ಮುಸ್ಲಿಂ ಬಾಂಧವರಿಗೆ ಇಂದು ರಂಜಾನ್ ಸಂಭ್ರಮ. ದೇಶದೆಲ್ಲೆಡೆ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಬಾಲಿವುಡ್ ನಟ-ನಟಿಯರು ಕೂಡ ಹಬ್ಬದ ಖುಷಿಯಲ್ಲಿದ್ದಾರೆ. ರಂಜಾನ್ ಹಬ್ಬದಂದು ಬಾಲಿವುಡ್ ಬಾದ್ ಶಾ ಶಾರುಕ್ ಅಭಿಮಾನಿಗಳ ಮುಂದೆ ಬರದಿರಲು ಸಾಧ್ಯವೇ ಇಲ್ಲ. ಪ್ರತಿವರ್ಷದಂತೆ ಈ ವರ್ಷವೂ ಶಾರುಕ್ ಖಾನ್ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ.
ಈ ಬಾರಿ ಶಾರುಕ್ ಜೊತೆ ಅವರ ಕಿರಿಯ ಮಗ ಅಬ್ರಾಮ್ ಕೂಡ ಅಭಿಮಾನಿಗಳನ್ನು ಭೇಟಿಯಾಗಿದ್ದಾನೆ. ಶಾರುಕ್ ಜೊತೆ ಬಂದ ಅಬ್ರಾಮ್ ಅಪ್ಪನ ಸ್ಟೈಲ್ ನಲ್ಲಿಯೇ ಅಭಿಮಾನಿಗಳಿಗೆ ಸೆಲ್ಯೂಟ್ ಮಾಡಿದ್ದಾನೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಪ್ಪನಿಗಿಂತ ಮುದ್ದಾಗಿರುವ ಅಬ್ರಾಮ್ ಎಂದ್ರೆ ಶಾರುಕ್ ಗೆ ಪಂಚ ಪ್ರಾಣ. ಸಾಕಷ್ಟು ಸಮಯವನ್ನು ಮಗನ ಜೊತೆ ಕಳೆಯುವ ಶಾರುಕ್, ಎಲ್ಲಿ ಹೋದ್ರು ಮಗನನ್ನು ಕರೆದುಕೊಂಡು ಬರ್ತಾರೆ.