ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಈಗಾಗಲೇ ಅನೇಕ ಹೈ ಸ್ಪೀಡ್ ರೈಲುಗಳ ಯೋಜನೆ ಹಾಕಿದೆ. ಇದರ ಜೊತೆಗೆ ಈಗ ರೈಲ್ವೆ ನಿಲ್ದಾಣಗಳಿಗೂ ಹೊಸತನ ತುಂಬುವ ಉದ್ದೇಶ ಇಟ್ಟುಕೊಂಡಿದೆ.
ಹಾಗಾಗಿ ಇನ್ನು ರೈಲ್ವೆ ನಿಲ್ದಾಣಗಳು ಎಂದಿನಂತೆ ಕಸ, ಕೊಳಕು, ನೂಕುನುಗ್ಗಲಿನಿಂದ ತುಂಬಿಹೋಗುವುದಿಲ್ಲ. ಈ ಹೊಸ ನಿರ್ಮಾಣ 12 ನಿಲ್ದಾಣಗಳಲ್ಲಿ ಆರಂಭವಾಗಲಿದೆ. ಇದಕ್ಕೆ ಯಾವ ಯಾವ ನಿಲ್ದಾಣಗಳು ಸೇರಿಕೊಳ್ಳಲಿವೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.
ರೈಲಿನಿಂದ ತೆರಳುವ ಪ್ರಯಾಣಿಕರಿಗೆ ಹಾಗೂ ರೈಲಿಗೆ ಹತ್ತುವ ಪ್ರಯಾಣಿಕರಿಗೆ ಬೇರೆ ಬೇರೆ ಟರ್ಮಿನಲ್ ವ್ಯವಸ್ಥೆ ಇರಲಿದೆ. ಇದರಿಂದ ಜನರ ನೂಕುನುಗ್ಗಲು ಕಡಿಮೆಯಾಗಲಿದೆ. ಪ್ರತಿ ರೈಲ್ವೆ ನಿಲ್ದಾಣದಲ್ಲೂ 1 ಸಾವಿರ ವಾಹನಗಳ ಪಾರ್ಕಿಂಗ್, ಟಿಕೆಟ್ ಕೌಂಟರ್, ಶಾಪಿಂಗ್ ಮಾಲ್, ಚಿಕಿತ್ಸಾಲಯಗಳು, ಹೊಟೇಲ್, ವಿಶ್ರಾಂತಿ ಕೋಣೆ, ಥಿಯೇಟರ್ ಹಾಗೂ ಹೆಲಿಪ್ಯಾಡ್ ಕೂಡ ಇರಲಿದೆ. ಈ ನಿಲ್ದಾಣದ ವೆಚ್ಚ 100 ರಿಂದ 350 ಕೋಟಿ ರೂ. ಆಗಬಹುದೆಂದು ಅಂದಾಜಿಸಲಾಗಿದೆ.