ಗುರುವಾರದಂದು ಮಡಿಕೇರಿಯ ವಸತಿ ಗೃಹದಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಡಿ.ವೈ.ಎಸ್.ಪಿ. ಗಣಪತಿಯವರ ಆತ್ಮಹತ್ಯೆ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಶುಕ್ರವಾರದಂದು ಮಡಿಕೇರಿಯಲ್ಲಿ ಮಾತನಾಡಿದ್ದ ಪೊಲೀಸ್ ಅಧಿಕಾರಿಗಳು, ಗಣಪತಿಯವರ ತಂದೆ ಕುಶಾಲಪ್ಪ, ತಮ್ಮ ಪುತ್ರ ಕೆಲ ಕಾಲದಿಂದ ಖಿನ್ನತೆಯಿಂದ ಬಳಲುತ್ತಿದ್ದು, ಜೊತೆಗೆ ಸಂಸಾರದಲ್ಲಿ ನೆಮ್ಮದಿ ಇಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ನೀಡಿರುವುದಾಗಿ ಹೇಳಿದ್ದರು.
ಆದರೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಗಣಪತಿಯವರ ತಂದೆ ಕುಶಾಲಪ್ಪ, ತಾವು ಯಾವುದೇ ದೂರು ನೀಡಿಲ್ಲ. ಪೊಲೀಸರೊಬ್ಬರು ದೂರನ್ನು ಸಿದ್ದಪಡಿಸಿಕೊಂಡು ಬಂದಿದ್ದು, ತಾವು ಅದಕ್ಕೆ ಸಹಿ ಮಾಡಿದ್ದೇನಷ್ಟೇ. ಅದರಲ್ಲಿ ಏನು ಬರೆದಿತ್ತೆಂಬ ಅಂಶವನ್ನೂ ತಾವು ನೋಡಿಲ್ಲವೆಂದು ತಿಳಿಸಿದ್ದಾರೆ. ಹಾಗಾದರೆ ಪೊಲೀಸರೇ ತಮಗೆ ಬೇಕಾದಂತೆ ದೂರನ್ನು ಬರೆದು ಅದಕ್ಕೆ ಕುಶಾಲಪ್ಪನವರ ಸಹಿ ಪಡೆದಿದ್ದರಾ ಎಂಬ ಅನುಮಾನ ಈಗ ಮೂಡಿದೆ.