ಸೇಂಟ್ ಕಿಟ್ಸ್: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ, ಈಗಾಗಲೇ ವಿಂಡೀಸ್ ಪ್ರವಾಸ ಕೈಗೊಂಡಿರುವ ಆಟಗಾರರಿಗೆ ಸೂಕ್ತ ಸಲಹೆ ನೀಡಿ ಅಣಿಗೊಳಿಸಿದ್ದಾರೆ. ಟೀಂ ಇಂಡಿಯಾ ಕೋಚ್ ಆದ ನಂತರ ವಿಂಡೀಸ್ ಗೆ ಮೊದಲ ಪ್ರವಾಸ ಕೈಗೊಂಡಿದ್ದಾರೆ.
ಟೆಸ್ಟ್ ಸರಣಿಯನ್ನಾಡಲು ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಲುಪಿದ್ದು, ಈ ಸಂದರ್ಭದಲ್ಲಿ ಪ್ರಮಾದವೊಂದು ನಡೆದು, ಬ್ರಿಟಿಷ್ ಏರ್ ವೇಸ್, ಕುಂಬ್ಳೆ ಅವರ ಕ್ಷಮೆ ಕೋರಿದೆ. ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಅವರ ಕ್ರಿಕೆಟ್ ಸಾಮಗ್ರಿ ಇದ್ದ ಬ್ಯಾಗ್ ಅನ್ನು ಸೂಕ್ತ ಸಮಯಕ್ಕೆ ತಲುಪಿಸದೆ ತಪ್ಪೆಸಗಿದೆ. ತನ್ನ ತಪ್ಪಿಗೆ ಕ್ಷಮೆ ಕೂಡ ಕೇಳಿದೆ. ಮುಂಬೈನಿಂದ ಹೊರಟ ಟೀಂ ಇಂಡಿಯಾ ಆಟಗಾರರು ಲಂಡನ್ ಮಾರ್ಗವಾಗಿ ಸೇಂಟ್ ಕಿಟ್ಸ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ.
ಇದೇ ವಿಮಾನದಲ್ಲಿ ಬರಬೇಕಿದ್ದ ಅನಿಲ್ ಕುಂಬ್ಳೆ ಅವರ ಬ್ಯಾಗ್ ಅನ್ನು ಬ್ರಿಟಿಷ್ ಏರ್ ವೇಸ್ ಸೇಂಟ್ ಕಿಟ್ಸ್ ಗೆ ತಲುಪಿಸಿರಲಿಲ್ಲ. ಇದು ಅರಿವಿಗೆ ಬರುತ್ತಿದ್ದಂತೆ ಅನಿಲ್ ಕುಂಬ್ಳೆ ಅವರಲ್ಲಿ ಬ್ರಿಟಿಷ್ ಏರ್ ವೇಸ್ ಕ್ಷಮೆ ಕೋರಿದೆ. ಕಳೆದ ವರ್ಷ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೂ ಬ್ರಿಟಿಷ್ ಏರ್ ವೇಸ್ ನಿಂದ ಕಹಿ ಅನುಭವವಾಗಿತ್ತು.