ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಶುಕ್ರವಾರ ರಿಲೀಸ್ ಆಗಿದ್ದು, ಎಲ್ಲೆಡೆ ‘ಕಬಾಲಿ’ ಮೇನಿಯಾ ಶುರುವಾಗಿದೆ. ಈ ನಡುವೆ ಗುರುವಾರ ಕುಟುಂಬ ಸಮೇತ ರಜನಿಕಾಂತ್ ಅಮೆರಿಕದಲ್ಲಿ ‘ಕಬಾಲಿ’ ಸಿನಿಮಾ ವೀಕ್ಷಿಸಿದ್ದಾರೆ.
ಕಲೈಪುಲಿ ಎಸ್.ಥನು ನಿರ್ಮಾಣದ ಈ ಚಿತ್ರವನ್ನು ಪ.ರಂಜಿತ್ ನಿರ್ದೇಶನ ಮಾಡಿದ್ದಾರೆ. ಬಹು ವರ್ಷಗಳ ನಂತರ ರಜನಿಕಾಂತ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ ಮೊದಲ ದಿನದಲ್ಲೇ ಕಮಾಲ್ ಮಾಡಿದ್ದು, ದೇಶ- ವಿದೇಶಗಳಲ್ಲೂ ಸಿನಿಮಾ ಭರ್ಜರಿ ಹವಾ ಸೃಷ್ಠಿಸಿದೆ. ಅಮೆರಿಕದಲ್ಲಿ ಏರ್ಪಡಿಸಿದ್ದ ಶೋನಲ್ಲಿ ರಜನಿಕಾಂತ್ ಭೇಟಿ ನೀಡಿದ್ದು, ಅಲ್ಲಿದ್ದ ಅಭಿಮಾನಿಗಳಿಗೆ ಖುಷಿಯಾಗಿದೆ.
ರಜನಿಕಾಂತ್ ಥಿಯೇಟರ್ ನಲ್ಲಿ ಪ್ರೇಕ್ಷಕರೊಂದಿಗೆ ಕುಟುಂಬ ಸಮೇತ ‘ಕಬಾಲಿ’ ವೀಕ್ಷಿಸಿದ್ದಾರೆ. ರಜನಿ ಅವರನ್ನು ಕಂಡ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ರಜನಿಕಾಂತ್, ರಾಧಿಕಾ ಆಪ್ಟೆ, ಕಿಶೋರ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದು, ಭಾರತದ ಯಾವ ಸಿನಿಮಾಗೂ ಇಲ್ಲದಷ್ಟು ಕ್ರೇಜ್ ‘ಕಬಾಲಿ’ಗೆ ಇರುವುದು ವಿಶೇಷವಾಗಿದೆ.