Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ದ್ವೀಪ ಹಲಸು ಎಂಬುದೊಂದಿದೆ ಗೊತ್ತಾ..?

$
0
0
ದ್ವೀಪ ಹಲಸು ಎಂಬುದೊಂದಿದೆ ಗೊತ್ತಾ..?

ಹಲಸಿನ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಇದರಲ್ಲಿ ಹೆಬ್ಬಲಸು, ಬೇರಲಸು ಎಂಬ ಎರಡು ಮೂರು ವಿಧಗಳಿರುವುದು ಗೊತ್ತು. ಆದರೆ ಹಲಸಿನ ಜಾತಿಗೆ ಸೇರಿದ ಇನ್ನೊಂದು ಹಣ್ಣಿದೆ ಎಂಬುದು ಹಲವರಿಗೆ ಗೊತ್ತಿಲ್ಲ.

ದಕ್ಷಿಣ ಶಾಂತಸಾಗರ ದ್ವೀಪದಲ್ಲಿ  ಒಂದು ಬಗೆಯ ಹಲಸಿನ ಮರ ಕಂಡುಬರುತ್ತದೆ ಇದಕ್ಕೆ ದ್ವೀಪ ಹಲಸು (bread fruit) ಎಂದು ಕರೆಯುತ್ತಾರೆ. ನೋಡಲು ಸುಂದರವಾಗಿ ಕಾಣುವ ಈ ಹಲಸಿನ ಮರದಲ್ಲಿ ಎರಡು ಜಾತಿ ಇದೆ. ಆ ಪೈಕಿ ಒಂದರಲ್ಲಿ ಬೀಜಗಳು ಇರುವುದಿಲ್ಲ. ಇನ್ನೊಂದು ಜಾತಿ ಬೀಜಗಳಿಂದ ತುಂಬಿರುತ್ತದೆ.

ಈ ಹಲಸನ್ನು ಹಸಿಯಾಗಿ ತಿನ್ನುವುದಿಲ್ಲವಂತೆ. ಬೇಯಿಸಿದಾಗ ಅಥವಾ ಹುರಿದಾಗ ಅವರು ಚೀಸ್ ನಟ್ ಗಳಂತೆಯೇ ರುಚಿಯಾಗಿರುತ್ತವೆ. ಇದರಲ್ಲಿ ಪಿಷ್ಠದ ಪ್ರಮಾಣ ಹೇರಳವಾಗಿರುತ್ತದೆ. ಈ ಮರ ಶೀತವನ್ನು ತಡೆದುಕೊಳ್ಳುವುದಿಲ್ಲ.

ದ್ವೀಪ ಹಲಸಿನ ಒಳಭಾಗದ ತೊಗಟೆಯ ನಾರಿನಿಂದ ಬಟ್ಟೆಯನ್ನು ತಯಾರಿಸುತ್ತಾರೆ. ಈ ಬಟ್ಟೆಗೆ ‘ಸೌತ್ ಸೀಸ್ ಕ್ಲಾತ್’ ಎಂದು ಹೆಸರು. ಇದರ ಹೊರತಾಗಿ ಈ ಮರ, ಪೀಠೋಪಕರಣ ಮತ್ತು ರಾಳವನ್ನು ತಯಾರಿಸಲು ಉಪಯೋಗವಾಗುತ್ತದೆ


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>