ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಕಡು ಕಷ್ಟದಿಂದ ಸ್ವಸಾಮರ್ಥ್ಯದ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಧೋನಿ ಇಂದು ಜಗತ್ತಿನ ಶ್ರೀಮಂತ ಕ್ರಿಕೆಟಿಗರ ಪೈಕಿ ಒಬ್ಬರಾಗಿದ್ದರೂ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಮರೆತಿಲ್ಲ.
ಕ್ರಿಕೆಟ್ ಆಟದ ಬಿಡುವಿನ ಸಮಯದಲ್ಲಿ ಸಾಮಾನ್ಯರಂತೆ ಕಾಲ ಕಳೆಯುವ ಧೋನಿ, ರಾಂಚಿಯಲ್ಲಿದ್ದ ವೇಳೆ ಸಾಮಾನ್ಯರಂತೆ ತಮ್ಮ ಬೈಕ್ ಅನ್ನು ತಾವೇ ವಾಶ್ ಮಾಡುತ್ತಾರಲ್ಲದೇ, ಸಣ್ಣ ಪುಟ್ಟ ರಿಪೇರಿಗಳನ್ನೂ ಮಾಡುತ್ತಾರೆ.
ಇಂತಹ ವ್ಯಕ್ತಿತ್ವವುಳ್ಳ ಧೋನಿ, ಜುಲೈ 7 ರಂದು ತಮ್ಮ ಹುಟ್ಟು ಹಬ್ಬವನ್ನಾಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳೂ ಸೇರಿದಂತೆ ಟೀಮ್ ಇಂಡಿಯಾದ ಹಲವು ಆಟಗಾರರು ಮಹೇಂದ್ರ ಸಿಂಗ್ ಧೋನಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಪೈಕಿ ಶುಭಾಶಯ ಕೋರಿದ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ, ಅಪ್ ಲೋಡ್ ಮಾಡಿರುವ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ವಿಮಾನ ವಿಳಂಬವಾಗಿ ಹೊರಡುತ್ತದೆಂಬ ಸೂಚನೆ ದೊರೆತ ವೇಳೆ ಧೋನಿ, ತಮ್ಮ ಬಳಿಯಿದ್ದ ಕೊಳಲಿನಿಂದ ಸೊಗಸಾದ ರಾಗ ನುಡಿಸಿದ್ದಾರೆ. ಆ ಮೂಲಕ ತಮ್ಮ ಮತ್ತೊಂದು ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.