ಸ್ಯಾಂಡಲ್ ವುಡ್ ಬೇಡಿಕೆಯ ನಟರಲ್ಲಿ ಒಬ್ಬರಾದ ‘ದುನಿಯಾ’ ವಿಜಯ್ ಎರಡನೇ ಮದುವೆಯಾಗಿದ್ದು, ‘ಜಸ್ಟ್ ಮಾತ್ ಮಾತಲ್ಲಿ ಖ್ಯಾತಿಯ ಕೀರ್ತಿ ಅವರನ್ನು ವರಿಸಿದ್ದಾರೆ ಎಂದು ಹೇಳಲಾಗಿದೆ.. ಕೆಲ ವರ್ಷಗಳಿಂದ ಕೀರ್ತಿ ಹಾಗೂ ವಿಜಯ್ ಪ್ರೀತಿಸಿದ್ದು, ಮನೆಯವರ ಒಪ್ಪಿಗೆ ಪಡೆದುಕೊಂಡೇ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮೂವರು ಮಕ್ಕಳನ್ನು ಹೊಂದಿರುವ ವಿಜಯ್ ಮೊದಲ ಪತ್ನಿ ನಾಗರತ್ನ ಅವರೊಂದಿಗೆ ಕೆಲಕಾಲ ದೂರವಾಗಿದ್ದರು. ಪ್ರಕರಣ ಕೋರ್ಟ್ ವರೆಗೂ ಹೋಗಿ, ನಂತರದಲ್ಲಿ ಪತಿ, ಪತ್ನಿ ಒಂದಾಗಿದ್ದರು. ವಿಜಯ್ ಹಾಗೂ ನಾಗರತ್ನ ದಂಪತಿ ಅನ್ಯೋನ್ಯವಾಗಿಯೇ ಇದ್ದು, ನಾಗರತ್ನ ಅವರ ಒಪ್ಪಿಗೆ ಪಡೆದುಕೊಂಡೇ ವಿಜಯ್ ಅವರು ಕೀರ್ತಿಯನ್ನು ಮದುವೆಯಾಗಿದ್ದಾರೆ. ವಿಜಯ್ ಎರಡನೇ ಮದುವೆಗೆ ಮನೆಯವರೆಲ್ಲರ ಒಪ್ಪಿಗೆ ಕೂಡ ಸಿಕ್ಕಿದೆ ಎಂದು ಹೇಳಲಾಗಿದೆ.
ತಮ್ಮ ಮದುವೆ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಅವರು, ಒಂದೂವರೆ ವರ್ಷದ ಹಿಂದೆಯೇ ಮದುವೆಯಾಗಿದ್ದೇವೆ. ಒಂದು ಮಗು ಕೂಡ ಇದೆ ಎಂದು ತಿಳಿಸಿದ್ದಾರೆ. ನಮ್ಮ ಮನೆಯಲ್ಲಿ ಒಪ್ಪಿಗೆ ಪಡೆದೇ ಮದುವೆಯಾಗಿದ್ದೇನೆ. ಎಲ್ಲರೂ ಚೆನ್ನಾಗಿದ್ದೇವೆ. ನನಗೆ ನಾಗರತ್ನ ಅವರ ಮೇಲೆಯೂ ಅಪಾರ ಗೌರವ ಇದೆ ಎಂದು ಹೇಳಿದ್ದಾರೆನ್ನಲಾಗಿದೆ.