ಕೆಲವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಜ್ಯೋತಿಷ್ಯದ ಪ್ರಕಾರ ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಬುದ್ಧಿವಂತ ಹಾಗೂ ವ್ಯವಹಾರ ಚತುರರಾಗಿರುತ್ತಾರಂತೆ. ಆದ್ರೆ ವಿಜ್ಞಾನ ಬೇರೆಯದನ್ನೇ ಹೇಳುತ್ತದೆ.
ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಗಂಭೀರ ಸಮಸ್ಯೆಯಿಂದ ಬಳಲುತ್ತಾರಂತೆ. ಅಧ್ಯಯನದ ಪ್ರಕಾರ ಕಿವಿಯಲ್ಲಿ ಕೂದಲು ಬೆಳೆದಿರುವವರು ಹೃದಯ ರೋಗದಿಂದ ಬಳಲ್ತಾರಂತೆ. ಅವರಿಗೆ ಎಂದು, ಯಾವಾಗ ಬೇಕಾದ್ರೂ ಹೃದಯಾಘಾತವಾಗುವ ಸಂಭವವಿದೆಯಂತೆ.
ಬದಲಾಗುತ್ತಿರುವ ಲೈಫ್ ಸ್ಟೈಲ್ ನಿಂದಾಗಿ ಹೃದಯಾಘಾತ ಕಾಣಿಸಿಕೊಳ್ತಾ ಇದೆ. ಆದ್ರೆ ಸಿಗರೇಟ್ ಸೇದುವವರಲ್ಲಿ ಇದರ ಪ್ರಮಾಣ ಜಾಸ್ತಿ ಇರುತ್ತದೆ. ಕಿವಿ ಹಾಗೂ ಹೃದಯಾಘಾತಕ್ಕೆ ಹತ್ತಿರದ ಸಂಬಂಧವಿದೆ. ಹಾಗಾಗಿ ನಿಮ್ಮ ಕಿವಿಯಲ್ಲೂ ಕೂದಲು ಬೆಳೆಯುತ್ತಿದ್ದರೆ ಈಗಲೇ ಎಚ್ಚರಿಕೆಯಿಂದಿರಿ.