ಟಿ.ವಿ. ಯಲ್ಲಿ ಬರುವ ಜಾಹೀರಾತನ್ನು ನೋಡಿದ ವ್ಯಕ್ತಿಯೊಬ್ಬರು ಆನ್ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದು, ಆದರೆ ಅವರಿಗೆ ಮೊಬೈಲ್ ಬದಲು ಉರ್ದು ಮಾಸಪತ್ರಿಕೆ ಬಂದಿದೆ.
ಮಧ್ಯಪ್ರದೇಶದ ಬಡವಾನಿ ನಿವಾಸಿ ನಿಲೇಶ್ ಗುಪ್ತಾ, ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಟಿ.ವಿ. ಜಾಹೀರಾತನ್ನು ನೋಡಿದ ಇವರು, ಜೂನ್ 22 ರಂದು ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದರು. ಅದರಲ್ಲಿ ಕ್ಯಾಶ್ ಆನ್ ಡಿಲೆವರಿ ರೂಪದ ಹಣ ಪಾವತಿಯಿದ್ದುದರಿಂದ ಅವರು ಮೊದಲು ದುಡ್ಡು ಕೊಡಲಿಲ್ಲ. ನಂತರ ಅವರಿಗೆ ಜುಲೈ 2ರಂದು ಬಡವಾನಿ ಪೋಸ್ಟ್ ಆಫೀಸಿಗೆ ಪಾರ್ಸಲ್ ಬರುತ್ತದೆಂದು ಸಂದೇಶ ಸಿಕ್ಕಿತು.
ಸಂದೇಶದ ಪ್ರಕಾರ ನಿಲೇಶ್ ಜುಲೈ 2 ರಂದು ಪೋಸ್ಟ್ ಆಫೀಸಿಗೆ ಹೋಗಿ 4398 ರೂಪಾಯಿ ಕೊಟ್ಟು ಪಾರ್ಸಲ್ ತೆಗೆದುಕೊಂಡುಬಂದರು. ಮನೆಗೆ ಬಂದು ಪಾರ್ಸಲ್ ತೆರೆದರೆ ಅದರೊಳಗೆ ನವದೆಹಲಿಯಿಂದ ಪ್ರಕಟಗೊಳ್ಳುವ ಉರ್ದು ಮ್ಯಾಗಜೀನ್ ಮತ್ತು ಇತರ ರದ್ದಿ ಪೇಪರುಗಳಿದ್ದವು ಎನ್ನಲಾಗಿದೆ.