Quantcast
Channel: Latest News | Kannada Dunia | Kannada News | Karnataka News | India News
Viewing all 90268 articles
Browse latest View live

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದು ಯಾವಾಗ ಗೊತ್ತಾ?

$
0
0

ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಹುದ್ದೆಗೇರಲು ಪೈಪೋಟಿ ನಡೆದಿದೆ. ರಾಜ್ಯದಲ್ಲಿ ಕಾರಣಾಂತರದಿಂದ ಹಲವು ಬಾರಿ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

ಭಾರತದ ಸಂವಿಧಾನದ 356 ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ. ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಮುಖ್ಯಮಂತ್ರಿ ನೇಮಕದಲ್ಲಿ ವಿಫಲವಾದ ಸಂದರ್ಭ, ಮೈತ್ರಿಕೂಟಗಳಲ್ಲಿ ಬಿರುಕು ಉಂಟಾದಾಗ, ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಿದಾಗ, ರಾಜಕೀಯ ಅಸ್ಥಿರತೆ ಉಂಟಾದಾಗ, ರಾಜ್ಯ ಸರ್ಕಾರ ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸಿದರೆ, ಕಾನೂನು ಸುವ್ಯವಸ್ಥೆ ಕುಸಿದ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ.

19 ಮಾರ್ಚ್, 1971 ರಿಂದ 20 ಮಾರ್ಚ್, 1972 ರ ವರೆಗೆ 1 ವರ್ಷ 1 ದಿನ ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಇತ್ತು. ನಂತರದಲ್ಲಿ 31 ಡಿಸೆಂಬರ್ 1977 ರಿಂದ, 28 ಫೆಬ್ರವರಿ 1978 ರ ವರೆಗೆ 59 ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

ಅದೇ ರೀತಿ 21 ಏಪ್ರಿಲ್, 1989 ರಿಂದ 30 ನವೆಂಬರ್, 1989 ರ ವರೆಗೆ 193 ದಿನಗಳ ಕಾಲ ಮತ್ತು 10 ಅಕ್ಟೋಬರ್, 1990 ರಿಂದ 17 ಅಕ್ಟೋಬರ್, 1990 ರ ವರೆಗೆ 7 ದಿನಗಳ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.

9 ಅಕ್ಟೋಬರ್, 2007 ರಿಂದ 27 ಮೇ, 2008 ರ ವರೆಗೆ 189 ದಿನಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸಲಾಗಿದೆ.


ತಿನ್ನೋದ್ರಲ್ಲೇ ವಿಶ್ವದಾಖಲೆ ಬರೆದಿದ್ದಾನೆ ಭೂಪ…!

$
0
0

ಕೆಲವೊಬ್ಬರಿಗೆ ಕೆಲವೊಂದು ಸಂಗತಿಗಳು ಇಷ್ಟ. ಕೆಲವರಿಗೆ ನಿದ್ದೆ, ಕೆಲವರಿಗೆ ಕೆಲಸ, ಕೆಲವರಿಗೆ ಓದು, ಇನ್ನೂ ಕೆಲವರಿಗೆ ತಿನ್ನುವುದು. ಹೌದು….ನಮ್ಮಲ್ಲಿ ಅನೇಕರಿಗೆ ತಿನ್ನೋದು ಅಂದ್ರೆ ತುಂಬಾ ಇಷ್ಟ. ಇಲ್ಲೊಬ್ಬ ವ್ಯಕ್ತಿ ತಿನ್ನೋದ್ರಲ್ಲೇ ವಿಶ್ವದಾಖಲೆ ಬರೆದಿದ್ದಾನೆ.

ವಿಸ್ಕೊಸಿನ್ ಸೆರೆಮನೆಯ ನಿವೃತ್ತ ಸಿಬ್ಬಂದಿ, 64 ವರ್ಷದ ಡಾನ್ ಗೋರ್ಗ್ಸೆ ಎಂಬಾತ ಕಳೆದ ಶುಕ್ರವಾರ 30 ಸಾವಿರನೇಯ ಮ್ಯಾಕ್ ಡೋನಾಲ್ಡ್ ನ ದೊಡ್ಡ ಬರ್ಗರ್ ತಿಂದು ಮುಗಿಸಿ ದಾಖಲೆ ಬರೆದಿದ್ದಾನೆ. ಹಲವಾರು ದಶಕಗಳಿಂದಲೂ ಆತ ಮ್ಯಾಕ್ ನ ಬರ್ಗರ್ ಪ್ರಿಯ. ಆತನಿಗೆ ಹಮ್ ಬರ್ಗರ್ ಎಷ್ಟು ಪ್ರೀತಿಯೆಂದರೆ 1972 ರಿಂದ ಪ್ರತಿದಿನವೂ ಆತ ಬರ್ಗರ್ ತಿನ್ನುತ್ತಿದ್ದ. ಬರ್ಗರ್ ಕೊಂಡು ತಂದ ಬಹುತೇಕ ಬಾಕ್ಸ್ ಅಥವಾ ರಶೀದಿಗಳನ್ನು ಆತ ಸಂಗ್ರಹಿಸಿಟ್ಟಿದ್ದ.

2016 ರಲ್ಲೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಈತನ ಕಾರ್ಯವನ್ನು ಗುರುತಿಸಿತ್ತು. ಆಗ ಆತ ತಿಂದಿದ್ದ ಬರ್ಗರ್ ಗಳ ಸಂಖ್ಯೆ 28788 ಆಗಿತ್ತು. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಆತನಿಗೆ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡ ಸಮಸ್ಯೆಯೂ ಇಲ್ಲವಂತೆ.

ಪುಟ್ಟ ಮಗುವನ್ನು ಕಂಡು ಆನಂದಭಾಷ್ಪ ಸುರಿಸಿದ ವೈದ್ಯೆ

$
0
0

ಕೇರಳದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಶ್ರೀಲಂಕಾದಲ್ಲಿ ನೆಲಸಿರುವ ಆರು ವರ್ಷದ ಶ್ರೀಮಲ್ಲಿ ಬಾಲಸೂರ್ಯ ಎಂಬ ಬಾಲಕಿ ನೋಡಿ ಕೇರಳದ ವೈದ್ಯೆ ಕಣ್ಣಲ್ಲಿ ಆನಂದಬಾಷ್ಟ ಸುರಿದಿದೆ.

ಕಾರಣ ಡಾ. ಕಣ್ಮಣಿ ಕಣ್ಣನ್ ಒಂದು ರೀತಿಯಲ್ಲಿ ಶ್ರೀಮಲ್ಲಿಗೆ ಮರುಜನ್ಮ ನೀಡಿದ ತಾಯಿ. ಹೌದು ಶ್ರೀಮಲ್ಲಿ ಹುಟ್ಟಿದ 2 ತಿಂಗಳಿಗೆ ಥಲಸ್ಸೆಮಿಯಾ ಎಂಬ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದಳು. ಹೀಗಾಗಿ ಮಗುವಿಗೆ ಪ್ರತಿ ಎರಡು ವಾರಕ್ಕೊಮ್ಮೆ ರಕ್ತ ವರ್ಗಾವಣೆ ಮಾಡಬೇಕಿತ್ತು. ಈ ವೇಳೆ ಆ ಎಳೆ ಕಂದನಿಗೆ ನೆರವಾಗಿದ್ದು, ಡಾ. ಕಣ್ಮಣಿ ಕಣ್ಣನ್.

ಈ ವೈದ್ಯೆ ತನ್ನ ಸ್ಟೆಮ್ ಸೆಲ್ ಗಳನ್ನು ದಾನ ಮಾಡಿ ಆ ಮಗುವಿನ ಜೀವ ಉಳಿಸಿದ್ದರು. ಆರು ವರ್ಷದ ಬಳಿಕ ಆ ಮಗುವನ್ನು ಭೇಟಿಯಾಗುವ ಸುಯೋಗ ಡಾ. ಕಣ್ಮಣಿಗೆ ಒದಗಿ ಬಂತು. ಮೆಡಿಕಲ್ ಇನ್ಸಿಟಿಟ್ಯೂಟ್ ಒಂದು ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಮಲ್ಲಿ ಕುಟುಂಬವೂ ಭಾಗವಹಿಸಿತ್ತು.

ಇಲ್ಲಿ ವೈದ್ಯೆ ಕಣ್ಮಣಿಗೆ ತಾನು ಸ್ಟೆಮ್ ಸೆಲ್ ದಾನ ಮಾಡಿದ ಮಗುವನ್ನು ನೋಡಿದ ತಕ್ಷಣ ಆನಂದಕ್ಕೆ ಪಾರವೇ ಇರಲಿಲ್ಲ. ಆ ನೆನಪನ್ನ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಇದು ನನ್ನ ಜೀವನದ ಗೋಲ್ಡನ್ ಎಕ್ಸ್ ಪೀರಿಯನ್ಸ್ ಅಂತಾ ಹೇಳ್ತಾರೆ.

ನಾಪತ್ತೆಯಾಗಿದ್ದ ಫರಾನ್ ಮಾಜಿ ಪತ್ನಿಯ ಮ್ಯಾನೇಜರ್ ಕೊಲೆ ರಹಸ್ಯ ಬಯಲು

$
0
0

ನಿರ್ದೇಶಕ, ನಿರ್ಮಾಪಕ ಹಾಗೂ ಬಾಲಿವುಡ್ ನಟ ಫರಾನ್ ಅಖ್ತರ್ ಮಾಜಿ ಪತ್ನಿ ಅದುನಾ ಸಲೂನ್ ಬಿ ಬ್ಲಂಟ್ ಮ್ಯಾನೇಜರ್ ಕಾರ್ತಿ ವ್ಯಾಸ್ ಎರಡು ತಿಂಗಳಿಂದ ನಾಪತ್ತೆಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಕಾರ್ತಿ ಸಾವನ್ನಪ್ಪಿದ್ದಾಳೆಂಬ ಮಾಹಿತಿ ನೀಡಿದ್ದಾರೆ.

24 ವರ್ಷದ ಕಾರ್ತಿ ವ್ಯಾಸ್ ಕೊಲೆಯಾಗಿದೆಯಂತೆ. ಕಾರ್ತಿ ಜೊತೆ ಕೆಲಸ ಮಾಡುವ ಇಬ್ಬರು ಸ್ನೇಹಿತರು ಆಕೆಯನ್ನು ಕೊಲೆ ಮಾಡಿದ್ದಾರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಮಹಿಳಾ ಸ್ನೇಹಿತೆ ಕೂಡ ಸೇರಿದ್ದಾಳೆ.

ಮಾರ್ಚ್ 16,2018 ರಂದು ಕಾರ್ತಿ ಕಚೇರಿಗೆ ಬಂದಿರಲಿಲ್ಲ. ಎರಡು ದಿನಗಳ ನಂತ್ರ ದೂರು ದಾಖಲಾಗಿತ್ತು. ವಿಚಾರಣೆ ಕೈಗೊಂಡ ಪೊಲೀಸರಿಗೆ ಸಿಸಿ ಟಿವಿ ದೃಶ್ಯ ಮಾತ್ರ ಆಧಾರವಾಗಿತ್ತು. ಅದ್ರಲ್ಲಿ ಆರೋಪಿಗಳಿಬ್ಬರು ಕಾರ್ತಿಯನ್ನು ಕಾರ್ ಹತ್ತಿಸುತ್ತಿದ್ದರು. ವಿಚಾರಣೆ ವೇಳೆ ಕಾರ್ತಿವ್ಯಾಸ್ ಹೇಳಿಕೆ ಮೇರೆಗೆ ಆಕೆಯನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟಿದ್ದೇವೆ ಎಂದು ಆರೋಪಿಗಳು ಹೇಳಿದ್ದರು. ಮನೆಯವರ ಜೊತೆ ಕಾರ್ತಿ ಹುಡುಕುವ ಯತ್ನ ಕೂಡ ನಡೆಸಿದ್ದರು.

ಪ್ರಕರಣ ಕ್ರೈಂ ಬ್ರ್ಯಾಂಚ್ ಗೆ ಹಸ್ತಾಂತರವಾಗ್ತಿದ್ದಂತೆ ಮೊದಲು ಕಾರ್ ಪರಿಶೀಲನೆ ನಡೆಸಲಾಯ್ತು. ಈ ವೇಳೆ ಕಾರಿನಲ್ಲಿ ರಕ್ತ ಕಂಡಿತ್ತು. ವಿಚಾರಣೆ ಚುರುಕುಗೊಳಿಸಿದ ಪೊಲೀಸರಿಗೆ ಆರೋಪಿ ಯಾರೆಂಬುದು ಗೊತ್ತಾಗಿದೆ. ಕಾರ್ತಿವ್ಯಾಸ್ ಜೊತೆ ಕೆಲಸ ಮಾಡ್ತಿದ್ದ ಸಿದ್ಧಾರ್ಥ ನನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರ ಮಾಡಲಾಗಿತ್ತು. ಸಿದ್ಧಾರ್ಥ ಕೆಲಸದ ಕೊನೆ ದಿನ ಸ್ನೇಹಿತೆ ಖುಷಿ ಜೊತೆ ಸೇರಿ ಈ ಕೆಲಸ ಮಾಡಿದ್ದಾನೆ. ಮೊದಲು ಕಾರ್ತಿ ಕೊಲೆ ಮಾಡಿ ಆಫೀಸ್ ಗೆ ಹೋಗಿದ್ದಾರೆ. ಸಂಜೆ ನಿರ್ಜನ ಪ್ರದೇಶದಲ್ಲಿ ಕಾರ್ತಿ ಶವ ಹೂಳಿದ್ದಾರೆ.

 

ಜಿಯೋ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 1,100 ಜಿಬಿ ಡೇಟಾ

$
0
0

ರಿಲಾಯನ್ಸ್ ಜಿಯೋ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಈಗ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಪಟಾಕಿ ಸಿಡಿಸಲು ಜಿಯೋ ಮುಂದಾಗಿದೆ. ಜಿಯೋ ಶೀಘ್ರವೇ ಫೈಬರ್ ಟು ದಿ ಹೋಮ್ (FTTH) ಫೈಬರ್ ಸರ್ವೀಸ್ ಶುರು ಮಾಡ್ತಿದೆ.

ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 100 ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. 100 ಜಿಬಿ ಡೇಟಾ ಲಿಮಿಟ್ ಮುಗಿದ ಮೇಲೆ ಬಳಕೆದಾರರಿಗೆ ತಿಂಗಳಿಗೆ 25 ಬಾರಿ 40 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಅಂದ್ರೆ ತಿಂಗಳಿಗೆ ಒಟ್ಟು 1,100 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಗ್ರಾಹಕರು ಇದಕ್ಕಾಗಿ 4,500 ರೂಪಾಯಿ ಸೆಕ್ಯೂರಿಟಿ ರೂಪದಲ್ಲಿ ನೀಡಬೇಕಾಗುತ್ತದೆ.

ಟಿವಿ ನೋಡಲು ಗ್ರಾಹಕರಿಗೆ ಒಂದು ಸೆಟ್ ಆಫ್ ಬಾಕ್ಸ್ ಕೂಡ ಜಿಯೋ ನೀಡಲಿದೆ. ಅಂದ್ರೆ ಜಿಯೋ ತರ್ತಿರುವ ಇಂಟರ್ನೆಟ್ ಫ್ರೋಟೋಕಾಲ್ ಟೆಲಿವಿಜನ್ ಸರ್ವಿಸ್ ನಡಿ ಗ್ರಾಹಕರು ಟಿವಿ ಕೂಡ ನೋಡಬಹುದಾಗಿದೆ. ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಜಿಯೋ ತನ್ನ ಫೈಬರ್ ಸರ್ವೀಸ್ ಪ್ರಯೋಗ ಮಾಡ್ತಿದೆ. 2016 ರಿಂದಲೇ ಪರೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಇದನ್ನು ಅಧಿಕೃತವಾಗಿ ಶುರು ಮಾಡುವ ಯೋಜನೆಯನ್ನು ಜಿಯೋ ಹೊಂದಿದೆ.

ಬಾತ್ ಟಬ್ ನಲ್ಲಿ ಬೆತ್ತಲಾಗಿ ಫಿಜಾ ತಿಂತಿದ್ದಾಳೆ ಬೆಡಗಿ

$
0
0

ಹಾಲಿವುಡ್ ಮಾಡೆಲ್ ಪದ್ಮಾ ಲಕ್ಷ್ಮಿ ಫೋಟೋ ಮೂಲಕ ಚರ್ಚೆಗೆ ಬಂದಿದ್ದಾಳೆ. ಬಾತ್ ಟಬ್ ನಲ್ಲಿ ಫಿಜಾ ತಿನ್ನುತ್ತಾ ನ್ಯೂಡ್ ಫೋಟೋಶೂಟ್ ಮಾಡಿಸಿದ್ದಾಳೆ ಪದ್ಮಾಲಕ್ಷ್ಮಿ.

ಫೋಟೋಶೂಟ್ ನ ಎಲ್ಲ ಫೋಟೋಗಳನ್ನು ಪದ್ಮಾ ಲಕ್ಷ್ಮಿ ಇನ್ಸ್ಟ್ರಾಗ್ರಾಮ್ ಗೆ ಅಪ್ಲೋಡ್ ಮಾಡಿದ್ದಾಳೆ. ಪದ್ಮಾಲಕ್ಷ್ಮಿ ಈ ಫೋಟೋಕ್ಕೆ ಈವರೆಗೆ 39 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಮಾಡೆಲ್ ಜೊತೆ ನಟನೆ ಕೂಡ ಮಾಡ್ತಿರುವ ಪದ್ಮಾಲಕ್ಷ್ಮಿ ತನ್ನ ಖಾಸಗಿ ಅಂಗವನ್ನು ಫಿಜಾದಿಂದ ಮುಚ್ಚಿಕೊಂಡಿದ್ದಾಳೆ. ಇನ್ನೊಂದು ಕೈನಲ್ಲಿ ರೆಡ್ ವೈನ್ ಹಿಡಿದಿದ್ದಾಳೆ.

ಫೋಟೋದಲ್ಲಿ ತುಂಬಾ ಹಾಟ್ ಹಾಗೂ ಸೆಕ್ಸಿಯಾಗಿ ಕಾಣ್ತಿದ್ದಾಳೆ ನಟಿ. ಒಂದು ಮಗುವಿನ ತಾಯಿಯಾಗಿರುವ ಪದ್ಮಾಲಕ್ಷ್ಮಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಪದ್ಮಾಲಕ್ಷ್ಮಿ ಹಾಕಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ವಾಟ್ಸ್ ಅಪ್ ಆ್ಯಪ್ ತೆರೆಯದೇ ಮೆಸ್ಸೇಜ್ ಕಳುಹಿಸಬಹುದು ಗೊತ್ತಾ?

$
0
0

ವಾಟ್ಸ್ ಅಪ್ ಗ್ರಾಹಕರಿಗೊಂದು ಖುಷಿ ಸುದ್ದಿ. ವಾಟ್ಸ್ ಅಪ್ ಆ್ಯಪ್ ಓಪನ್ ಮಾಡದೆ ನೀವು ಸಂದೇಶವನ್ನು ಕಳುಹಿಸಬಹುದು. ಆಶ್ಚರ್ಯವಾದ್ರೂ ಇದು ಸತ್ಯ. ಹೊಸ ಫೀಚರ್ ನಿಂದ ಇದು ಸಾಧ್ಯ.

1.3 ಮಿಲಿಯನ್ ಗೂ ಹೆಚ್ಚು ಮಂದಿ ವಾಟ್ಸ್ ಅಪ್ ಅಪ್ಲಿಕೇಶನ್ ಬಳಸ್ತಿದ್ದಾರೆ. ಗ್ರಾಹಕರಿಗಾಗಿ ವಾಟ್ಸ್ ಅಪ್ ಹೊಸ ಹೊಸ ಫೀಚರ್ ಗಳನ್ನು ಶುರು ಮಾಡ್ತಿದೆ. ಈ ಹೊಸ ಫೀಚರ್ ಆಂಡ್ರಾಯ್ಡ್ 2.18.138 ನಲ್ಲಿ ಲಭ್ಯವಿದೆ. WABeta ಇನ್ಫೋದ ವರದಿ ಪ್ರಕಾರ, ವಾಟ್ಸ್ ಅಪ್ wa.me ಹೆಸರಿನ ಡೊಮೆನ್ ನೋಂದಾಯಿಸಿದೆ. ಇದು api.whatsapp.com ವಾಟ್ಸ್ ಅಪ್ ನ ಚಿಕ್ಕ ಲಿಂಕ್ ಆಗಿದೆ. ಇದು ವಾಟ್ಸ್ ಅಪ್ ಚಾಟ್ ತೆರೆಯಲು ಬಳಸಬಹುದಾಗಿದೆ.

ನಿಮ್ಮ ಫೋನ್ ನಲ್ಲಿ ನೀವು https://wa.me ಟೈಪ್ ಮಾಡಬೇಕು.ಇದು ತೆರೆದಾಗ ನಿಮಗೆ ಚಾಟ್ ವಿಂಡೋ ಕಾಣಿಸಲಿದೆ.ಇದ್ರ ಮೂಲಕ ನೀವು ಚಾಟ್ ಮಾಡಬಹುದಾಗಿದೆ. ವಾಟ್ಸ್ ಅಪ್ ಆ್ಯಪ್ ತೆರೆಯದೇ ಇದ್ರ ಮೂಲಕ ಸ್ನೇಹಿತರ ಜೊತೆ ಚಾಟ್ ಮಾಡಬಹುದಾಗಿದೆ. ಕಳೆದ ಕೆಲ ದಿನಗಳಿಂದ ವಾಟ್ಸ್ ಅಪ್ ಅನೇಕ ಹೊಸ ಹೊಸ ಫೀಚರ್ ಶುರು ಮಾಡಿದೆ. ವಾಟ್ಸ್ ಅಪ್ ಗ್ರೂಪ್ ವಿಡಿಯೋ ಕಾಲ್ ಸೌಲಭ್ಯವನ್ನೂ ಇದು ನೀಡಿದೆ.

ಸ್ನೇಹಿತೆ ನ್ಯೂಡ್ ಫೋಟೋ ವೈರಲ್ ಮಾಡಿದ ಯುವತಿಯನ್ನು ಕಂಬಕ್ಕೆ ಕಟ್ಟಿ ಹೊಡೆದ್ರು

$
0
0

ಬಿಹಾರದಲ್ಲಿ ಮತ್ತೆ ಮನುಷ್ಯರು ತಲೆ ತಗ್ಗಿಸುವ ಕೆಲಸ ನಡೆದಿದೆ. ಬಗಹಾ ಜಿಲ್ಲೆಯಲ್ಲಿ ಹುಡುಗಿಯನ್ನು ಕಂಬಕ್ಕೆ ಕಟ್ಟಿ ಹಾಕಿ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೀಡಿತ ಯುವತಿ ತನ್ನ ಸ್ನೇಹಿತೆಯ ನ್ಯೂಡ್ ಫೋಟೋವನ್ನು ವೈರಲ್ ಮಾಡಿದ್ದಳು ಎಂಬ ಆರೋಪವಿದೆ. ಮೇ.3ರಂದು ಸ್ನೇಹಿತೆ ಭೇಟಿಗೆ ಬಂದಿದ್ದ ಪೀಡಿತೆ ವಿರುದ್ಧ ಕುಟುಂಬಸ್ಥರು ಆರೋಪ ಹೊರಿಸಿದ್ದಾರೆ. ಪೀಡಿತೆ ಸ್ನೇಹಿತೆ ನ್ಯೂಡ್ ಫೋಟೋ ವೈರಲ್ ಮಾಡಿದ್ದಾಳೆಂದು ದೂರಿದ್ದಾರೆ. ಇದೇ ವಿಚಾರಕ್ಕೆ ಆಕೆಯನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದ ವಿಡಿಯೋ ಮೇ.4ರಂದು ವೈರಲ್ ಆಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ವಿಡಿಯೋದಲ್ಲಿ ಕಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.


ಮದುವೆಗೆಂದು ಬಂದು ಮಗುವನ್ನೇ ಕಳೆದುಕೊಂಡರು…!

$
0
0

ಒಮ್ಮೊಮ್ಮೆ ದುರ್ವಿಧಿ ಕೈಬೀಸಿ ಕರೆಯುತ್ತದೆ. ನಮ್ಮಅಲಕ್ಷ್ಯವೋ….ದುರಾದೃಷ್ಟವೋ….ಅವಘಡ ನಡೆದುಹೋಗುತ್ತದೆ. ಇಲ್ಲೊಂದು ಮಗು ತಾಯಿಯ ಕೈಯಿಂದಲೇ ಬಿದ್ದು ಸಾವನ್ನಪ್ಪಿದೆ. ಹೌದು, ತಾಯಿಯ ತೋಳಿನಲ್ಲಿದ್ದ 6 ತಿಂಗಳ ಪುಟ್ಟ ಮಗುವೊಂದು ಅಕಸ್ಮಾತ್ ಕೆಳಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ.

ಉಲ್ಹಾಸ್ ನಗರದ ಫೆಮಿದಾ ಶೇಖ್ ಎಂಬುವವರು ಮದುವೆ ಕಾರ್ಯಕ್ರಮಕ್ಕೆಂದು ಬಂದಿದ್ದರು. ಈ ವೇಳೆ ಅವರ 6 ತಿಂಗಳ ಮಗ ಮೊಹಮ್ಮದ್ ನನ್ನು ಎತ್ತಿಕೊಂಡಿದ್ದರು. ಎರಡನೇ ಮಹಡಿಯಲ್ಲಿ ನಿಂತಿದ್ದ ಅವರ ಕೈಯಿಂದ ಅಕಸ್ಮಾತ್ ಆಗಿ ಮಗು ಕೆಳಗೆ ಬಿದ್ದಿದೆ.

ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ರುಕ್ಮಿಣಿಬಾಯಿ ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ದಾರಿ ಮಧ್ಯೆಯೇ ಮಗು ಸಾವನ್ನಪ್ಪಿದೆ. ಮದುವೆಗೆಂದು ಬಂದು ಮಗುವನ್ನು ಕಳೆದುಕೊಂಡ ತಾಯಿಯ ರೋಧನ ಮುಗಿಲುಮುಟ್ಟಿತ್ತು.

ಬರ್ತಡೆ ಪಾರ್ಟಿಗೆ ಬಂದವನನ್ನ ಡಿಜೆ ಕೊಲೆ ಮಾಡಿದ್ಯಾಕೆ?

$
0
0

ಬರ್ತಡೆ ಪಾರ್ಟಿಯಲ್ಲಿ ಡಿಜೆಯಿಂದ, ಯುವಕ ಕೊಲೆಯಾದ ಘಟನೆ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ಪಂಜಾಬಿ ಭಾಗ್ ಎಂಬ ಪಬ್ ನ ಮೂರನೇ ಅಂತಸ್ಥಿನಲ್ಲಿ ಇಶ್ಮಿತ್ ಎಂಬ ಯುವಕ ತನ್ನ 20ನೇ ವರ್ಷದ ಬರ್ತಡೆ ಪಾರ್ಟಿಯನ್ನ ಆಯೋಜಿಸಿದ್ದ.

ಈ ಪಾರ್ಟಿಗೆ ತನ್ನ 10 ಮಂದಿ ಗೆಳೆಯರನ್ನು ಆಹ್ವಾನಿಸಿದ್ದ. ವಿಜಯದೀಪ್ ಎಂಬಾತ ಕೆಳಗಡೆ ಫ್ಲೋರ್ಗೆ ಹೋಗಿ ಡಿಜೆ ದೀಪಕ್ ಬಿಶ್ತಾಗೆ ಸಾಂಗ್ ಬದಲಾಯಿಸುವಂತೆ ತಿಳಿಸಿದ್ದಾನೆ. ಇಲ್ಲಿಂದಲೇ ಶುರುವಾಗಿದೆ ವಿಜಯದೀಪ್ ಮತ್ತು ಡಿಜೆ ಬಿಶ್ತಾ ನಡುವೆ ವಾದ. ಹಾಡು ಬದಲಾಯಿಸಲು ಸುತಾರಾಂ ಒಪ್ಪದ ಡಿಜೆ ಮೇಲೆ ವಿಜಯದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ತಕ್ಷಣವೇ ವಿಜಯದೀಪ್ ಸ್ನೇಹಿತರು ಕೆಳಗಿಳಿದು ಬಂದು ಬಾರ್ ಸಿಬ್ಬಂದಿ ಮತ್ತು ಡಿಜೆ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೆ ಇವರ ಗಲಾಟೆಗೆ ಅಲ್ಲಿದ್ದ ಚೇರುಗಳು ಪುಡಿಪುಡಿಯಾಗಿವೆ, ಜೊತೆಗೆ ಬೀರ್ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿವೆ. ಇದೇ ವೇಳೆ ಡಿಜೆ ದೀಪಕ್ ಬಿಶ್ತಾ, ಅಲ್ಲಿಯೇ ಇದ್ದ ಚಾಕುವನ್ನು ತೆಗೆದುಕೊಂಡು ವಿಜಯದೀಪ್ ಗೆ ಚುಚ್ಚಿದ್ದಾನೆ.

ತೀವ್ರ ರಕ್ತಸ್ರಾವದಿಂದ ವಿಜಯದೀಪ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಬರ್ತಡೆ ಪಾರ್ಟಿಗೆ ಬಂದಿದ್ದ ಮತ್ತೊಬ್ಬ ಯುವತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಪೊಲೀಸರು ಬಾರ್ ಗೆ ಬರುತ್ತಿದ್ದಂತೆ ಪಬ್ ನಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆರೋಪಿ ಡಿಜೆ ದೀಪಕ್ ಬಿಶ್ತಾನನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಸಿಸಿ ಟಿವಿ ಫೂಟೇಜ್ ಮತ್ತು ಕೊಲೆ ಮಾಡಲು ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪಬ್ ನ ಕೆಲ ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ಸಿರಾಜ್ ಮನೆಯಲ್ಲಿ ಬಿರಿಯಾನಿ ಪಾರ್ಟಿ ಮಾಡಿದ ಕೊಹ್ಲಿ ಟೀಂ

$
0
0

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಲ್ಲ. ಆದ್ರೂ ತಂಡದ ಆತ್ಮವಿಶ್ವಾಸ ಕಡಿಮೆಯಾಗಿಲ್ಲ. ಮುಂದಿನ ಪಂದ್ಯಕ್ಕೆ ಟೀಂ ಸಿದ್ಧತೆ ನಡೆಸುತ್ತಿದೆ. ಸೋಮವಾರ ಬೆಂಗಳೂರು ತಂಡ ಹೈದ್ರಾಬಾದ್ ಜೊತೆ ಸೆಣೆಸಲಿದೆ. ಹೈದ್ರಾಬಾದ್ ಹೆಸರು ಹೇಳ್ತಿದ್ದಂತೆ ಬಿರಿಯಾನಿ ನೆನಪು ಮೊದಲು ಬರುತ್ತದೆ.

ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಹೈದ್ರಾಬಾದ್ ಬಿರಿಯಾನಿ ರುಚಿ ಸವಿದಿದ್ದಾರೆ. ಪಂದ್ಯದ ಹಿನ್ನೆಲೆಯಲ್ಲಿ ಹೈದ್ರಾಬಾದ್ ತಲುಪಿರುವ ಕೊಹ್ಲಿ ಪಡೆ ಬಿರಿಯಾನಿ ಪಾರ್ಟಿ ಮಾಡಿದೆ. ಆಟಗಾರ ಮೊಹಮ್ಮದ್ ಸಿರಾಜ್ ಮನೆಯಲ್ಲಿ ಭರ್ಜರಿ ಊಟ ಮಾಡಿದ ಕೊಹ್ಲಿ ಹಾಗೂ ಕೆಲ ಆಟಗಾರರು ಬಿರಿಯಾನಿ ರುಚಿ ನೋಡಿದ್ದಾರೆ.

ಕೊಹ್ಲಿ ಜೊತೆ ಪಾರ್ಥಿವ್ ಪಟೇಲ್, ಚಾಹಲ್ ಹಾಗೂ ಮನ್ದೀಪ್ ಸಿಂಗ್ ಇರುವ ಫೋಟೋ ವೈರಲ್ ಆಗಿದೆ. ಭಾನುವಾರ ಅಭ್ಯಾಸ ಮುಗಿಸಿ ಸಿರಾಜ್ ಮನೆಗೆ ಹೋದ ಆಟಗಾರರು ಭರ್ಜರಿ ಊಟ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಸಿರಾಜ್ ಮನೆಯಲ್ಲಿ ಆಟಗಾರರು ತಂಗಿದ್ದರು. ನೆಲದ ಮೇಲೆ ಕುಳಿತು ಊಟ ಮಾಡಿದ ಆಟಗಾರರು ಮುಂಬೈ-ಕೊಲ್ಕತ್ತಾ ಪಂದ್ಯವನ್ನೂ ವೀಕ್ಷಿಸಿದ್ದಾರೆ. ಸಿರಾಜ್ ತಂದೆ ರಿಕ್ಷಾ ಚಾಲಕರಾಗಿದ್ದು, ಬೆಂಗಳೂರು ತಂಡ ಸಿರಾಜ್ ರನ್ನು 1 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

ಸಣ್ಣ ವಿಷಯಕ್ಕೆ ಬಾಲಕಿಯನ್ನೇ ಕೊಂದ್ರಾ ಪಾಪಿಗಳು…!

$
0
0

ಮುಂಬೈನಲ್ಲಿ ಕಳೆದ ವಾರ ಆಂಟೋಪ್ ಹಿಲ್ ಪ್ರದೇಶದಲ್ಲಿ ಚಿಕ್ಕ ಹುಡುಗಿಯನ್ನು ಕೊಂದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕ ವಿಷಯಕ್ಕೆ ವಾದ ಮಾಡಿದ ಹುಡುಗಿಯನ್ನು, ಈ ಮಹಿಳೆಯರು ಕೊಂದು ಹಾಕಿದ್ದಾರೆ. ಇನ್ನು ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲ್ಲಲಾಗಿದೆ ಅಂತಾ ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಆದ್ರೆ ಪೊಲೀಸ್ ಮೂಲಗಳ ಪ್ರಕಾರ ಬಾಲಕಿಯ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿದ್ದು, ಪೋಸ್ಟ್ ಮಾರ್ಟಮ್ ನಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಇನ್ನು ಆರೋಪಿಗಳಾದ 40 ವರ್ಷದ ಸಬೀರಾ ಯೂಸಫ್, 35 ವರ್ಷದ ಸುಲಿಯಾ ಸಯೈದ್ , 17 ವರ್ಷದ ಮತ್ತೊಬ್ಬ ಯುವತಿಯನ್ನ ಪೊಲೀಸರು ಬಂಧಿಸಿದ್ದು, ಮೂವರ ಮೇಲೆ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

 

ಮುಕೇಶ್ ಅಂಬಾನಿ ಭಾವೀ ಅಳಿಯನ ಹಿನ್ನಲೆ ಏನು ಗೊತ್ತಾ?

$
0
0

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಜೊತೆ ಹಸೆಮಣೆ ಏರಲು ಹೊರಟಿರುವ ಆನಂದ್ ಪಿರಾಮಲ್ ಬಗ್ಗೆ ನಿಮಗೆ ಗೊತ್ತಿದೆಯಾ? ಇಶಾ ಹಾಗೂ ಆನಂದ್ ನಿಶ್ಚಿತಾರ್ಥ ನೆರವೇರಿದ್ದು, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.

ಪಿರಮಲ್ ಗ್ರೂಪ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಆನಂದ್ ಕೂಡ ಬಿಲಿಯನೇರ್ ಬ್ಯುಸಿನೆಸ್ ಮ್ಯಾನ್ ಅಜಾಜ್ ಪಿರಮಲ್ ಮಗ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನ ಪದವೀಧರ.

ಆನಂದ್ ಮೊದಲು ಆರಂಭಿಸಿದ್ದು ಪಿರಮಲ್ ಇಸ್ವಾಸ್ಥ್ಯ ಅನ್ನೋ ಹೆಲ್ತ್ ಕೇರ್ ಸ್ಟಾರ್ಟ್ ಅಪ್. ಮಧ್ಯಮ ವರ್ಗದವರಿಗೆ ಆರೋಗ್ಯ ಸೌಲಭ್ಯ ನೀಡುವ ದೃಷ್ಟಿಯಿಂದ ಇದನ್ನು ಆರಂಭಿಸಿದರು. ಇದಾದ ಬಳಿಕ ಪಿರಮಲ್ ರಿಯಾಲ್ಟಿ ಆರಂಭಿಸಿದರು. ಈ ಎರಡೂ ಸ್ಟಾರ್ಟ್ ಅಪ್ ಈಗ ಹೆಮ್ಮರವಾಗಿ ಬೆಳೆದಿದೆ.

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಆನಂದ್, ತನ್ನನ್ನು ಒಬ್ಬ ಉದ್ಯಮಿಯನ್ನಾಗಿ ಮಾಡಿದ್ದು ಮುಕೇಶ್ ಅಂಬಾನಿ ಎಂದಿದ್ದರು. ತನಗೆ ಉದ್ಯಮಿಯಾಗುವಂತೆ ಸಲಹೆ ನೀಡಿದ್ದಲ್ಲದೇ ಅದನ್ನು ಮನವರಿಕೆ ಮಾಡಿಸಿದ್ದೇ ಮುಕೇಶ್ ಅಂಬಾನಿ ಎಂದಿದ್ದರು.

ರಜನಿ ಮೊಮ್ಮಗನ ಅದ್ದೂರಿ ಹುಟ್ಟುಹಬ್ಬ

$
0
0

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮೊಮ್ಮಗನ ಹುಟ್ಟುಹಬ್ಬವನ್ನು ಭರ್ಜರಿಯಾಗೇ ಆಚರಿಸಿದ್ದಾರೆ. ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಮಗ ವೇದ್ ಕೃಷ್ಣನ 3ನೇ ವರ್ಷದ ಹುಟ್ಟುಹಬ್ಬಕ್ಕಾಗಿಯೇ ರಜನಿಕಾಂತ್ ಅಮೆರಿಕದಿಂದ ವಾಪಸ್ಸಾಗಿದ್ದರು.

ಕುಟುಂಬದವರೊಂದಿಗೆ ವೇದ್ ಹುಟ್ಟುಹಬ್ಬ ಆಚರಿಸಿರುವ ಫೋಟೋಗಳನ್ನು ಸೌಂದರ್ಯ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ವೇದ್ ಕೆಂಪು ಬಣ್ಣದ ಫೈರ್ ಎಂಜಿನ್ ಆಕಾರದ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ಈ ಸಂಭ್ರಮದಲ್ಲಿ ರಜನಿಕಾಂತ್, ಅವರ ಪತ್ನಿ ಲತಾ, ನಟ ಧನುಶ್ ಮುಂತಾದವರು ಹಾಜರಿದ್ದರು. ಅಲ್ಲದೇ ಮಕ್ಕಳ ಪುಟ್ಟ ಸೈನ್ಯವೇ ಅಲ್ಲಿ ನೆರೆದಿತ್ತು.

ರಜನಿಕಾಂತ್ ಮಗಳು ಸೌಂದರ್ಯ 2010 ರಲ್ಲಿ ಚೆನ್ನೈ ಮೂಲದ ಅಶ್ವಿನ್ ರಾಮ್ ಕುಮಾರ್ ಎಂಬುವವರನ್ನು ಮದುವೆಯಾಗಿ, ಕೆಲ ವರ್ಷದ ಬಳಿಕ ಬೇರೆಯಾಗಿದ್ದರು. ವರ್ಷದ ಹಿಂದಷ್ಟೇ ಅವರು ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿದ್ದರು.

ಹಣ್ಣಿಗಿಂತ ಹೆಚ್ಚು ಜಂಕ್ ಫುಡ್ ತಿನ್ನುವವರು ನೀವಾಗಿದ್ದರೆ ಎಚ್ಚರ

$
0
0

ಹೆಚ್ಚು ಜಂಕ್ ಫುಡ್ ಸೇವನೆ ಮಾಡುವವರು ನೀವಾಗಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್. ಕಡಿಮೆ ಪ್ರಮಾಣದಲ್ಲಿ ಹಣ್ಣು ಸೇವನೆ ಮಾಡುವ ಹಾಗೂ ಹೆಚ್ಚೆಚ್ಚು ಜಂಕ್ ಫುಡ್ ಸೇವನೆ ಮಾಡುವ ಮಹಿಳೆಯರು ಈಗ್ಲೇ ಎಚ್ಚೆತ್ತುಕೊಳ್ಳಿ. ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.

ಕಡಿಮೆ ಹಣ್ಣು ಸೇವನೆ ಮಾಡಿ ಹೆಚ್ಚೆಚ್ಚು ಜಂಕ್ ಫುಡ್ ತಿನ್ನುವ ಮಹಿಳೆಯರಲ್ಲಿ ಗರ್ಭಧಾರಣೆ ಪ್ರಮಾಣ ಇಳಿಮುಖವಾಗುತ್ತದೆ. ಒಂದು ವರ್ಷದಲ್ಲಿಯೇ ಗರ್ಭಧಾರಣೆ ಸಾಧ್ಯತೆ ತೀರ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಹೇಳಿದೆ.

ಸಂಶೋಧಕರು 5598 ಮಹಿಳೆಯರನ್ನು ಸಂಶೋಧನೆಗೊಳಪಡಿಸಿದ್ದರು. ಪ್ರತಿದಿನ ಮೂರು ಅಥವಾ ಅದಕ್ಕಿಂತ ಹೆಚ್ಚು ಹಣ್ಣು ಸೇವನೆ ಮಾಡುವ ಮಹಿಳೆಯರಿಗಿಂತ ದಿನದಲ್ಲಿ ಒಂದು ಹೊತ್ತು ಹಣ್ಣು ತಿನ್ನದ ಮಹಿಳೆಯರಲ್ಲಿ ಗರ್ಭಧಾರಣೆಗೆ ತುಂಬಾ ಸಮಯ ಹಿಡಿದಿತ್ತು. ಅರ್ಧಕ್ಕಿಂತಲೂ ಹೆಚ್ಚು ತಿಂಗಳು ಬೇಕಾಯ್ತು ಎಂದು ಸಂಶೋಧಕರು ಹೇಳಿದ್ದಾರೆ.

ಫಾಸ್ಟ್ ಫುಡ್ ಎಂದೂ ತಿನ್ನದ ಮಹಿಳೆಯರು ವಾರದಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಫಾಸ್ಟ್ ಫುಡ್ ತಿನ್ನುವ ಮಹಿಳೆಯರಿಗಿಂತ ಬೇಗ ಗರ್ಭಿಣಿಯರಾದ್ರು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಕಡಿಮೆ ಪ್ರಮಾಣದಲ್ಲಿ ಹಣ್ಣು ತಿನ್ನುವ ಮಹಿಳೆಯರು ಗರ್ಭ ಧರಿಸುವುದು ಕಷ್ಟ. ಹಣ್ಣು ತಿನ್ನುವ ಮಹಿಳೆಯರಿಗಿಂತ ಹಣ್ಣು ತಿನ್ನದ ಮಹಿಳೆಯರ ಸಮಸ್ಯೆ ಶೇಕಡಾ 12ರಷ್ಟು ಹೆಚ್ಚಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

 


ಎತ್ತಿನಗಾಡಿ ಏರಿದ ರಾಹುಲ್ ನೀಡಿದ್ರು ರೈತರ ಸಾಲ ಮನ್ನಾ ಮಾಡುವ ಭರವಸೆ

$
0
0

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೈದೆ ದಿನ ಬಾಕಿ ಇದೆ. ಚುನಾವಣಾ ರಣಾಂಗಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೋಮವಾರ ಕರ್ನಾಟಕದಲ್ಲಿ ಪ್ರಚಾರ ನಡೆಸ್ತಿದ್ದಾರೆ. ಕೋಲಾರದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಕೋಲಾರದಲ್ಲಿ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ರೋಡ್ ಶೋ ನಡೆಸಿದ್ರು. ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಪ್ರಯಾಣ ಬೆಳೆಸಿದ್ರು. ರೈತರ ಬಗ್ಗೆ ಮಾತನಾಡುವ ಪಿಎಂ ರೈತರಿಗಾಗಿ ಏನೂ ಮಾಡಿಲ್ಲವೆಂದು ಆರೋಪಿಸಿದ್ರು.

ಇತ್ತ ಗದಗದಲ್ಲಿ ಪ್ರಚಾರ ರ್ಯಾಲಿ ನಡೆಸಿದ ಅಮಿತ್ ಷಾ, ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಮೇ 15 ರ ನಂತ್ರ ಕರ್ನಾಟಕದಿಂದ ಕಾಂಗ್ರೆಸ್ ಹೊರಬೀಳಲಿದೆ ಎಂದಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಕಾಂಗ್ರೆಸ್ ಕಾಲೆಳೆದಿದ್ದಾರೆ. ದೇಶದಲ್ಲಿ ಯಾವುದೇ ದೊಡ್ಡ ಘಟನೆಗಳಾಗ್ಲಿ ರಾಹುಲ್ ಗಾಂಧಿ ಇಟಲಿಗೆ ಓಡಿ ಹೋಗ್ತಾರೆಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸಿಎಂ ಸಿದ್ಧರಾಮಯ್ಯ ಬಿಜೆಪಿ ಸಿಎಂ ಅಭ್ಯರ್ಥಿ ಯಡಿಯೂರಪ್ಪನವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಬಹಿರಂಗ ಚರ್ಚೆಗೆ ಪಿಎಂ ಮೋದಿ ಕೂಡ ಬರಬಹುದು ಎಂದಿದ್ದಾರೆ.

ಕಾಂಗ್ರೆಸ್, ಬಿಜೆಪಿ ನಾಯಕರುಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ ಜೆಡಿಎಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರೈತರಿಗೆ ಸಾಲದಲ್ಲಿ ಶೇಕಡಾ 100ರಷ್ಟು ವಿನಾಯಿತಿ ನೀಡುವುದಾಗಿ ಜೆಡಿಎಸ್ ಭರವಸೆ ನೀಡಿದೆ.

ಪತ್ನಿಯಿಂದ ಹೆಚ್ಚು ಒದೆ ತಿಂತಾರೆ ಈ ನಗರದ ಪುರುಷರು

$
0
0

ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೌಟುಂಬಿಕ ಹಿಂಸೆ ದಿನೇ ದಿನೇ ಹೆಚ್ಚಾಗ್ತಿದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ಪತ್ನಿಯರಿಂದ ಹಿಂಸೆಗೊಳಗಾಗ್ತಾರೆ. ಈ ಬಗ್ಗೆ ಮಧ್ಯಪ್ರದೇಶದ ಡಯಲ್ 100 ಸಮೀಕ್ಷೆ ನಡೆಸಿ ಆಶ್ಚರ್ಯಕಾರಿ ವಿಷ್ಯವನ್ನು ಹೊರ ಹಾಕಿದೆ.

ಜನವರಿ 2018ರಿಂದ ಏಪ್ರಿಲ್ 2018ರವರೆಗೆ ಕಂಟ್ರೋಲ್ ರೂಂಗೆ ಬಂದ ದೂರಿನ ವಿವರವನ್ನು ಎಲ್ಲರ ಮುಂದಿಡಲಾಗಿದೆ. ವರದಿ ಪ್ರಕಾರ ನಾಲ್ಕು ತಿಂಗಳಲ್ಲಿ 772 ಪುರುಷರು ಡಯಲ್ 100ಕ್ಕೆ ಕರೆ ಮಾಡಿ ಪತ್ನಿಯರ ವಿರುದ್ಧ ದೂರು ನೀಡಿದ್ದಾರೆ. ಪತ್ನಿಯರಿಂದ ಅತಿ ಹೆಚ್ಚು ಹಿಂಸೆಗೊಳಗಾದವರಲ್ಲಿ ಇಂದೋರ್ ಮಂದಿ ಮುಂದಿದ್ದಾರೆ. ಇಂದೋರ್ ನ 74 ಪುರುಷರು ಪತ್ನಿಯರ ವಿರುದ್ಧ ದೂರು ನೀಡಿದ್ದಾರೆ.

ಎರಡನೇ ಸ್ಥಾನದಲ್ಲಿ ಭೋಪಾಲ್ ಇದೆ. ಇಲ್ಲಿ 54 ಪುರುಷರು ಡಯಲ್ 100ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಸಮೀಕ್ಷೆ ಪ್ರಕಾರ ಭೋಪಾಲ್ ನಲ್ಲಿ ಪ್ರತಿ ತಿಂಗಳು 13 ಪುರುಷರು ಪತ್ನಿಯರಿಂದ ಒದೆ ತಿನ್ನುತ್ತಾರೆ. ನಾಲ್ಕು ತಿಂಗಳಲ್ಲಿ ಇಡೀ ಮಧ್ಯಪ್ರದೇಶದಲ್ಲಿ 22 ಸಾವಿರ ದೂರು ದಾಖಲಾಗಿದೆ. ಇಂದೋರ್ ನಲ್ಲಿ 2,115 ಮಹಿಳೆಯರು ಹಾಗೂ ಭೋಪಾಲ್ ನ 1,546 ಮಹಿಳೆಯರು ಕೌಟುಂಬಿಕ ಹಿಂಸೆ ವಿರುದ್ಧ ದೂರು ನೀಡಿದ್ದಾರೆ.

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

$
0
0

ಮೇಷ ರಾಶಿ

ಇಂದು ಮಿತ್ರರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಲಿದ್ದೀರಿ. ಮಿತ್ರರಿಂದ ಉಪಹಾರ ಸಿಗಲಿದೆ. ಹಣ ಖರ್ಚಾಗಬಹುದು. ಹೊಸ ಸ್ನೇಹದಿಂದ ಭವಿಷ್ಯದಲ್ಲಿ ಲಾಭವಾಗಲಿದೆ.

ವೃಷಭ ರಾಶಿ

ಇಂದು ಉದ್ಯೋಗಿಗಳಿಗೆ ಶುಭ ದಿನ. ಹೊಸ ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಿದ್ದೀರಿ. ಯಾರೊಂದಿಗೂ ಜಗಳವಾಗದಂತೆ ಎಚ್ಚರ ವಹಿಸಿ. ಸರ್ಕಾರಿ ಕ್ಷೇತ್ರದಲ್ಲಿ ಲಾಭವಾಗಲಿದೆ.

ಮಿಥುನ ರಾಶಿ

ಇಂದು ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ದಿನ ಅನುಕೂಲಕರವಾಗಿಲ್ಲ. ಆರೋಗ್ಯ ಕೊಂಚ ಏರುಪೇರಾಗಬಹುದು. ಮಾನಸಿಕವಾಗಿ ಶಾಂತಿ ಪ್ರಾಪ್ತಿಯಾಗಲಿದೆ.

ಕರ್ಕ ರಾಶಿ

ಇಂದು ಪ್ರತಿ ವಿಷಯದಲ್ಲೂ ಸಮಾಧಾನದಿಂದ ವ್ಯವಹರಿಸಿ. ಕುಟುಂಬ ಸದಸ್ಯರೊಂದಿಗೆ ವಾದ-ವಿವಾದ ಮಾಡಬೇಡಿ. ಇಂದು ನಿಮಗೆ ಶುಭ ದಿನ. ಮಾತಿನ ಬಲದಿಂದ್ಲೇ  ಕೆಲಸಗಳು ಯಶಸ್ವಿಯಾಗುತ್ತವೆ.

ಸಿಂಹ ರಾಶಿ

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಆರೋಗ್ಯ ಹದಗೆಡಬಹುದು. ಮಿತ್ರರಿಂದ ಸುಖ ಪ್ರಾಪ್ತಿಯಾಗಲಿದೆ.

ಕನ್ಯಾ ರಾಶಿ

ಇಂದು ಸ್ಪೂರ್ತಿಯ ಅನುಭವವಾಗುತ್ತದೆ. ಮನೆ ಮತ್ತು ಕಚೇರಿಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ.

ತುಲಾ ರಾಶಿ

ಇಂದು ಮಿಶ್ರಫಲವಿದೆ. ಆಯಾಸ, ಆಲಸ್ಯ ಮತ್ತು ಚಿಂತೆಯ ಅನುಭವವಾಗಲಿದೆ. ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ವೃಶ್ಚಿಕ ರಾಶಿ

ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ. ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಗೃಹಸ್ಥ ಜೀವನ ಮಧುರವಾಗಿರುತ್ತದೆ. ಮಧ್ಯಾಹ್ನದ ನಂತರ ಮಿತ್ರರಿಂದ ಲಾಭವಾಗುತ್ತದೆ.

ಧನು ರಾಶಿ

ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಸಹೋದರರು, ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಭಾಗ್ಯವೃದ್ಧಿಯ ಸಾಧ್ಯತೆ ಇದೆ.

ಮಕರ ರಾಶಿ

ಕುಟುಂಬದವರೊಂದಿಗೆ ಕಲಹವಾಗದಂತೆ ಎಚ್ಚರ ವಹಿಸಿ. ಮಾನಸಿಕ ಮತ್ತು ದೈಹಿಕ ಶ್ರಮ ಹೆಚ್ಚಾಗಿರುತ್ತದೆ. ಆಕಸ್ಮಿಕ ಧನಲಾಭವಾಗಲಿದೆ. ಬಾಕಿ ಇರುವ ಹಣ ವಸೂಲಾಗಲಿದೆ.

ಕುಂಭ ರಾಶಿ

ಇಂದು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನವಾಗಿರುತ್ತೀರಾ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಓದಿನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದೀರಿ.

ಮೀನ ರಾಶಿ

ಲಾಭ ಮತ್ತು ಲಾಲಸೆಯಿಂದ ದೂರವಿರಿ. ಆರ್ಥಿಕ ವಿಷಯದಲ್ಲಿ ಎಚ್ಚರವಿರಲಿ. ಕೆಲಸದ ಯಶಸ್ಸಿಗೆ ಇಂದು ಶುಭ ದಿನ. ಮನೆಯವರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ.

ದೊಡ್ಡ ಕೆಲಸ ಮಾಡುತ್ತೆ ಸಣ್ಣ ಏಲಕ್ಕಿ

$
0
0

ಅಡುಗೆ ಕೆಲಸದ ಜೊತೆ ಆರೋಗ್ಯ ವೃದ್ಧಿಗೊಂದೇ ಅಲ್ಲ ಏಲಕ್ಕಿ ಅದೃಷ್ಟ ಬದಲಿಸುವ ಕೆಲಸ ಮಾಡುತ್ತದೆ. ಸಣ್ಣ ಏಲಕ್ಕಿಯಿಂದ ಸಾಕಷ್ಟು ಲಾಭಗಳಿವೆ. ಪ್ರೀತಿ, ಆರ್ಥಿಕ ಪರಿಸ್ಥಿತಿ ವೃದ್ಧಿಸುವ ಕೆಲಸವನ್ನು ಏಲಕ್ಕಿ ಮಾಡುತ್ತದೆ.

ಎಷ್ಟು ಕೆಲಸ ಮಾಡಿದ್ರೂ ಸಫಲತೆ ಸಿಗ್ತಿಲ್ಲವೆಂದಾದ್ರೆ ಏಲಕ್ಕಿಯನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ತಲೆಯಡಿ ಇಟ್ಟುಕೊಳ್ಳಿ. ಬೆಳಿಗ್ಗೆ ಎದ್ದ ನಂತ್ರ ಅದನ್ನು ಅಪರಿಚಿತರಿಗೆ ದಾನ ನೀಡಿ. ಈ ಉಪಾಯ ಅನುಸರಿಸಿದ್ರೆ ಯಶಸ್ಸು ನಿಮ್ಮನ್ನು ಅರಸಿ ಬರುತ್ತದೆ.

ಸುಂದರ ಜೀವನ ಸಂಗಾತಿ ಬಯಸುವವರು ಹಳದಿ ಬಟ್ಟೆಯಲ್ಲಿ 5 ಏಲಕ್ಕಿ ಹಾಕಿ ದಾನ ನೀಡಿ.

ರಾತ್ರಿ ಮಲಗುವಾಗ ಹಾಲಿಗೆ ಏಲಕ್ಕಿ ಹಾಕಿ ಕುಡಿಯುವುದ್ರಿಂದ ವೈವಾಹಿಕ ಜೀವನ ಸುಖಕರವಾಗಿರುತ್ತದೆ.

ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬಯಸುವವರು ಸಣ್ಣ ಏಲಕ್ಕಿಯನ್ನು ಹಾಲಿನಲ್ಲಿ ಕುದಿಸಿ ಬಡ ಮಕ್ಕಳಿಗೆ ನೀಡಬೇಕು. ಸತತ 7 ಸೋಮವಾರ ಈ ಹಾಲನ್ನು ಬಡ ಮಕ್ಕಳಿಗೆ ನೀಡಬೇಕು. ಹೀಗೆ ಮಾಡಿದ್ರೆ ಏಕಾಗ್ರತೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿನ ಮೇಲೆ ಆಸಕ್ತಿ ಹೆಚ್ಚಾಗುತ್ತದೆ.

‘ಈ ಸಲ ಕಪ್ ನಮ್ದೇ’ ಎನ್ನುತ್ತಿದ್ದ ಆರ್.ಸಿ.ಬಿ. ಫ್ಯಾನ್ಸ್ ಗೆ ಬಿಗ್ ಶಾಕ್

$
0
0

ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಪ್ಲೇ ಆಫ್ ಹಂತಕ್ಕೇರುವ ಕನಸು ಭಗ್ನವಾಗಿದೆ. ‘ಈ ಸಲ ಕಪ್ ನಮ್ದೇ’ ಎಂದು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.

ಪ್ಲೇ ಆಫ್ ತಲುಪುವ ಕನಸು ಬಹುತೇಕ ಭಗ್ನವಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ಶಿಖರ್ ಧವನ್ 13, ಕೇನ್ ವಿಲಿಯಮ್ಸನ್ 56, ಶಕೀಬ್ ಅಲ್ ಹಸನ್ 35, ಯುಸೂಫ್ ಪಠಾಣ್ 12 ರನ್ ಗಳಿಸಿದರು. ಆರ್.ಸಿ.ಬಿ. ಪರವಾಗಿ ಟಿಮ್ ಸೋಥಿ, ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರು.

147 ರನ್ ಗೆಲುವಿನ ಗುರಿ ಪಡೆದ ಆರ್.ಸಿ.ಬಿ. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿ 5 ರನ್ ಅಂತರದ ಸೋಲು ಕಂಡಿದೆ. ಪೃಥ್ವಿ ಪಟೇಲ್ 20, ವಿರಾಟ್ ಕೊಹ್ಲಿ 39, ಮನ್ ದೀಪ್ ಸಿಂಗ್ ಅಜೇಯ 21, ಕಾಲಿನ್ ಡಿ ಗ್ರಾಂಡ್ ಹೋಮ್ 33 ರನ್ ಗಳಿಸಿದರು. ಹೈದರಾಬಾದ್ ಪರ ಶಕೀಬ್ ಅಲ್ ಹಸನ್ 2 ವಿಕೆಟ್ ಪಡೆದರು.

Viewing all 90268 articles
Browse latest View live




Latest Images