ಸದ್ಯ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಎಂದ ತಕ್ಷಣ ನೆನಪಿಗೆ ಬರುವುದು ಪಿ. ರವಿಶಂಕರ್. ತಮ್ಮ ನಟನೆ ಹಾಗೂ ಧ್ವನಿಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ರವಿಶಂಕರ್ ಮುಂದಿನ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬರುವ ಚಿತ್ರ ‘ನಟರಾಜ ಸರ್ವೀಸ್’ ನಲ್ಲಿ ಮೌಲ್ವಿ ಪಾತ್ರದಲ್ಲಿ ರವಿಶಂಕರ್ ಮಿಂಚಲಿದ್ದಾರೆ. ಪವನ್ ಒಡೆಯರ್ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಶರಣ್ ಜೊತೆ ಮಯೂರಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.
ಚಿತ್ರದ ಶೂಟಿಂಗ್ ಬೆಂಗಳೂರು, ದಾಂಡೇಲಿ ಮತ್ತು ಶಿರಸಿಯಲ್ಲಿ ನಡೆದಿದೆ. ಚಿತ್ರ ಇದೇ ಅಗಸ್ಟ್ ನಲ್ಲಿ ತೆರೆಗೆ ಬರಲಿದೆ.