Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಕೇರಳದಲ್ಲಿ ನಾಳೆ, ಎಲ್ಲೆಡೆ ನಾಡಿದ್ದು ರಂಜಾನ್ ಆಚರಣೆ

$
0
0
ಕೇರಳದಲ್ಲಿ ನಾಳೆ, ಎಲ್ಲೆಡೆ ನಾಡಿದ್ದು ರಂಜಾನ್ ಆಚರಣೆ

ನವದೆಹಲಿ: 30 ದಿನಗಳ ಉಪವಾಸ ವ್ರತಾಚರಣೆ ಪೂರ್ಣಗೊಂಡಿದ್ದು, ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ದೇಶಾದ್ಯಂತ ಜುಲೈ 7 ರಂದು ಆಚರಿಸಲಾಗುವುದು. ಕೇರಳದಲ್ಲಿ ಜುಲೈ 6 ರಂದು ರಂಜಾನ್ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಮೊದಲಿಗೆ ಕರಾವಳಿಯಲ್ಲಿ ನಾಳೆ ಆಚರಿಸಲು ತೀರ್ಮಾನಿಸಲಾಗಿತ್ತು.

ಕರ್ನಾಟಕ ಚಂದ್ರ ದರ್ಶನ ಸಮಿತಿ ರಾಜ್ಯದಲ್ಲಿ ಗುರುವಾರ ರಂಜಾನ್ ಹಬ್ಬವನ್ನು ಆಚರಿಸಲಾಗುವುದೆಂದು ತಿಳಿಸಿದೆ. ನವದೆಹಲಿಯ ಜಾಮೀಯಾ ಮಸೀದಿ. ಮುಖ್ಯಸ್ಥ ಶಾಯಿ ಇಮಾಮ್ ಅವರು ಜುಲೈ 7 ರಂದು ರಂಜಾನ್ ಹಬ್ಬ ಆಚರಿಸಲಾಗುವುದೆಂದು ಘೋಷಿಸಿದ್ದಾರೆ. ಅದೇ ರೀತಿ ಲಖ್ನೋದ ಚಾಂದ್ ಸಮಿತಿ ಕೂಡ ಜುಲೈ 7 ರಂದು ರಂಜಾನ್ ಆಚರಿಸಲಾಗುವುದೆಂದು ಸ್ಪಷ್ಟಪಡಿಸಿದೆ. ಜುಲೈ 6 ಬದಲಿಗೆ 7 ರಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ರಜೆ ನೀಡಲಾಗುವುದು.

ನಾಳೆ ಕೇಂದ್ರ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಜುಲೈ 7 ರಂದು ರಂಜಾನ್ ಪ್ರಯುಕ್ತ ರಜೆ ಇರುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ. ಕೇರಳದಲ್ಲಿ ಮಾತ್ರ ಜುಲೈ 6 ರಂದು ರಂಜಾನ್ ಆಚರಿಸಲಿದ್ದು, ದೇಶದ ಉಳಿದ ಭಾಗಗಳಲ್ಲಿ ಜುಲೈ 7 ರ ಗುರುವಾರದಂದು ಹಬ್ಬ ಆಚರಿಸಲಾಗುವುದು ಎಂದು ಹೇಳಲಾಗಿದೆ.

ನಾಳೆ ರಾಜ್ಯದ ಶಾಲೆ= ಕಾಲೇಜುಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ಶಾಲಾ, ಕಾಲೇಜು ನಡೆಯಲಿವೆ. ಜುಲೈ 6 ರ ಬದಲಿಗೆ 7 ರಂದು ರಜೆ ಘೋಷಿಸಲಾಗಿದೆ. ಎಲ್ಲಾ ಶಾಲಾ, ಕಾಲೇಜು ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಜೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>