ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯ ಭೂ ಸುರಂಗ ಸ್ಫೋಟದ ವೇಳೆ ಮೋಶಾ ಒಂದು ಕಾಲು ಕಳೆದುಕೊಂಡಿದ್ದ. ಆಗ ಆತನಿಗೆ ಏಳು ತಿಂಗಳಾಗಿತ್ತು. ಈಗ ಮೋಶಾಗೆ 9 ತಿಂಗಳು. ಒಂದು ಕಾಲು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದ ಮೋಶಾ ಈಗ ಖುಷಿಯಾಗಿದ್ದಾನೆ. ಇದಕ್ಕೆ ಕಾರಣ ಆತನಿಗೆ ಮತ್ತೆ ಕಾಲು ಬಂದಿದೆ.
ಯಸ್, ಮೋಶಾನಿಗೆ ಕೃತಕ ಕಾಲನ್ನು ಅಳವಡಿಸಲಾಗಿದೆ. ಕಾಲು ಕಳೆದುಕೊಂಡ ನಂತ್ರ ಮೋಶಾ ಅನಾರೋಗ್ಯದಿಂದ ಬಳಲುತ್ತಿದ್ದ. ಈಗ ಆತನ ಆರೋಗ್ಯ ಸುಧಾರಿಸಿದೆ. ಈತನ ಜೊತೆ ಈತನ ಸ್ನೇಹಿತ ಮೊಟ್ಟೊಲಾ ಕೂಡ ಇಂತಹದ್ದೇ ಒಂದು ಘಟನೆಯಲ್ಲಿ ಕಾಲು ಕಳೆದುಕೊಂಡಿದ್ದ. ಆತನಿಗೆ ಕೂಡ ಕೃತಕ ಕಾಲನ್ನು ಅಳವಡಿಸಲಾಗಿದೆ.
ಕಾಡಿನಲ್ಲಿ ಕೆಲಸ ಮಾಡುವ ವೇಳೆ ಅನೇಕ ಆನೆಗಳು ಕಾಲು ಕಳೆದುಕೊಳ್ಳುತ್ತವೆ ಎನ್ನುತ್ತಾರೆ ಏಷ್ಯನ್ ಫ್ರೆಂಡ್ಸ್ ಪೌಂಡೇಶನ್ ಕಾರ್ಯಕರ್ತರು. ಸದ್ಯ ಇಬ್ಬರಿಗೂ ನಕಲಿ ಕಾಲುಗಳನ್ನು ಅಳವಡಿಸಲಾಗಿದ್ದು, ಇಬ್ಬರೂ ಎರಡು ಕಾಲುಗಳ ಮೇಲೆ ನಿಲ್ಲಲು ಶಕ್ತರಾಗಿದ್ದಾರೆ.