ರಕ್ಷಕರೇ ಭಕ್ಷಕರಂತೆ ವರ್ತಿಸಿದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಊಟದ ವಿಚಾರಕ್ಕೆ ದೆಹಲಿ ಪೊಲೀಸರು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಹೊಟೇಲ್ ಮಾಲೀಕ ಉಚಿತವಾಗಿ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಹಲ್ಲೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೊಟೇಲ್ಲೊಂದಕ್ಕೆ ಬಂದ ಮೂವರು ಪೊಲೀಸರು ಊಟವನ್ನು ಪ್ಯಾಕ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಹೊಟೇಲ್ ಮಾಲೀಕ ಹಣ ಕೇಳಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ರೆ ಪೊಲೀಸರ ಈ ಕೃತ್ಯವನ್ನು ಗ್ರಾಹಕರು ವಿರೋಧಿಸಿದ್ದಾರೆ. ಪೊಲೀಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.