ರಾಜಸ್ತಾನದ ಜೋಧಪುರದಲ್ಲಿ ಗಾಬರಿಯಾಗುವಂತಹ ಘಟನೆಯೊಂದು ನಡೆದಿದೆ. ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಂಜಿನಿಯರ್ ಆತ್ಮಹತ್ಯೆ ನಂತ್ರ ಪತ್ನಿ ವಿರುದ್ಧ ದೂರು ದಾಖಲಾಗಿದೆ.
ಆರು ವರ್ಷಗಳ ಹಿಂದೆ ಎಂಜಿನಿಯರ್ ಮದುವೆಯಾಗಿತ್ತು. ಮದುವೆ ನಂತ್ರ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇರಲಿಲ್ಲ. ಗಂಡನ ಜೊತೆಗಿರುವುದಕ್ಕಿಂತ ಜಾಸ್ತಿ ಪತ್ನಿ, ಅಮ್ಮನ ಮನೆಯಲ್ಲಿರುತ್ತಿದ್ದಳು. ಆಕೆಯ ಕಿರುಕುಳಕ್ಕೆ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಸಾವಿಗೆ ಯಾರು ಕಾರಣ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಪತ್ನಿ ಆಕೆಯ ತಾಯಿ ಹಾಗೂ ಸಹೋದರ 15 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರು. ಹಣ ನೀಡದಿದ್ದಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ತನ್ನ ನೋವು ತೋಡಿಕೊಂಡಿದ್ದಾನೆ ಎಂಜಿನಿಯರ್.
ಇದಲ್ಲದೆ, ಎಲ್ಲ ಮಹಿಳೆಯರು ಮುಗ್ಧರಾಗಿರುವುದಿಲ್ಲ. ಮಹಿಳೆಯರ ಹಾಗೆ ಪುರುಷರಿಗೆ ಕೂಡ ರಕ್ಷಣಾ ಕಾನೂನು ರಚನೆಯಾಗಬೇಕೆಂದು ಪತ್ರದಲ್ಲಿ ಬರೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.