆ.