Quantcast
Channel: Latest News | Kannada Dunia | Kannada News | Karnataka News | India News
Viewing all 89064 articles
Browse latest View live

ಆಪ್ತ ಸ್ನೇಹಿತನ ನಿಧನಕ್ಕೆ ಕಂಬನಿ ಮಿಡಿದ ದರ್ಶನ್

0
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮೆಜೆಸ್ಟಿಕ್’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಪಿ.ಎನ್. ಸತ್ಯ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ನಟ, ನಿರ್ದೇಶಕರಾಗಿ ಜನಪ್ರಿಯರಾಗಿದ್ದ ಸತ್ಯ ಅವರು ‘ಮೆಜೆಸ್ಟಿಕ್’, ‘ದಾಸ’, ‘ಶಾಸ್ತ್ರಿ’ ಸೇರಿದಂತೆ 16 ಚಿತ್ರಗಳನ್ನು ನಿರ್ದೇಶಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಗೆಳೆಯನ ನಿಧನಕ್ಕೆ ಕಂಬನಿ ಮಿಡಿದಿರುವ ದರ್ಶನ್, ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ ‘ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರಾದ ಪಿ.ಎನ್. ಸತ್ಯ ದೈಹಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಇದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ, ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.


ಸ್ವಿಜ್ಜರ್ಲ್ಯಾಂಡ್ ನಲ್ಲಿ ‘ರಣವೀರ್ ಆನ್ ಟೂರ್’

0
0

ಪದ್ಮಾವತ್ ಚಿತ್ರದ ಯಶಸ್ಸಿನ ಉತ್ತುಂಗದಲ್ಲಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಸ್ವಿಜ್ಜರ್ಲ್ಯಾಂಡ್ ವಿಶೇಷ ಗೌರವ ಸಲ್ಲಿಸಿದೆ. ಇದೇ ಮೊದಲ ಬಾರಿಗೆ ಅಲ್ಲಿನ ರೈಲೊಂದಕ್ಕೆ ಭಾರತೀಯ ವ್ಯಕ್ತಿಯ ಹೆಸರನ್ನಿಟ್ಟು ಗೌರವಿಸಿದೆ.

‘ರಣವೀರ್ ಆನ್ ಟೂರ್’ ಅನ್ನೋ ರೈಲನ್ನು ಸ್ವತಃ ರಣವೀರ್ ಸಿಂಗ್ ಉದ್ಘಾಟಿಸಿದ್ದಾರೆ. ಅಲ್ಲದೇ ಅದೇ ರೈಲಿನಲ್ಲಿ ಲೇಕ್ ಜಿನೆವಾ ರೀಜನ್ ಗೆ ಪ್ರಯಾಣ ಮಾಡಿದ್ದಾರೆ. ಜೊತೆಗೆ ರೈಲಿನ ಬೋಗಿಯಲ್ಲಿ ನಿಂತುಕೊಂಡ ಫೋಟೋವನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ವೇಳೆ ಸ್ವಿಜ್ಜರ್ಲ್ಯಾಂಡ್ ನಲ್ಲಿರುವ ಚಾಪ್ಲಿನ್ ವರ್ಲ್ಡ್ ಗೂ ರಣವೀರ್ ಭೇಟಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ನಟ, ಸ್ವಿಜ್ಜರ್ಲ್ಯಾಂಡ್ ತಮಗೆ ಯಾವಾಗಲೂ ಇಷ್ಟ. ಎಷ್ಟು ಸಲ ಬಂದರೂ ಪ್ರತಿ ಸಲವೂ ಹೊಸದೊಂದು ಅನುಭವ ನೀಡುತ್ತದೆ ಎಂದಿದ್ದಾರೆ.

‘ಪದ್ಮಾವತ್’ ಚಿತ್ರದ ಬಳಿಕ ಸದ್ಯ ‘ಗಲ್ಲಿ ಬಾಯ್’ ಚಿತ್ರದಲ್ಲಿ ನಟಿ ಆಲಿಯಾ ಭಟ್ ಜೊತೆ ರಣವೀರ್ ಅಭಿನಯಿಸುತ್ತಿದ್ದು, ಸ್ವಿಜ್ಜರ್ಲ್ಯಾಂಡ್ ನಲ್ಲಿ ಶೂಟಿಂಗ್ ನಡೆಯತ್ತಿದೆ.

ಸಂಗಾತಿ ಆಯ್ಕೆಗೆ ಲಭ್ಯ ಆಧಾರ್ ವೆರಿಫೈಡ್ ಪ್ರೊಫೈಲ್…!

0
0

ಇಂದು ಆಧಾರ್ ಕಾರ್ಡ್ ಎಲ್ಲಾ ಕೆಲಸಕ್ಕೂ ಬೇಕು. ಎಷ್ಟರ ಮಟ್ಟಿಗೆ ಅಂದರೆ ಮದುವೆ ಆಗೋದಕ್ಕೂ ಆಧಾರ್ ಕಾರ್ಡ್ ಅತ್ಯಗತ್ಯ. ಇದೇನಪ್ಪಾ ಆಶ್ಚರ್ಯ ಅಂದ್ರಾ….ಹೌದು, ಮ್ಯಾಟ್ರಿಮೊನಿಯಲ್ಲಿ ಆಧಾರ್ ವೆರಿಫೈಡ್ ಪ್ರೊಫೈಲ್ ಗಳು ಈಗ ಲಭ್ಯವಿರುತ್ತದೆ.

ಜಗತ್ತಿನ ನಂ 1 ಮ್ಯಾಟ್ರಿಮೊನಿ ಸೈಟ್ ಎಂದೇ ಪ್ರಸಿದ್ಧವಾಗಿರುವ ಶಾದಿ ಡಾಟ್ ಕಾಮ್, ಆಧಾರ್ ಕಾರ್ಡ್ ವೆರಿಫೈಡ್ ಪ್ರೊಫೈಲ್ಸ್ ಎಂಬ ವಿಭಾಗವನ್ನು ತೆರೆಯಲಾಗಿದೆ. ಮದುವೆಯಾಗಬಯಸಿದ ಅಭ್ಯರ್ಥಿಯ ಆಧಾರ್ ಕಾರ್ಡ್ ಮೂಲಕ ಫೋನ್ ನಂಬರ್, ಇ ಮೇಲ್ ವಿಳಾಸ, ಹುಟ್ಟಿದ ದಿನಾಂಕ ಮುಂತಾದ ವಿವರಗಳನ್ನು  ಪರಿಶೀಲಿಸುತ್ತಾರೆ. ಗ್ರಾಹಕರ ಸುರಕ್ಷತೆ ಹಾಗೂ ನಕಲಿ ಪ್ರೊಫೈಲ್ ಪೋಸ್ಟ್ ಮಾಡುವುದನ್ನು ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ.

ಆನ್ ಲೈನ್ ನಲ್ಲಿ ಮದುವೆಯಾಗ ಬಯಸುವವರಿಗೆ ನಕಲಿ ಪ್ರೊಫೈಲ್ ಗಳನ್ನು ಸೃಷ್ಟಿಸಿ ಮೋಸ ಮಾಡುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆ ಮಾಡಿರುವುದು ಒಳ್ಳೆಯ ಸಂಗತಿ.

 

ಉರುಳಿ ಬೀಳುತ್ತಿದ್ದ ಬಸ್ ಗೆ ಆಸರೆಯಾಯ್ತು ಮರ

0
0

ಉತ್ತರಖಂಡ್ ನಲ್ಲಿ ಭಾರಿ ಅನಾಹುತ ತಪ್ಪಿಸಿದ ಮರವೊಂದು 22 ಜೀವಗಳನ್ನ ಉಳಿಸಿದೆ. ಹಿಮಾಲಯದಲ್ಲಿನ ಬದ್ರಿನಾಥ್ ಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಗೆ ಟ್ರಕ್ ಡಿಕ್ಕಿಯಾಗಿ ಬಸ್ ರಸ್ತೆಯಿಂದ ಸ್ಕಿಡ್ ಆಗಿದೆ. ಪರಿಣಾಮ ಬಸ್ 90 ಅಡಿ ಆಳದ ಕಣಿವೆಗೆ ಉರುಳಿ ಬೀಳುವುದನ್ನ ಮರವೊಂದು ತಪ್ಪಿಸಿದೆ.

ಚಮೋಲಿ ಜಿಲ್ಲೆಯ ಗೋಚಾರ್ ಎಂಬಲ್ಲಿ ಐಟಿಬಿಪಿ ಕ್ಯಾಂಪಸ್ ಬಳಿ ಎದುರುಗಡೆಯಿಂದ ಬರುತ್ತಿದ್ದ ಟ್ರಕ್, ಬಸ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ 22 ಯಾತ್ರಿಕರು ಅಪಾಯದಿಂದ ಪಾರಾಗಿದ್ದಾರೆ.

ಆದ್ರೆ ಆರು ಮಂದಿ ಯಾತ್ರಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶ್ರೀನಗರದ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸ್ಥಳದಲ್ಲಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಐಟಿಬಿಪಿ ಪೊಲೀಸರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ರು. ಈ ಎಲ್ಲಾ ಯಾತ್ರಿಕರು ರಾಜಸ್ಥಾನದ ಉದಯಪುರ, ದುರ್ಗಾಪುರದಿಂದ, ಬದ್ರಿನಾಥ್-ಋಷಿಕೇಶ್ ಯಾತ್ರೆಗೆ ತೆರಳುತ್ತಿದ್ದರು.

ಪ್ರಿಯತಮೆಗೆ ಸರಸದ ವಿಡಿಯೋ ತೋರಿಸಿ ನೀಚಕೃತ್ಯ

0
0

ಕಟಕ್: ಒಡಿಶಾದ ಕಟಕ್ ಮಹಿಳಾ ಠಾಣೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಪ್ರಿಯತಮೆಗೆ ದೈಹಿಕ ಸಂಬಂಧ ಬೆಳೆಸಿದ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.

ಸಿದ್ಧಾಂತ್ ಕುಮಾರ್ ಬಿಸ್ವಾಲ್ ಅಲಿಯಾಸ್ ನಿಕ್ಕಿ(27) ಬಂಧಿತ ಆರೋಪಿಯಾಗಿದ್ದಾನೆ. ಕಟಕ್ ನಲ್ಲಿರುವ ರಾಣಿಹಾತ್ ಪ್ರದೇಶದ ನಿವಾಸಿಯಾಗಿರುವ ಯುವತಿ ನೀಡಿದ ದೂರನ್ನು ಆಧರಿಸಿ ಆತನನ್ನು ಬಂಧಿಸಲಾಗಿದೆ.

ಯುವತಿ ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ಆಕೆಯನ್ನು ಪ್ರೀತಿಸಿದ್ದ ಸಿದ್ಧಾಂತ್ ಕುಮಾರ್ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಗುರುದಿಜ್ ಹಾತಿಯಾ ಕಾಡಿನಲ್ಲಿ ಆಕೆ ಪ್ರಜ್ಞೆ ತಪ್ಪಿದ್ದಾಗ, ದೈಹಿಕ ಸಂಬಂಧ ಬೆಳೆಸಿ ವಿಡಿಯೋ ಮಾಡಿಕೊಂಡಿದ್ದಾನೆ.

ಇತ್ತೀಚೆಗೆ ಯುವತಿ ಮದುವೆಯಾಗುವಂತೆ ಒತ್ತಾಯ ಮಾಡಿದಾಗ, ಆ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ಬೆದರಿಸಿದ್ದಾನೆ. ಇದರಿಂದ ನೊಂದ ಯುವತಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಎಸ್.ಸಿ.ಬಿ. ಮೆಡಿಕಲ್ ಕಾಲೇಜಿಗೆ ಕಳಿಸಲಾಗಿದೆ.

ವಿಮಾನ 7 ತಾಸು ತಡವಾಗಲು ಕಾರಣ ಏನು ಗೊತ್ತಾ?

0
0

ಪ್ರಯಾಣ ಅನ್ನೋದು ಕೆಲವರಿಗೆ ಇಷ್ಟವಾದರೆ ಹಲವರಿಗೆ ಕಷ್ಟದ ಸಂಗತಿ. ಇನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವಾಗ ಯಾವುದಾದರೂ ಕಾರಣಕ್ಕೆ ವಿಮಾನ ಲೇಟಾದರೆ ಕಾಯುವುದಿನ್ನೂ ಕಷ್ಟ. ಅಂಥದ್ದೇ ಕಷ್ಟ ಏರ್ ಕೆನಡಾ ವಿಮಾನದ ಪ್ರಯಾಣಿಕರಿಗೂ ಬಂದಿತ್ತು. ಅದಕ್ಕೆ ಕಾರಣವಾಗಿದ್ದು ರಾಕೂನ್.

ಹೌದು ರಾಕೂನ್ ಅಂದರೆ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುವ ಬೆಕ್ಕಿನ ಜಾತಿಯ ಒಂದು ಪ್ರಾಣಿ. ಇದು ಕೆನಡಾದ ಸಸ್ಕಾಟೂನ್ ವಿಮಾನ ನಿಲ್ದಾಣದಿಂದ ಟೊರಾಂಟೋಗೆ ಹೊರಡಬೇಕಿದ್ದ ವಿಮಾನ ನಿಲ್ದಾಣದ ಹವಾನಿಯಂತ್ರಣ ಯುನಿಟ್ ನಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಏರ್ ಲೈನ್ ಸಿಬ್ಬಂದಿ ಹಾಗೂ ಪ್ರಾಣಿ ನಿಯಂತ್ರಣ ತಜ್ಞರು ಸೇರಿ ಅಂತೂ ಇಂತೂ ರಾಕೂನ್ ಅನ್ನು ಹೊರತೆಗೆದಿದ್ದಾರೆ. ಇದಕ್ಕೆ ಬರೋಬ್ಬರಿ 7 ತಾಸು ತಗುಲಿದೆ. ಅಲ್ಲಿಯವರೆಗೂ ವಿಮಾನದ ಪ್ರಯಾಣಿಕರು ಕಾದಿದ್ದೇ ಬಂತು..!

ಈ ಭೂಪನ ಬಳಿ ಇದ್ವು ಬರೋಬ್ಬರಿ 100 ಐಫೋನ್

0
0

ನವದೆಹಲಿ: ಒಂದೆರಡಲ್ಲ ಬರೋಬ್ಬರಿ 100 ಐಫೋನ್ ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಬಂಧಿಸಲಾಗಿದ್ದು, ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಭಾನುವಾರ ವಿಮಾನ ನಿಲ್ದಾಣದಲ್ಲಿ ಕಾರ್ಯನಿರತರಾಗಿದ್ದ ಕಸ್ಟಮ್ಸ್ ಅಧಿಕಾರಿಗಳು, ಅನುಮಾನದ ಮೇಲೆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ, 100 ಆಪಲ್ ಐಫೋನ್ ಎಕ್ಸ್ ಸಾಗಿಸುತ್ತಿರುವುದು ಗೊತ್ತಾಗಿದೆ.

ವಶಪಡಿಸಿಕೊಂಡ ಫೋನ್ ಗಳ ಬೆಲೆ 85,61,169 ರೂ. ಆಗಿದೆ ಎಂದು ಮೂಲಗಳು ತಿಳಿಸಿವೆ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಮದುವೆ ದಿಬ್ಬಣದ ವಾಹನ ಪಲ್ಟಿಯಾಗಿ ಓರ್ವ ಸಾವು, 15 ಮಂದಿಗೆ ಗಾಯ

0
0

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ರೈಲ್ವೇ ಗೊಲ್ಲಹಳ್ಳಿ ಬಳಿ ಮದುವೆ ದಿಬ್ಬಣದ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ.

ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರು ನಾಗಸಂದ್ರ ನಿವಾಸಿ ರವಿ(28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕ ನರಸಿಂಹ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ.


ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

0
0

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇದೇ ತಿಂಗಳಾಂತ್ಯಕ್ಕೆ 10 ಲಕ್ಷ ಬ್ಯಾಂಕ್ ನೌಕರರು 2 ದಿನ ಮುಷ್ಕರ ಕೈಗೊಂಡಿದ್ದು, ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಮೊದಲೇ ಮುಗಿಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳಿ.

ವೇತನ ಏರಿಕೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಮೇ ತಿಂಗಳ ಅಂತ್ಯಕ್ಕೆ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿರುವುದಾಗಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ ತಿಳಿಸಿದ್ದಾರೆ.

ಭಾರತೀಯ ಬ್ಯಾಂಕ್ ಗಳ ಒಕ್ಕೂಟ ಶೇ. 2 ರಷ್ಟು ವೇತನ ಏರಿಕೆ ಪ್ರಸ್ತಾಪಿಸಿದ್ದು, ಇದನ್ನು ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ತಿರಸ್ಕರಿಸಿದೆ. ಕಾರ್ಪೊರೇಟ್ ಉದ್ಯಮಿಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ, ನೌಕರರ ವೇತನ ಏರಿಕೆ ಮಾಡಲು ನಿರಾಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯ ಕೂಡಲೇ ಮಧ್ಯಪ್ರವೇಶಿಸಿ, ವೇತನ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ 2 ದಿನ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪತಿಯ ಎದುರಲ್ಲೇ ಕೈ ಹಾಕಿದ ಕಾಮುಕ

0
0

ಬೆಂಗಳೂರು: ರಾಜಧಾನಿಯಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದೆ. ಪತಿಯ ಎದುರಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಜೆ.ಪಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾತ್ರಿ ಊಟ ಮುಗಿಸಿ ಹೋಟೆಲ್ ನಿಂದ ದಂಪತಿ ಹೊರ ಬಂದಿದ್ದು, ಬೈಕ್ ನಲ್ಲಿ ಬಂದ ಯುವಕನೊಬ್ಬ ಮಹಿಳೆಯ ಟೀ ಶರ್ಟ್ ಎಳೆದು ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆಯ ಕೂಗಾಟ ಕೇಳಿದ ಸಾರ್ವಜನಿಕರು ನೆರವಿಗೆ ಬಂದಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಯುವಕ ಮಹಾರಾಷ್ಟ್ರ ಮೂಲದವನು ಎನ್ನಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾರಸುದಾರರಿಲ್ಲದ 2.98 ಕೋಟಿ ರೂ. ಪತ್ತೆ

0
0

ತುಮಕೂರು: ವಾರಸುದಾರರಿಲ್ಲದ ಬರೋಬ್ಬರಿ 2.98 ಕೋಟಿ ರೂ. ಹಣವನ್ನು ತುಮಕೂರು ಕ್ಯಾತ್ಸಂದ್ರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ಬಂದಿದ್ದು, ಈ ಮಾಹಿತಿ ಆಧರಿಸಿ ಪೊಲೀಸರು ಕ್ಯಾತ್ಸಂದ್ರ ಟೋಲ್ ಬಳಿ ಬಸ್ ಪರಿಶೀಲನೆ ನಡೆಸಿದ್ದಾರೆ.

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2.98 ಕೋಟಿ ರೂ. ಪತ್ತೆಯಾಗಿದ್ದು, ಹಣವನ್ನು ಜಪ್ತಿ ಮಾಡಲಾಗಿದೆ. ಹಣ ಯಾರಿಗೆ ಸೇರಿದ್ದು ಎಂಬ ಮಾಹಿತಿ ಇಲ್ಲವಾಗಿದೆ. ಕ್ಯಾತ್ಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ರೀರಾಮುಲು ಪರ ಕಿಚ್ಚ ಭರ್ಜರಿ ಕ್ಯಾಂಪೇನ್

0
0

ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ನಟರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಯಾವುದೇ ರಾಜಕೀಯ ಪಕ್ಷವನ್ನು ಸೇರದಿದ್ದರೂ, ಈಗಾಗಲೇ ಸ್ಟಾರ್ ನಟರಾದ ದರ್ಶನ್, ಯಶ್ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಬಿ. ಶ್ರೀರಾಮುಲು ಪರವಾಗಿ ಯಶ್ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಇಂದು ಕಿಚ್ಚ ಸುದೀಪ್ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ.

ಮೊದಲಿಗೆ ಸುದೀಪ್ ಸಿ.ಎಂ. ಪರವಾಗಿ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಅವರು ನಮ್ಮ ಸಮುದಾಯದವರಾಗಿ ನನ್ನ ಪರ ಪ್ರಚಾರ ನಡೆಸಬೇಕೆಂದು ಶ್ರೀರಾಮುಲು ಹೇಳಿಕೆ ನೀಡಿದ್ದರು.

ಬಾದಾಮಿಗೆ ಪ್ರಚಾರಕ್ಕೆ ಹೋಗಲ್ಲ, ಶ್ರೀರಾಮುಲು ಸ್ನೇಹಿತರಾಗಿದ್ದಾರೆ ಎಂದು ಸುದೀಪ್ ಹೇಳಿದ್ದರು. ಮೊಳಕಾಲ್ಮೂರು ಬಳ್ಳಾರಿ, ಬಳ್ಳಾರಿ ಗ್ರಾಮಾಂತರ ಸಂಡೂರು ಕ್ಷೇತ್ರಗಳಲ್ಲಿ ಇಂದು ಸುದೀಪ್ ಪ್ರಚಾರ ಕೈಗೊಂಡಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದ ಕೊಂಡ್ಲಹಳ್ಳಿ, ರಾಂಪುರ ಮೊದಲಾದ ಕಡೆಗಳಲ್ಲಿ ಸುದೀಪ್ ರೋಡ್ ಶೋ ನಡೆಸಿ ಶ್ರೀರಾಮುಲು ಪರ ಪ್ರಚಾರ ನಡೆಸಲಿದ್ದಾರೆ.

ಎ.ಟಿ.ಎಂ. ಬಳಕೆದಾರರಿಗೆ ಗುಡ್ ನ್ಯೂಸ್

0
0

ಎ.ಟಿ.ಎಂ.ನಲ್ಲಿ ಹಣವಿಲ್ಲ, ಮತ್ತೆ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ ಎಂಬ ದೂರು ಗ್ರಾಹಕರಿಂದ ಕೇಳಿ ಬಂದಿವೆ. ಇದೇ ವೇಳೆ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ದೇಶದಲ್ಲಿ ಪ್ರತಿದಿನ 3000 ಕೋಟಿ ರೂ. ಮೌಲ್ಯದ 500 ರೂ. ನೋಟುಗಳನ್ನು ಮುದ್ರಿಸಲಾಗುತ್ತಿದೆ. ನಗದು ಕೊರತೆ ಸರಿಯಾಗಿದೆ. ಶೇ. 85 ರಷ್ಟು ಎ.ಟಿ.ಎಂ.ಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

ದೇಶದಲ್ಲಿ 500 ರೂ., 200 ರೂ., 100 ರೂ. ನೋಟುಗಳು ಹೆಚ್ಚಿದ್ದು, ಬೇಡಿಕೆಯನ್ನು ಪೂರೈಸಲಾಗ್ತಿದೆ. 2000 ರೂ. ಮುಖಬೆಲೆಯ 7 ಲಕ್ಷ ಕೋಟಿ ರೂ. ಚಲಾವಣೆಯಲ್ಲಿದ್ದು, ನಗದು ಪರಿಸ್ಥಿತಿ ಕುರಿತು ಅವಲೋಕನ ನಡೆಸಿದಾಗ ದೇಶದಲ್ಲಿನ ಶೇ. 85 ರಷ್ಟು ನೋಟು ಚಲಾವಣೆಯಲ್ಲಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಇನ್ನು 2000 ರೂ. ನೋಟು ವ್ಯವಹಾರಕ್ಕೆ ಆರಾಮದಾಯಕವೆನಿಸದ ಕಾರಣ 500 ರೂ. ಮುಖಬೆಲೆಯ ನೋಟುಗಳ ಮುದ್ರಣ ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲೆಡೆ ಭರ್ಜರಿ ಕ್ಯಾಂಪೇನ್, ಸೋಲಿನ ಭಯದಿಂದ ಕ್ಷೇತ್ರದಲ್ಲೇ ಉಳಿದ ನಾಯಕರು

0
0

ದೇಶದ ಗಮನ ಸೆಳೆದಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12 ರಂದು ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ 4 ದಿನಗಳಷ್ಟೇ ಬಾಕಿ ಉಳಿದಿದ್ದು, ಘಟಾನುಘಟಿ ನಾಯಕರೆಲ್ಲಾ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಸ್ಟಾರ್ ಪ್ರಚಾರಕರು ಭಾರೀ ಓಡಾಟ ನಡೆಸುವಂತಾಗಿದೆ. ಕಳೆದ ತಿಂಗಳಿಂದ ಸತತ ಪ್ರಯಾಣ, ಪ್ರಚಾರದಲ್ಲಿಯೇ ನಿರತರಾಗಿರುವ ನಾಯಕರು ಬಹಿರಂಗ ಪ್ರಚಾರಕ್ಕೆ ಕೆಲವು ದಿನಗಳಷ್ಟೇ ಉಳಿದಿರುವುದರಿಂದ ಮತ್ತೆ ಚುರುಕಾಗಿದ್ದಾರೆ.

ಕೊನೆಯ ದಿನಗಳ ಪ್ರಚಾರದ ಭರಾಟೆ ಮುಗಿಲುಮುಟ್ಟಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ, ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರು, ಕೇಂದ್ರ ನಾಯಕರೊಂದಿಗೆ ರಾಜ್ಯದ ನಾಯಕರು ಕೂಡ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕೆಲವು ಕಲಾವಿದರು, ಸಂಘ –ಸಂಸ್ಥೆಗಳು, ಸಂಘಟನೆಗಳ ಪ್ರತಿನಿಧಿಗಳು ಕೂಡ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.

ರಾಜ್ಯದ ಕೆಲವು ನಾಯಕರು ಸೋಲಿನ ಭಯದಿಂದ ತಮ್ಮ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದಾರೆ. ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳದೇ ತಮ್ಮ ಕ್ಷೇತ್ರಗಳಲ್ಲಿಯೇ ಮನೆ ಮನೆ ಪ್ರಚಾರ, ಪಾದಯಾತ್ರೆ ಮೂಲಕ ಮತದಾರರ ಮನಸೆಳೆಯುವಲ್ಲಿ ನಿರತರಾಗಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿರುವ ಹಿನ್ನಲೆಯಲ್ಲಿ ಕೊನೆ ಹಂತದ ಪ್ರಚಾರ ಭಾರೀ ಜೋರಾಗಿ ನಡೆದಿದೆ.

6 ಪಂದ್ಯ ಸೋತ ಆರ್.ಸಿ.ಬಿ.ಗೆ ಸಿಗುತ್ತಾ ಗೆಲುವು….?

0
0

ಹೈದರಾಬಾದ್: ಆಡಿದ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಪ್ಲೇ ಆಫ್ ಹಂತಕ್ಕೇರಲು ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಈಗಾಗಲೇ ಪ್ಲೇ ಆಫ್ ಹಾದಿ ಕಠಿಣವಾಗಿರುವುದರಿಂದ ಆರ್.ಸಿ.ಬಿ. ಒತ್ತಡಕ್ಕೆ ಒಳಗಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಐ.ಪಿ.ಎಲ್. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಹಾಗೂ ಕೇನ್ ವಿಲಿಯಮ್ಸನ್ ಬಳಗ ಮುಖಾಮುಖಿಯಾಗಲಿವೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಆಟಗಾರರಿದ್ದರೂ, ಆರ್.ಸಿ.ಬಿ.ಗೆ. ಗೆಲುವಿನ ಲಯ ಸಿಕ್ಕಿಲ್ಲ. ಸ್ಟಾರ್ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಫೀಲ್ಡಿಂಗ್ ನಲ್ಲಿಯೂ ವಿಫಲವಾಗುತ್ತಿದೆ. ಇನ್ನು ಸತತವಾಗಿ 4 ಪಂದ್ಯಗಳನ್ನು ಜಯಿಸಿರುವ ಸನ್ ರೈಸರ್ಸ್ ಹೈದರಾಬಾದ್ ಎಂತಹುದೇ ತಂಡವನ್ನು ಮಣಿಸುವ ಉತ್ಸಾಹದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ಹೈದರಾಬಾದ್ ತಂಡ 7 ಪಂದ್ಯಗಳಲ್ಲಿ ಗೆಲುವು ಕಂಡಿದೆ.


ನೋಡಬನ್ನಿ ಬೇಲೂರು ಚೆನ್ನಕೇಶವ ದೇವಾಲಯ

0
0

ಬೇಲೂರು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ವಿಶ್ವವಿಖ್ಯಾತ ಚೆನ್ನಕೇಶವ ದೇವಾಲಯ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಬೇಲೂರು ಪ್ರಮುಖವಾಗಿದೆ.

ಹೊಯ್ಸಳರ ಕಾಲದಲ್ಲಿ ಪ್ರಮುಖ ಸ್ಥಳವಾಗಿದ್ದ ಬೇಲೂರಿನಲ್ಲಿ 443.5 ಅಡಿ ಉದ್ದ, 396 ಅಡಿ ಅಗಲದ ಅಂಗಳದ ಮಧ್ಯೆ ಚೆನ್ನಕೇಶವ ದೇವಾಲಯ ಇದೆ. ನಕ್ಷತ್ರ ಆಕಾರದ 4 ಅಡಿ ಎತ್ತರದ ಜಗುಲಿಯ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ.

ದೇವಾಲಯದಲ್ಲಿ ದ್ರಾವಿಡ ಶೈಲಿಯ ಗೋಪುರಗಳಿವೆ. ದೇವಾಲಯಕ್ಕೆ 3 ಬಾಗಿಲು ಇದ್ದು, ನವರಂಗ ಬಾಗಿಲ ಇಕ್ಕೆಲಗಳಲ್ಲಿ ಸಳನು ಹುಲಿಯನ್ನು ಕೊಂದ ಚಿತ್ರಣವಿದೆ. ಇಲ್ಲಿನ ಜಾಲರಂಧ್ರಗಳು ವೈವಿಧ್ಯತೆಯಿಂದ ಕೂಡಿವೆ. ಚೆನ್ನಕೇಶವ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ, ಸುತ್ತಲೂ ಮನಮೋಹಕವಾಗಿ ಕೆತ್ತಿರುವ ರಾಮಾಯಣ, ಮಹಾಭಾರತದ ಕಥಾ ಭಾಗಗಳು.

ದೇವಾಲಯದ ಸುತ್ತಲೂ ಕಡೆದಿರುವ ಶಿಲಾಬಾಲಿಕೆಯರ ಚಿತ್ರಣಗಳು ವಿಶ್ವ ಪ್ರಸಿದ್ಧಿಯಾಗಿವೆ. ಶಿಲ್ಪಿಗಳ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ. ಚೆನ್ನಕೇಶವ ದೇವಾಲಯದ ಜೊತೆಗೆ ಕಪ್ಪೆಚನ್ನಿಗರಾಯನ ಗುಡಿ, ವೀರನಾರಾಯಣ ದೇವಸ್ಥಾನಗಳು ಕೂಡ ಅದ್ಭುತವಾದ ಶಿಲ್ಪಕಲಾ ವೈಭವವನ್ನು ಮೈಗೂಡಿಸಿಕೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ. ನೀವು ಒಮ್ಮೆ ವಿಶ್ವ ಖ್ಯಾತಿಯ ಬೇಲೂರು ಚೆನ್ನಕೇಶವ ದೇವಾಲಯವನ್ನು ನೋಡಿ ಬನ್ನಿ.

‘ರೈತರ ಸಾಲ ಮನ್ನಾ, ಬೀಜ -ಗೊಬ್ಬರ ಉಚಿತ’

0
0

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ‘ಜನತಾ ಪ್ರಣಾಳಿಕೆ –ಜನರದ್ದೇ ಆಳ್ವಿಕೆ’ ಶೀರ್ಷಿಕೆಯ ಜೆ.ಡಿ.ಎಸ್. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಹಲವು ಭರವಸೆ ನೀಡಲಾಗಿದೆ.

ರೈತರ ಸಾಲ ಸಂಪೂರ್ಣ ಮನ್ನಾ, ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ಗೊಬ್ಬರ ನೀಡಿಕೆ. ಗ್ರಾಮಾಂತರ ಪ್ರದೇಶದ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಉಚಿತ ವಿದ್ಯುತ್, ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಕೆ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ ಮೊದಲಾದ ಭರವಸೆ ನೀಡಲಾಗಿದೆ.

ಗರ್ಭಿಣಿಯರು –ಬಾಣಂತಿಯರಿಗೆ 6 ತಿಂಗಳು 6000 ರೂ. ಸಹಾಯಧನ, 70 ವರ್ಷ ಮೇಲ್ಪಟ್ಟವರಿಗೆ 5000 ರೂ., ವಿಕಲಚೇತನರಿಗೆ 2000 ರೂ., ವಿಧವೆಯರಿಗೆ 2000 ರೂ. ವೇತನ, ಬಡ ಮಹಿಳೆಯರ ಕುಟುಂಬದ ನಿರ್ವಹಣೆಗೆ 2000 ರೂ. ನೀಡಲಾಗುವುದು.

ಪ್ರತಿ ತಿಂಗಳು ವಿಧಾನಸೌಧದಲ್ಲಿ ರೈತರ ಸಭೆ, ಗ್ರಾಮಾಂತರ ಪ್ರದೇಶದ ಯುವಕರಿಗೆ ಸಸಿ ನೆಡುವ ಕೆಲಸದ ಜೊತೆಗೆ  ಗೌರವಧನ, ವೃದ್ಧರಿಗೆ ಉಚಿತ ಬಸ್ ಪಾಸ್, ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಪೇಟಿಎಂನಲ್ಲಿ ಹಣ ಪಾವತಿಸಲು ಇಂಟರ್ನೆಟ್ ಬೇಕಾಗಿಲ್ಲ…!

0
0

ಇದು ಡಿಜಿಟಲ್ ದುನಿಯಾ. ಇಲ್ಲಿ ಎಲ್ಲವೂ ಆನ್ಲೈನ್. ಆನ್ಲೈನ್ ಹಣದ ವ್ಯವಹಾರ ಜನಪ್ರಿಯತೆ ಗಳಿಸ್ತಿದೆ. ಅನೇಕ ಕಂಪನಿಗಳು ಆನ್ಲೈನ್ ಪೇಮೆಂಟ್, ಡಿಜಿಟಲ್ ವಾಲೆಟ್, ನೆಟ್ ಬ್ಯಾಂಕಿಂಗ್ ಸೌಲಭ್ಯ ನೀಡ್ತಿದೆ. ಆದ್ರೆ ಆನ್ಲೈನ್ ಪೇಮೆಂಟ್ ಗೆ ಇಂಟರ್ನೆಟ್ ಬೇಕೇಬೇಕು. ಭಾರತದ ಅನೇಕ ಕಡೆ ಇಂಟರ್ನೆಟ್ ಸೌಲಭ್ಯ ಸರಿಯಾಗಿಲ್ಲ. ಇದು ಆನ್ಲೈನ್ ಪೇಮೆಂಟ್ ವಿಳಂಬಕ್ಕೆ ಕಾರಣವಾಗ್ತಿದೆ.

ಭಾರತದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡಿರುವ ಪೇಟಿಎಂ ಆಪ್ಲೈನ್ ಪೇಮೆಂಟ್ ಆಯ್ಕೆ ಶುರು ಮಾಡಿದೆ. ಇದ್ರಲ್ಲಿ ಬಳಕೆದಾರರು ಇಂಟರ್ನೆಟ್ ಇಲ್ಲದೆ ಸುಲಭವಾಗಿ ಪೇಮೆಂಟ್ ಮಾಡಬಹುದಾಗಿದೆ. ಪೇಟಿಎಂ ಇದಕ್ಕಾಗಿ ಹೊಸ ಟ್ಯಾಪ್ ಕಾರ್ಡ್ ಸೇವೆ ಶುರು ಮಾಡಿದೆ.

ಟ್ಯಾಪ್ ಕಾರ್ಡ್ ಆಯ್ಕೆಯಲ್ಲಿ ಗ್ರಾಹಕರು ಸುಲಭವಾಗಿ ಎನ್ ಎಫ್ ಸಿ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಅಂತರ್ಜಾಲವಿಲ್ಲದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಪೇಟಿಎಂ ಈ ಸೇವೆಯನ್ನು ಶುರು ಮಾಡಿದೆ. ಟ್ಯಾಪ್ ಕಾರ್ಡ್ ನಲ್ಲಿ ಸುಲಭವಾಗಿ ಕ್ಯೂಆರ್ ಕೂಡ ಸ್ಕ್ಯಾನ್ ಮಾಡಿ ಹಣವನ್ನು ವರ್ಗಾವಣೆ ಮಾಡಬಹುದು. ಇದು ಸುರಕ್ಷಿತ ಡಿಜಿಟಲ್ ಪೇಮೆಂಟ್ ಸೇವೆ ಎಂದು ಪೇಟಿಎಂ ಹೇಳಿದೆ.

ಲಿವ್ ಇನ್ ನಲ್ಲಿದ್ದ ಪತಿ ಮನೆಗೆ ಅಚಾನಕ್ ಬಂದ್ಲು ಪತ್ನಿ..!

0
0

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದ ಮಹಿಳೆಗೆ ಪತಿ ಮೇಲೆ ಅನುಮಾನ ಮೂಡಿದೆ. ಪತಿಗೆ ತಿಳಿಯದಂತೆ ನೋಯ್ಡಾಗೆ ಬಂದಿದ್ದಾಳೆ. ಅಲ್ಲಿ ಪತಿ ಬಣ್ಣ ಬಯಲಾಗಿದೆ. ಪತ್ನಿಯಿದ್ದೂ ಪತಿ, ಸ್ನೇಹಿತೆ ಜೊತೆ ಲಿವ್ ಇನ್ ನಲ್ಲಿದ್ದ ವಿಷ್ಯ ಬಹಿರಂಗವಾಗಿದೆ.

ಪತ್ನಿ ಮನೆಗೆ ಬರ್ತಿದ್ದಾಳೆಂಬ ಸಂಗತಿ ಗೊತ್ತಾಗ್ತಿದ್ದಂತೆ ಪತಿ ಪರಾರಿಯಾಗಿದ್ದಾನಂತೆ. ಪತಿ ಪ್ರೇಮಿಗೆ ಪತ್ನಿ ಬುದ್ಧಿ ಕಲಿಸಿದ್ದಾಳೆ. ಇಬ್ಬರ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಾಶಿನಗರದ ಹುಡುಗಿ ಮದುವೆ 2013 ರಲ್ಲಿ ಪಕ್ಕದ ಗ್ರಾಮದ ಹುಡುಗನ ಜೊತೆಯಾಗಿತ್ತು. ಪತಿ ನೋಯ್ಡಾದಲ್ಲಿ ಕೆಲಸ ಮಾಡ್ತಿದ್ದ.

ಪತ್ನಿ ಗಂಡನ ಮನೆಯಲ್ಲಿ ವಾಸವಾಗಿದ್ದಳು. ವರ್ಷಕ್ಕೆ 2-3 ಬಾರಿ ಬರ್ತಿದ್ದ ಪತಿ ಕೆಲಸದ ಒತ್ತಡದ ಸುಳ್ಳು ಹೇಳ್ತಿದ್ದ. ನೋಯ್ಡಾದಲ್ಲಿ ಮನೆ ಮಾಡಿದ ಮೇಲೆ ಕರೆದುಕೊಂಡು ಹೋಗ್ತೇನೆ ಎನ್ನುತ್ತಿದ್ದನಂತೆ. ಪತ್ನಿಗೆ ಶಿಕ್ಷಕಿ ಹುದ್ದೆ ಸಿಕ್ಕಿದ ಮೇಲೂ ನೋಯ್ಡಾಗೆ ಕರೆದುಕೊಂಡು ಹೋಗುವ ಮನಸ್ಸು ಮಾಡಿರಲಿಲ್ಲ. ಮಕ್ಕಳನ್ನು ನೀಡಲೂ ನಿರಾಕರಿಸಿದ್ದ. ಅನುಮಾನಗೊಂಡ ಮಹಿಳೆ ಸಹೋದರನ ಜೊತೆ ನೋಯ್ಡಾದಲ್ಲಿರುವ ಮನೆಗೆ ಬಂದಿದ್ದಳು.

ಈ ಆಟಗಾರನ ಹಿಂದೆ ಬಿದ್ದಿದ್ದಾಳೆ ಕ್ರಿಕೆಟರ್ ಡೇನಿಯಲ್ ವ್ಯಾಟ್

0
0

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರ್ತಿದ್ದಾರೆ. ಶನಿವಾರ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ ರಶೀದ್ ಖಾನ್ ಎರಡು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಪಂದ್ಯ ಪುರುಷ ಪ್ರಶಸ್ತಿ ಗಿಟ್ಟಿಸಿಕೊಂಡ ರಶೀದ್  ಈಗ ಸುದ್ದಿಯಲ್ಲಿದ್ದಾರೆ. ಇದಕ್ಕೆ ಇಂಗ್ಲೆಂಡ್ ಆಟಗಾರ್ತಿ ಡೇನಿಯಲ್ ವ್ಯಾಟ್ ಕಾರಣ. ವಿರಾಟ್ ಕೊಹ್ಲಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ ಡೇನಿಯಲ್ ಶೀಘ್ರದಲ್ಲಿಯೇ ರಶೀದ್ ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.

ರಶೀದ್ ಹಾಗೂ ಡೇನಿಯಲ್ ನಡುವೆ ವಿಶೇಷ ಸಂಬಂಧವಿದೆ. ಇಬ್ಬರೂ ಪರಸ್ಪರರನ್ನು ಗೌರವಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಡೇನಿಯಲ್ ರಶೀದ್ ಹೊಗಳಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ರಶೀದ್ ಉತ್ತಮ ಪ್ರದರ್ಶನ ನೀಡಿದಾಗ ಡೇನಿಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಶೀದ್ ಉತ್ತಮ ಪ್ರದರ್ಶನ ತೋರುತ್ತಿದ್ದಂತೆ ಹೈದ್ರಾಬಾದ್ ತಂಡದ ಅಧಿಕೃತ ಟ್ವೀಟರ್ ನಲ್ಲಿ ರಶೀದ್ ಗೆ ಅಭಿನಂದನೆ ಸಲ್ಲಿಸಲಾಯ್ತು. ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ಡೇನಿಯಲ್, ರಶೀದ್ ಮಾಂತ್ರಿಕ ಎಂದು ಟ್ವಿಟ್ ಮಾಡಿದ್ರು.

Viewing all 89064 articles
Browse latest View live




Latest Images