ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಮಹಿಳೆಯೊಬ್ಬಳು ಐದು ಗಂಡಂದಿರನ್ನು ಹೊಂದಿದ್ದಾಳೆ. ಹಳೆ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವ ಈ ಕುಟುಂಬದಲ್ಲಿ ಐದು ಸಹೋದರರಿಗೆ ಒಬ್ಬಳೆ ಹೆಂಡತಿ.
ಉತ್ತರ ಭಾರತದ ಹಿಮಾಲಯದ ಸುತ್ತಮುತ್ತ ವಾಸಿಸುವ ಹಾಗೂ ಟಿಬೆಟ್ ನಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ರಾಜೋ ವರ್ಮಾ ಎಂಬಾಕೆ 7 ವರ್ಷಗಳ ಹಿಂದೆ ಗುಡ್ಡುವನ್ನು ಮದುವೆಯಾಗಿದ್ದಳು. ನಂತ್ರ 32 ವರ್ಷದ ಬೈಜು, 28 ವರ್ಷದ ಸಂತ ರಾಮ್, 26 ವರ್ಷದ ಗೋಪಾಲ್, 19 ವರ್ಷದ ದಿನೇಶ್ ನನ್ನು ಮದುವೆಯಾಗಿದ್ದಾಳೆ. ಕೊನೆಯದಾಗಿ ದಿನೇಶ್ ನನ್ನು ಮದುವೆಯಾಗಿದ್ದಾಳೆ ರಾಜೋ. ಆತನಿಗೆ 18 ಮುಗಿಯುತ್ತಿದ್ದಂತೆ ಮದುವೆ ಮಾಡಲಾಗಿದೆ.
ಒಂದೊಂದು ರಾತ್ರಿ ಒಬ್ಬೊಬ್ಬ ಪತಿಯ ಜೊತೆಗಿರ್ತಾಳಂತೆ ರಾಜೋ. ಅಣ್ಣ-ತಮ್ಮಂದಿರ ನಡುವೆ ಅಸೂಯೆ ಇಲ್ಲ. ಸಂತೋಷದಿಂದ ಬದುಕುತ್ತಿದ್ದೇವೆ ಎನ್ನುತ್ತಾನೆ ಮೊದಲ ಪತಿ ಗುಡ್ಡು. ರಾಜೋ ಅಮ್ಮ ಕೂಡ ಮೂರು ಪತಿಯರನ್ನು ಹೊಂದಿದ್ದಳಂತೆ. ಹಾಗಾಗಿ ತಾನೂ ಈ ಪದ್ಧತಿಯನ್ನು ಅನುಸರಿಸಬೇಕೆಂಬುದು ರಾಜೋಗೆ ಮೊದಲೇ ತಿಳಿದಿತ್ತಂತೆ. ಒತ್ತಡ ಸ್ವಲ್ಪ ಜಾಸ್ತಿ ಇರುತ್ತದೆ, ಆದ್ರೆ ಅಪಾರ ಪ್ರಮಾಣದಲ್ಲಿ ಪ್ರೀತಿ ಸಿಗುತ್ತೆ ಎನ್ನುತ್ತಾಳೆ ರಾಜೋ.