ಮಾದಕ ವಸ್ತು ಸೇವನೆ, ಸಾಗಾಣೆ, ಮಾರಾಟ ಅಪರಾಧವಾಗಿದ್ದರೂ, ಗಾಂಜಾ ಎ.ಟಿ.ಎಂ. ಸ್ಥಾಪನೆಗೆ ಸರ್ಕಾರವೇ ಮುಂದಾಗಿದೆ. ಇನ್ನು ಮುಂದೆ ಮಾದಕ ವ್ಯಸನಿಗಳು ತಮಗೆ ಬೇಕೆನಿಸಿದಾಗ, ಗಾಂಜಾ ಸೇವಿಸಬಹುದಾಗಿದೆ. ಏನಿದು ಸ್ಟೋರಿ ಎಂಬುದನ್ನು ತಿಳಿಯಲು ಮುಂದೆ ಓದಿ.
ಜಮೈಕಾದಲ್ಲಿ ಗಾಂಜಾ ಎ.ಟಿ.ಎಂ. ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಜಮೈಕಾದಲ್ಲಿ ಈಗಾಗಲೇ ಗಾಂಜಾ ಮಾರಾಟ, ಸಾಗಾಣೆ ಮತ್ತು ಸೇವನೆ ಅಪರಾಧವಲ್ಲ ಎಂಬ ನಿಯಮವನ್ನು ಕಳೆದ ಫೆಬ್ರವರಿಯಲ್ಲಿಯೇ ಜಾರಿಗೆ ತರಲಾಗಿದೆ. ಇದರ ಮುಂದುವರೆದ ಭಾಗವಾಗಿ ಜಮೈಕಾ ಆಡಳಿತ, ಬಂದರು, ವಿಮಾನ ನಿಲ್ದಾಣಗಳ ಸಮೀಪ ಗಾಂಜಾ ಎ.ಟಿ.ಎಂ. ಸ್ಥಾಪಿಸಲಿದೆ. ನಾಗರೀಕರಿಗೆ ಹಾಗೂ ಪ್ರವಾಸಿಗರಿಗೆ ಗಾಂಜಾ ಪೂರೈಕೆ ಮಾಡುವ ನಿಟ್ಟಿನಲ್ಲಿ ಎ.ಟಿ.ಎಂ. ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
ಜಮೈಕಾದಲ್ಲಿ ಹೆಚ್ಚಾಗಿ ಗಾಂಜಾ ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮಾರುಕಟ್ಟೆ ಒದಗಿಸಲು ಆಡಳಿತ ಮುಂದಾಗಿದ್ದು, ಉತ್ಪಾದನೆ ಮತ್ತು ಮಾರಾಟಕ್ಕೆ ಕಾಯ್ದೆ ರೂಪಿಸಲಾಗಿದೆ. ಪ್ರವಾಸಿಗರು, ನಾಗರಿಕರಿಗೆ ಸುಲಭವಾಗಿ ಗಾಂಜಾ ಸಿಗಲೆಂದು ಎ.ಟಿ.ಎಂ ಸ್ಥಾಪನೆ ಮಾಡಲಾಗುವುದು.