Quantcast
Channel: Latest News | Kannada Dunia | Kannada News | Karnataka News | India News
Viewing all 90003 articles
Browse latest View live

ಮತದಾನಕ್ಕೂ ಮೊದಲೇ ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಶಾಕ್

$
0
0

ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಂಸದ ಬಿ. ಶ್ರೀರಾಮುಲು ಸ್ಪರ್ಧಿಸಿರುವ ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಮತದಾನಕ್ಕೂ ಮೊದಲೇ ಕಾಂಗ್ರೆಸ್ ಗೆ ಐ.ಟಿ. ಶಾಕ್ ನೀಡಿದೆ.

ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ರೆಸಾರ್ಟ್ ಮೇಲೆ ಐ.ಟಿ. ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದ 10 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ತಡರಾತ್ರಿ ದಾಳಿ ಮಾಡಿದೆ. ಸಿ.ಆರ್.ಪಿ.ಎಫ್., ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬಾದಾಮಿ ಹೊರ ವಲಯದಲ್ಲಿರುವ ಈ ರೆಸಾರ್ಟ್ ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಸೇರಿದ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆನಂದ್ ಸಿಂಗ್ ಅವರಿಗೆ ಸೇರಿದ್ದಾಗಿದೆ. ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಆಪ್ತ ಸಿ.ಎಂ. ಇಬ್ರಾಹಿಂ ರೆಸಾರ್ಟ್ ನಲ್ಲಿದ್ದರು. ದಾಳಿಯ ಬಳಿಕ ಅವರು ಅಲ್ಲಿಂದ ಹೊರಗೆ ಹೋಗಿದ್ದಾರೆ. ಅಧಿಕಾರಿಗಳಿಂದ ಪರಿಶೀಲನೆ ಕಾರ್ಯ ಇನ್ನೂ ಮುಂದುವರೆದಿದೆ.


ನಿರ್ಮಾಪಕನ ಸಾವಿಗೆ ಕಾರಣವಾಯ್ತು ಜಿರಾಫೆ

$
0
0

ಚಿತ್ರೀಕರಣಕ್ಕೆಂದು ಹೋಗಿದ್ದ ಚಲನಚಿತ್ರ ನಿರ್ಮಾಪಕನೊಬ್ಬನನ್ನು ಜಿರಾಫೆಯೊಂದು ಸಾಯಿಸಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ದಕ್ಷಿಣ ಆಫ್ರಿಕಾದ ವಾಯುವ್ಯ ಜೋಹಾನ್ಸ್ ಬರ್ಗ್ ನಲ್ಲಿ ಕೆಲಸದ ಮೇಲೆ ಬಂದಿದ್ದ ದಕ್ಷಿಣ ಆಫ್ರಿಕಾದ ಚಿತ್ರ ನಿರ್ಮಾಪಕ ಕಾರ್ಲೋಸ್ ಕರ್ವಾಲ್ಹೋ ಎಂಬಾತನನ್ನು ಜಿರಾಫೆ ಸಾಯಿಸಿದೆ ಎಂದು ಫಿಲ್ಮ್ ಏಜೆನ್ಸಿ ಕಲ್ಲಾ ಕ್ರೇವ್ ಹೇಳಿದೆ. ಆದರೆ ದಕ್ಷಿಣ ಆಫ್ರಿಕಾ ಮಾಧ್ಯಮಗಳು ಕಾರ್ಲೋಸ್ ಜಿರಾಫೆಗೆ ತೀರಾ ಹತ್ತಿವಿದ್ದ. ಹಾಗೂ ಅದು ಕುತ್ತಿಗೆ ಬೀಸಿದ್ದು ಸಾವಿಗೆ ಕಾರಣವಾಗಿದೆ ಎಂದು ಹೇಳಿದೆ.

ಚಿತ್ರೀಕರಣಕ್ಕಾಗಿ ಕಾರ್ಲೋಸ್ ಗ್ಲೇನ್ ಆಫ್ರಿಕ್ ಫಾರ್ಮ್ ಗೆ ಬಂದಿದ್ದು, ಅಲ್ಲಿ ಈ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಜೊಹಾನ್ಸ್ ಬರ್ಗ್ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

ಕಳ್ಳತನ ಮಾಡಿ ಸುಸ್ತಾಗಿದ್ದವನು ನಿದ್ದೆಗೆ ಜಾರಿ ಸಿಕ್ಕಿಬಿದ್ದ

$
0
0

ನಿದ್ದೆ ಅನ್ನೋದು ಯಾರನ್ನ ತಾನೆ ಬಿಟ್ಟಿದೆ ಹೇಳಿ. ಹುಟ್ಟಿದ ಮೇಲೆ ಎಲ್ಲರೂ ನಿದ್ದೆ ಮಾಡಲೇಬೇಕು. ಹೀಗೆ ಕಳ್ಳನೊಬ್ಬನಿಗೆ ಬಂದ ನಿದ್ದೆ ಆತ ಕದ್ದ ವಸ್ತುಗಳೊಂದಿಗೆ ಸಿಕ್ಕಿಬೀಳೋಕೆ ಕಾರಣವಾಗಿದೆ. ಹೌದು ಕಳ್ಳತನ ಮಾಡಿ ಓಡಿ ಓಡಿ ಸುಸ್ತಾದ ಕಳ್ಳನೊಬ್ಬ ನಿದ್ದೆಗೆ ಜಾರಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಲ್ಲಿನ ಸೈದಾಪೇಟ್ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ ಸುಮಾರು 6.15 ಕ್ಕೆ ಸಣ್ಣ ನಿದ್ದೆ ಹೋಗಿದ್ದ ಪ್ರೇಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ಬಂಗಾರದ ರಿಂಗ್, ಕಿವಿಯೋಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊದಲಿಗೆ ಇವೆಲ್ಲ ತನ್ನ ಹೆಂಡತಿಯದು ಎಂದು ವಾದ ಮಾಡಿದ ಕಳ್ಳ, ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಬಂದಿದ್ದೇಕೆ ಎಂಬ ಪ್ರಶ್ನೆಗೆ ತಡಬಡಾಯಿಸಿ ಕೊನೆಗೆ ನಿಜ ಒಪ್ಪಿಕೊಂಡಿದ್ದಾನೆ. ಬಳಿಕ ಸೈದಾಪೇಟ್ ಪೊಲೀಸರು ಪ್ರೇಮ್ ನನ್ನು ಬಂಧಿಸಿ ಕಳ್ಳತನ ಮಾಡಿದ್ದ ಬಂಗಾರದ ಒಡವೆಗಳನ್ನು ಅದರ ವಾರಸುದಾರರಾದ ಗಾಯತ್ರಿ ಎಂಬುವವರಿಗೆ ಒಪ್ಪಿಸಿದ್ದಾರೆ.

2000 ಎ.ಟಿ.ಎಂ. ಬಂದ್, ಕಾರಣ ಗೊತ್ತಾ…?

$
0
0

ನವದೆಹಲಿ: ಕಳೆದ 10 ತಿಂಗಳ ಅವಧಿಯಲ್ಲಿ ದೇಶಾದ್ಯಂತ 2000 ಕ್ಕೂ ಅಧಿಕ ಎ.ಟಿ.ಎಂ.ಗಳನ್ನು ಬಂದ್ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ದಾಖಲೆಗಳ ಪ್ರಕಾರ, 2017 ರ ಮೇ ನಿಂದ 2018 ರ ಫೆಬ್ರವರಿ ವರೆಗಿನ ಅವಧಿಯಲ್ಲಿ 2000 ಕ್ಕೂ ಅಧಿಕ ಎ.ಟಿ.ಎಂ. ಬಂದ್ ಆಗಿವೆ.

ಬ್ಯಾಂಕ್ ವ್ಯಾಪ್ತಿಯಲ್ಲಿ(ಆನ್ ಸೈಟ್ ಎ.ಟಿ.ಎಂ.) ಗಳ ಸಂಖ್ಯೆ 2018 ರ ಫೆಬ್ರವರಿ ವೇಳೆಗೆ 1,07,630 ಕ್ಕೆ ಕುಸಿದಿದೆ. ಈ ಮೊದಲು 1,10,116 ಎ.ಟಿ.ಎಂ.ಗಳಿದ್ದವು. ಬ್ಯಾಂಕ್ ಗಳು ವಿವಿಧೆಡೆ ಸ್ಥಾಪಿಸಿದ ಎ.ಟಿ.ಎಂ.ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇವುಗಳ ಸಂಖ್ಯೆ 98,360 ರಿಂದ 99,029 ರೂ. ಏರಿಕೆಯಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಆನ್ ಸೈಟ್ ಎ.ಟಿ.ಎಂ.ಗಳ ಸಂಖ್ಯೆ 29,150 ರಿಂದ 26,505 ಕ್ಕೆ ಇಳಿಕೆ ಆಗಿದೆ. ಆಫ್ ಸೈಟ್ ಎ.ಟಿ.ಎಂ.ಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 29,917 ರಿಂದ 32,680 ಕ್ಕೆ ಹೆಚ್ಚಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 467 ಆಫ್ ಸೈಟ್, 655 ಆನ್ ಸೈಟ್ ಎ.ಟಿ.ಎಂ. ಬಂದ್ ಮಾಡಲಾಗಿದೆ. ಎ.ಟಿ.ಎಂ.ಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತಿರುವುದರಿಂದ ಸಂಖ್ಯೆಯಲ್ಲಿ ಕಡಿತ ಮಾಡಲು ಬ್ಯಾಂಕ್ ಗಳು ಯೋಚಿಸಿವೆ.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಕಾರ್ದರ್ಶಿ ಡಿ.ಟಿ. ಫ್ರಾಂಕೋ ಈ ಕುರಿತು ಮಾಹಿತಿ ನೀಡಿದ್ದು, ದೇಶದ ಬಹುತೇಕ ಭಾಗದಲ್ಲಿ ನಗದು ಕೊರತೆ ಇಲ್ಲ. ಎ.ಟಿ.ಎಂ.ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ವೋಟು ಹಾಕಿದ ಮಹಿಳೆಯರಿಗೆ ಜೆ.ಡಿ.ಎಸ್.ನಿಂದ 2000 ರೂ.

$
0
0

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ತಂತ್ರದ ಮೊರೆ ಹೋಗಿವೆ.

ಪ್ರಣಾಳಿಕೆಯನ್ನು ರಿಲೀಸ್ ಮಾಡಿ ಹಲವು ಭರವಸೆಗಳನ್ನು ರಾಜಕೀಯ ಪಕ್ಷಗಳು ನೀಡಿವೆ. ರೈತರ ಸಾಲಮನ್ನಾ ಆದ್ಯತೆಯ ವಿಷಯವಾಗಿದೆ. ಇದರೊಂದಿಗೆ ಹಲವಾರು ಭರವಸೆಗಳನ್ನು ರಾಜಕೀಯ ಪಕ್ಷಗಳು ನೀಡಿವೆ.

ಜೆ.ಡಿ.ಎಸ್. ಮತ ಹಾಕಿದ ಮಹಿಳೆಯರಿಗೆ 2000 ರೂ. ನೀಡಲು ಮುಂದಾಗಿದೆ. ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಿರುವ ಜೆ.ಡಿ.ಎಸ್., ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವುದು ಮುಖ್ಯವಾಗಿದೆ. ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲು ಮತ ಹಾಕುವ ಪ್ರತಿ ಮಹಿಳೆಗೆ 2000 ರೂ. ಪ್ರಜಾಪ್ರಭುತ್ವ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದೆ.

‘ಜನತಾ ಪ್ರಣಾಳಿಕೆ –ಜನರದ್ದೇ ಆಳ್ವಿಕೆ’ ಹೆಸರಿನ ಪ್ರಣಾಳಿಕೆಯನ್ನು ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಸಾಲಮುಕ್ತ ಅನ್ನದಾತ ರೈತ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.

ಜೂನ್ 21 ರಿಂದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ

$
0
0

ಬೆಂಗಳೂರು: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ ಜೂನ್ 21 ರಿಂದ 28 ರ ವರೆಗೆ ನಡೆಯಲಿದೆ. ಜೂನ್ 21 ರಂದು ಗಣಿತ, ಸಮಾಜಶಾಸ್ತ್ರ, ಜೂನ್ 22 ರಂದು ಪ್ರಥಮ ಭಾಷೆಗಳಾದ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಇಂಗ್ಲಿಷ್, ಉರ್ದು ಸಂಸ್ಕೃತ ವಿಷಯದ ಪರೀಕ್ಷೆಗಳು ನಡೆಯಲಿವೆ.

ಜೂನ್ 25 ರಂದು ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜೂನ್ 26 ರಂದು ದ್ವಿತೀಯ ಭಾಷೆ ವಿಷಯದ ಪರೀಕ್ಷೆ ನಡೆಯಲಿವೆ.

ಜೂನ್ 27 ರಂದು ಸಮಾಜ ವಿಜ್ಞಾನ, ಜೂನ್ 28 ರಂದು ತೃತೀಯ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

ಮರುಮೌಲ್ಯ ಮಾಪನಕ್ಕೆ ಮೇ 11 ರಿಂದ 21 ರ ವರೆಗೆ(ಶುಲ್ಕ 705 ರೂ.), ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 9 ರಿಂದ 18 ರ ವರೆಗೆ(ಶುಲ್ಕ 305 ರೂ.) ಅರ್ಜಿ ಸಲ್ಲಿಸಬಹುದಾಗಿದೆ.

ಬಟ್ಟೆಯ ಮೇಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ರಹಸ್ಯ

$
0
0

ವಿಜಯವಾಡ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚುಂದೂರು ಮಂಡಲದ ಮೊಡಕರುವಿನಲ್ಲಿ ಕಾಮುಕನೊಬ್ಬ ಹೇಯಕೃತ್ಯವೆಸಗಿದ್ದಾನೆ.

23 ವರ್ಷದ ಕಾಮುಕ ತನ್ನ ಸಂಬಂಧಿಯೇ ಆಗಿರುವ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿಯ ಪೋಷಕರು ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಅಸ್ವಸ್ಥ ಬಾಲಕಿಯನ್ನು ತೆನಾಲಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಪೋಷಕರು ಇಲ್ಲದ ವೇಳೆ ಮನೆಗೆ ಬಂದಿದ್ದ ಕಾಮುಕ ಚಾಕೊಲೇಟ್ ಕೊಡಿಸುವುದಾಗಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮನೆಗೆ ಹಿಂದಿರುಗಿದ್ದ ಬಾಲಕಿ ಮೌನವಾಗಿದ್ದಾಳೆ. ಬಳಿಕ ಹೊಟ್ಟೆ ನೋವಾಗಿದೆ ಎಂದು ತಾಯಿಗೆ ತಿಳಿಸಿದ್ದಾಳೆ. ತಾಯಿ ಆಕೆಯ ಬಟ್ಟೆ ತೊಳೆಯುವಾಗ ರಕ್ತದ ಕಲೆ ಕಂಡು ಬಂದಿವೆ.

ಬಾಲಕಿಯನ್ನು ಪ್ರಶ್ನಿಸಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಆಸ್ಪತ್ರೆಗೆ ಕರೆದೊಯ್ದ ನಂತರ ವೈದ್ಯರು ಅತ್ಯಾಚಾರ ನಡೆದಿರುವುದನ್ನು ತಿಳಿಸಿದ್ದಾರೆ.

ಬಾಲಕಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕೋಮು ಸೌಹಾರ್ದಕ್ಕೆ ಮಾದರಿ ಈ ಹಳ್ಳಿ

$
0
0

ಕೇರಳದ ಹಳ್ಳಿಯೊಂದು ಕೋಮು ಸೌಹಾರ್ದಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಮರು ಎಷ್ಟು ಅನ್ಯೋನ್ಯವಾಗಿದ್ದಾರೆಂದರೆ, ಹಿಂದೂ ದೇವರ ರಥೋತ್ಸವಕ್ಕೆ ಮುಸ್ಲಿಮರು ಭಾಗವಹಿಸುತ್ತಾರೆ. ಮಸೀದಿಗಳಿಗೆ ಹಿಂದೂಗಳು ಹೋಗಿಬರುತ್ತಾರೆ.

ಇಂಥದ್ದೊಂದು ಅಪರೂಪದ ಹಳ್ಳಿಯ ಹೆಸರು ಉದ್ಯಾವರ ಎಂದು. ಇಲ್ಲಿನ ಶ್ರೀ ಉದ್ಯಾವರ ಅರಸುಮಂಜುಶ್ನಾಥ್ ದೇವಾಲಯದಲ್ಲಿ 5 ವರ್ಷಕ್ಕೊಮ್ಮೆ ನಡೆಯುವ ರಥೋತ್ಸವ ಕಾರ್ಯಕ್ರಮಕ್ಕೆ ಜಮಾತ್ ಮಸೀದಿಯ ಒಂದು ಸಾವಿರ ಜನರಿಗೆ ಆಮಂತ್ರಣ ನೀಡಲಾಗಿದೆ. ಮೇ 9 ರಿಂದ 12 ರ ವರೆಗೆ ನಡೆಯುವ ಈ ಉತ್ಸವದಲ್ಲಿ ಎರಡೂ ಧರ್ಮದವರೂ ಪಾಲ್ಗೊಳ್ಳುತ್ತಾರೆ.

ದೇವಾಲಯದಿಂದ ಕೇವಲ ನೂರು ಮೀಟರ್ ದೂರದಲ್ಲಿರುವ ಮಸೀದಿಗೆ ಹೋಗಿ ಆಮಂತ್ರಣ ನೀಡಲಾಗುತ್ತದೆ. ಇದು ಕಳೆದ ಮೂರು ತಲೆಮಾರುಗಳಿಂದಲೂ ನಡೆದುಕೊಂಡು ಬರುತ್ತಿದೆ. ಇನ್ನು ಮಸೀದಿಯ ಕಾರ್ಯಕ್ರಮಗಳಲ್ಲಿಯೂ ಹಿಂದೂಗಳು ಭಾಗವಹಿಸುತ್ತಾರೆ.


ಮಗನ ಅಂಗಾಂಗ ದಾನ ಮಾಡಲು ಹೊರಟಾಗ ನಡೆಯಿತು ಪವಾಡ…!

$
0
0

ಕೆಲವೊಮ್ಮೆ ನಮ್ಮ ಪ್ರಾರ್ಥನೆಯೋ ಅಥವಾ ಕಾಣದ ಶಕ್ತಿಯ ಪ್ರಭಾವವೋ ಗೊತ್ತಿಲ್ಲ. ನಂಬಿಕೆಯೇ ಬಾರದಂಥ ಪವಾಡಗಳು ನಡೆದುಹೋಗುತ್ತವೆ. ಅಂಥದ್ದೇ ಒಂದು ಅನುಭವವಾಗಿತ್ತು ಅಮೆರಿಕದ ಈ ದಂಪತಿಗೆ.

ಅಮೆರಿಕದ ಜೆನ್ನಿಫರ್ ತನ್ನ 13 ವರ್ಷದ ಮಗ ಟ್ರೆಂಟೋನ್ ಮ್ಯಾಕ್ ಕಿನ್ಲೆ ಆರೋಗ್ಯದ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದರು. ಅಪಘಾತವೊಂದರಲ್ಲಿ ಆತನ ತಲೆಬುರುಡೆಗೆ 7 ಕಡೆಗಳಲ್ಲಿ ಪೆಟ್ಟಾಗಿತ್ತು. ತಲೆಗೆ ಮೂರು ಶಸ್ತ್ರ ಚಿಕಿತ್ಸೆ ಆದ ಬಳಿಕವೂ ವೈದ್ಯರು ಯಾವುದೇ ಭರವಸೆ ನೀಡಿರಲಿಲ್ಲ. ಜೊತೆಗೆ ಮೆದುಳಿನ ನರಗಳೂ ನೋವು ಕೊಡುತ್ತಿದ್ದು, ಆತ ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದರು.

ಹೀಗಾಗಿ ಭಾರವಾದ ಮನಸ್ಸಿನಿಂದಲೇ ಆತನ ಅಂಗಾಂಗಗಳನ್ನು ದಾನ ಮಾಡಲು ಮುಂದಾದ ಪೋಷಕರಿಗೆ ಆಶ್ಚರ್ಯ ಕಾದಿತ್ತು. ಟ್ರೆಂಟೋನ್ ಚಿಕಿತ್ಸೆಗೆ ಸ್ಪಂದಿಸಲು ಶುರು ಮಾಡಿದ್ದ. ಆತನ ಆರೋಗ್ಯದಲ್ಲಿ ಸ್ವಲ್ಪವೇ ಚೇತರಿಕೆ ಕಾಣಲು ಆರಂಭಿಸಿತ್ತು. ಇನ್ನೊಂದು ಶಸ್ತ್ರಚಿಕಿತ್ಸೆ ನಡೆದರೆ ಆತ ಸಂಪೂರ್ಣವಾಗಿ ಗುಣವಾಗುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಕಬ್ಬಿನ ಹಾಲು

$
0
0

ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕಿಡ್ನಿ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು. ಜೊತೆಗೂ ಲಿವರ್ ಗೆ ಕೂಡ. ಅಲ್ಲದೇ ಜಾಂಡೀಸ್ ಗೆ ಇದು ರಾಮಬಾಣ. ಹಾಗಿದ್ರೆ ಕಬ್ಬಿನ ಜ್ಯೂನ್ ಅನ್ನು ಮನೆಯಲ್ಲೇ ಹೇಗೆ ತಯಾರಿಸೋದು ಅನ್ನೋದನ್ನು ನೋಡೋಣ.

ಬೇಕಾಗುವ ಸಾಮಗ್ರಿ :

ಮಧ್ಯಮ ಗಾತ್ರದ ಕಬ್ಬು

ನೀರು

ಜಾಳಿಗೆ ಅಥವಾ ಸೋಸುವ ಬಟ್ಟೆ

ಶುಂಠಿ (ಬೇಕಾದಲ್ಲಿ)

ಲಿಂಬು (ಬೇಕಾದಲ್ಲಿ)

ಪುದೀನಾ ಸೊಪ್ಪು

ಕಾಳುಮೆಣಸು

ಐಸ್ ಕ್ಯೂಬ್

ಮಾಡುವ ವಿಧಾನ :

ಮೊದಲು ಕಬ್ಬನ್ನು ಸ್ವಚ್ಛಮಾಡಿ, ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಿ. ಅದನ್ನು ನುಣ್ಣಗೆ ಗ್ರೈಂಡ್ ಮಾಡಿ. ಬಳಿಕ ಅದನ್ನು ಸೋಸಿ ಜ್ಯೂಸ್ ತೆಗೆಯಿರಿ. ಇದಾದ ಬಳಿಕ ಬೇಕಾದಲ್ಲಿ ಶುಂಠಿ, ಲಿಂಬು, ಪುದೀನಾ ಅಥವಾ ಕಾಳುಮೆಣಸಿನ ಪುಡಿ ಹಾಕಿ. ಹಾಗೆಯೇ ಕುಡಿದರೂ ಇದು ಬಹಳ ರುಚಿ. ಕೊನೆಯಲ್ಲಿ ಐಸ್ ಕ್ಯೂಬ್ ನೊಂದಿಗೆ ತಣ್ಣನೆಯ ಜ್ಯೂಸ್ ಅನ್ನು ಸರ್ವ್ ಮಾಡಿ.

ಮದುವೆ ಆಸೆ ತೋರಿಸುವವನ ಜೊತೆ ಹಾಸಿಗೆ ಹಂಚಿಕೊಳ್ಳಬೇಡಿ

$
0
0

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ಮದುವೆ ಮಂಟಪದಿಂದ ವರ ಓಡಿ ಹೋಗಿದ್ದಾನೆ. ವಧು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮೂರ್ನಾಲ್ಕು ವರ್ಷಗಳಿಂದ ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಮದುವೆ ವಿಷ್ಯ ಬಂದಾಗ ವರ ಮಾತು ಬದಲಿಸುತ್ತಿದ್ದ. ಇದ್ರಿಂದ ಬೇಸತ್ತ ಯುವತಿ ಮನೆಯವರಿಗೆ ಪ್ರೀತಿ ವಿಚಾರ ತಿಳಿಸಿದ್ದಾಳೆ.

ಶನಿವಾರ ಪಂಚಾಯತಿ ನಡೆದಿದೆ. ಭಾನುವಾರ ಮದುವೆ ನಡೆಸುವಂತೆ ತೀರ್ಮಾನಕ್ಕೆ ಬರಲಾಗಿದೆ. ಗ್ರಾಮಸ್ಥರೆಲ್ಲ ಸೇರಿ ಮದುವೆಗೆ ಸಿದ್ಧತೆ ಮಾಡಿದ್ದಾರೆ. ಭಾನುವಾರ ಇನ್ನೇನು ವರಮಾಲೆ ಹಾಕಬೇಕು ಎನ್ನುವ ಸಮಯದಲ್ಲಿ ವರ ನಾಪತ್ತೆಯಾಗಿದ್ದಾನೆ. ಎಲ್ಲೆಡೆ ವರ ಹುಡುಕಾಟ ನಡೆಸಿ ಸುಸ್ತಾದ ವಧು ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವರ ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗುತ್ತಿದ್ದ. ಅನೇಕ ಬಾರಿ ತನ್ನ ಜೊತೆ ಸಂಬಂಧ ಬೆಳೆಸಿದ್ದ. ಈಗ ಮೋಸ ಮಾಡಿದ್ದಾನೆಂದು ವಧು ಆರೋಪ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವರನ ಪತ್ತೆ ಕಾರ್ಯ ಶುರು ಮಾಡಿದ್ದಾರೆ.

 

ಹುಬ್ಬಳ್ಳಿ ಪಾಕ್ ನಂತಿದೆ ಎಂದಿದ್ದ ಮೌಲ್ವಿಯಿಂದ ಪ್ರಚಾರ

$
0
0

ಹುಬ್ಬಳ್ಳಿ ಪಾಕಿಸ್ತಾನದಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ –ಧಾರವಾಡ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಸಾದ್ ಅಬ್ಬಯ್ಯ ಪರವಾಗಿ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಪ್ರಚಾರ ನಡೆಸಿದ್ದಾರೆ.

ಗಣೇಶಪೇಟೆಯ ಮಸೀದಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ್ ಖೈರಾತಿ, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಹುಬ್ಬಳ್ಳಿ ಪಾಕಿಸ್ತಾನದಂತೆ ಕಾಣುತ್ತಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಗಿತ್ತು. ಈಗ ಖೈರಾತಿ ಕಾಂಗ್ರೆಸ್ ಪರ ಪ್ರಚಾರ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಸೋನಂ ಲೆಹಂಗಾ ತಯಾರಿಸಲು ಎಷ್ಟು ಸಮಯ ಬೇಕಾಯ್ತು ಗೊತ್ತಾ?

$
0
0

ಬಾಲಿವುಡ್ ನಟಿ ಸೋನಂ ಕಪೂರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾಳೆ. ಆನಂದ್ ಅಹುಜಾ ಜೊತೆ ಸೋನಂ ಮದುವೆ ಬಂಧನಕ್ಕೊಳಗಾಗ್ತಿದ್ದಾರೆ. ಸೋಮವಾರ ಸಂಜೆ ಸೋನಂ ಕಪೂರ್ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು.

ಸೋನಂ ಕಪೂರ್ ಬಿಳಿ ಬಣ್ಣದ ಲೆಹಂಗಾ ಹಾಗೂ ಕುಂದನ್ ಆಭರಣದಲ್ಲಿ ಮಿಂಚಿದ್ಲು. ಸೋನಂ ಕಪೂರ್ ಧರಿಸಿದ್ದ ಸುಂದರ ಲೆಹಂಗಾವನ್ನು ಫ್ಯಾಷನ್ ಡಿಸೈನರ್ ಸಂದೀಪ್ ಖೋಸ್ಲಾ ಮತ್ತು ಅಬು ಜಾನಿ ಸಿದ್ಧಪಡಿಸಿದ್ದಾರೆ. ಸೋನಂ ಕಪೂರ್ ಸುಂದರ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿರುವ ವಿನ್ಯಾಸಕ ಸಂದೀಪ್ ಖೋಸ್ಲಾ, ಇದನ್ನು ತಯಾರಿಸಲು 18 ತಿಂಗಳು ಬೇಕಾಯ್ತು ಎಂದಿದ್ದಾರೆ.

ಕಸೂತಿ ಜೊತೆ ಮಿರರ್ ವರ್ಕ್ ಮಾಡಲಾಗಿದೆ. ಎರಡು ವರ್ಷಗಳ ಮೊದಲೇ ಸೋನಂ ಲೆಹಂಗಾಕ್ಕೆ ಆರ್ಡರ್ ನೀಡಿದ್ದಳು. ಸೋನಂ ನಮಗೆ ಸ್ಪೆಷಲ್. ಅವ್ರ ಸ್ಪೆಷಲ್ ದಿನವನ್ನು ಇನ್ನಷ್ಟು ಸುಂದರಗೊಳಿಸಲು ಈ ಲೆಹಂಗಾ ತಯಾರಿಸಿದ್ದೇವೆಂದು ಸಂದೀಪ್ ಹೇಳಿದ್ದಾರೆ. ಮುಂಬೈನ ಬಿಕೆಸಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿದೆ.

ಬೆಳಿಗ್ಗೆ 11.30 ರಿಂದ 12 ಗಂಟೆ ಮುಹೂರ್ತದಲ್ಲಿ ಸೋನಂ ಆಂಟಿ ಕವಿತಾ ಮನೆಯಲ್ಲಿ ಮದುವೆ ನೆರವೇರಲಿದೆ. ರಾತ್ರಿ ಬಾಲಿವುಡ್ ಸೇರಿದಂತೆ ಸಂಬಂಧಿಕರು, ಸ್ನೇಹಿತರಿಗೆ ಸೋನಂ ಪಾರ್ಟಿ ನೀಡಲಿದ್ದಾಳೆ.

ಜೆ.ಡಿ.ಎಸ್. ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಗೆ ಶಾಕ್

$
0
0

ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದ್ದು, ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಜೆ.ಡಿ.ಎಸ್. ಬೆಂಬಲ ಯಾರಿಗೆ ಸಿಗಲಿದೆ ಎಂಬ ಚರ್ಚೆಯೂ ನಡೆದಿದೆ.

ಆದರೆ, ಅದೆಲ್ಲಾ ಫಲಿತಾಂಶದ ನಂತರದ ಮಾತಾಯ್ತು. ಚುನಾವಣೆ ನಡೆಯುವಾಗಲೇ ಜೆ.ಡಿ.ಎಸ್. ಕಾಂಗ್ರೆಸ್ ಗೆ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮತಗಳ ಬುಟ್ಟಿಗೆ ಜೆ.ಡಿ.ಎಸ್. ಕೈಹಾಕಿದೆ. ಇಂದಿನಿಂದ 2 ದಿನಗಳ ಕಾಲ ಅಲ್ಪಸಂಖ್ಯಾತ ಮತಗಳು ಹೆಚ್ಚಾಗಿರುವ ಕಡೆಗಳಲ್ಲಿ ಎ.ಐ.ಎಂ.ಐ.ಎಂ. ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಚಾರ ಕೈಗೊಂಡಿದ್ದು ಜೆ.ಡಿ.ಎಸ್. ಪರ ಮತಯಾಚಿಸಲಿದ್ದಾರೆ.

ಬೆಳಗಾವಿ, ಕಾಗವಾಡ, ತಾಳಿಕೋಟೆ ಮತ್ತು ದಾವಣಗೆರೆಯಲ್ಲಿ ಪ್ರಚಾರ ನಡೆಸಲಿರುವ ಓವೈಸಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ತಡೆಯಲು ಯತ್ನಿಸಲಿದ್ದಾರೆ. ಮುಂಬೈ ಕರ್ನಾಟಕ ಭಾಗದಲ್ಲಿ ಜೆ.ಡಿ.ಎಸ್. ಪಕ್ಷವನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಿತ್ತು. ಈಗ ಕಾಂಗ್ರೆಸ್ ಪಕ್ಷದ ಮತದ ಬುಟ್ಟಿಗೆ ಜೆ.ಡಿ.ಎಸ್. ಕೈಹಾಕಿದೆ.

ಕರ್ನಾಟಕದ ಅತ್ಯಂತ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ?

$
0
0

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ಅನೇಕ ಸಮೀಕ್ಷೆ, ವರದಿಗಳು ಹೊರ ಬರ್ತಿವೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಭ್ಯರ್ಥಿಗಳ ಬಗ್ಗೆ ಹೊಸ ವರದಿಯೊಂದನ್ನು ಬಿಡುಗಡೆ ಮಾಡಿದೆ. ವಿಧಾನಸಭಾ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ ಯಾರು ಶ್ರೀಮಂತರು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.

ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊದಲ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ಪ್ರಿಯಾ ಕೃಷ್ಣ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬುದು ತಿಳಿದುಬಂದಿದೆ. ಪ್ರಿಯಾ ಕೃಷ್ಣ ಬಳಿ 1020.50 ಕೋಟಿ ಬೆಲೆಯ ಆಸ್ತಿಯಿದೆ. ಪ್ರಿಯಾ ಕೃಷ್ಣ ಬೆಂಗಳೂರಿನ ಗೋವಿಂದರಾಜನಗರದ ಎಂಎಲ್ಎ ಆಗಿದ್ದು ತಂದೆ ಎಂ.ಕೃಷ್ಣಪ್ಪ, ಸಿದ್ಧರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

2013ರ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಆಸ್ತಿ ವಿವರಕ್ಕೆ ಹೋಲಿಸಿದ್ರೆ ಈ ಬಾರಿ ಶೇಕಡಾ 11ರಷ್ಟು ಏರಿಕೆಯಾಗಿದೆ. 2013ರಲ್ಲಿ ಪ್ರಿಯಾ ಕೃಷ್ಣ ಆಸ್ತಿ 910.9 ಕೋಟಿಯಿತ್ತು. ಶ್ರೀಮಂತರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಮುಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜು ಬಳಿ 709.3 ಕೋಟಿ ಬೆಲೆ ಆಸ್ತಿಯಿದೆ. ಸಚಿವ ಡಿ.ಕೆ.ಶಿ ಈ ಬಾರಿಯೂ ಟಿಕೆಟ್ ಗಿಟ್ಟಿಸಿಕೊಂಡಿದ್ದು ಅವ್ರ ಬಳಿ 619.8 ಕೋಟಿ ಬೆಲೆ ಆಸ್ತಿಯಿದೆ. ಇನ್ನು ಶ್ರೀಮಂತ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ನಾಲ್ಕನೇ ಸ್ಥಾನ ಅನಿಲ್ ಲಾಡ್ ಪಾಲಾಗಿದೆ. ಅನಿಲ್ ಲಾಡ್ ಬಳಿ 342.2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ.

 


ಪ್ರಚಾರಕ್ಕೆ ಬಂದ ಸಲ್ಮಾನ್ ಸಹೋದರರಿಂದ ಸುದೀಪ್ ಭೇಟಿ

$
0
0

ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರಗಳಲ್ಲಿಯೂ ಮಿಂಚಿದ್ದು, ಅಲ್ಲಿಯೂ ಹೆಚ್ಚಿನ ಗೆಳೆಯರನ್ನು ಹೊಂದಿದ್ದಾರೆ.

ಸಿ.ಸಿ.ಎಲ್. ಪಂದ್ಯಾವಳಿ ಆರಂಭವಾದ ಬಳಿಕ ವಿವಿಧ ಭಾಷೆಯ ಚಿತ್ರರಂಗದವರ ನಡುವೆ ಬಾಂಧವ್ಯ ಹೆಚ್ಚಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರರಾದ ಸೋಹೆಲ್ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಸುದೀಪ್ ಗೆ ಗೆಳೆಯರಾಗಿದ್ದಾರೆ.

ಸುದೀಪ್ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವಿವಿಧೆಡೆ ಪ್ರಚಾರ ಕೈಗೊಂಡಿದ್ದಾರೆ. ಚುನಾವಣೆ ಪ್ರಚಾರಕ್ಕೆ ಬಂದಿದ್ದ ಸೋಹೆಲ್ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

ಎಂ.ಇ.ಪಿ. ಪಕ್ಷದ ಪರ ಸೋಹೆಲ್ ಖಾನ್, ಅರ್ಬಾಜ್ ಖಾನ್ ಬೆಂಗಳೂರಿಗೆ ಪ್ರಚಾರಕ್ಕೆ ಬಂದಿದ್ದಾರೆ. ಅವರೊಂದಿಗೆ ಸೋನು ಸೂದ್ ಕೂಡ ಜೊತೆಯಾಗಿ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಇವರೊಂದಿಗೆ ಸುದೀಪ್ ಬಳಗ ಕೂಡ ಕಾಣಿಸಿಕೊಂಡಿದೆ. ಗೆಳೆಯರೊಂದಿಗಿನ ಸಂಭ್ರಮದ ಕ್ಷಣಗಳ ಫೋಟೋವನ್ನು ಸುದೀಪ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಸಹೋದರರಾದ ಸೋಹೆಲ್ ಖಾನ್ ಮತ್ತು ಅರ್ಬಾಜ್ ಖಾನ್ ಅವರೊಂದಿಗೆ ಕೆಲಸಮಯವನ್ನು ಕಳೆದಿದ್ದು, ಖುಷಿಯಾಯ್ತು. ಇಂತಹ ಭೇಟಿಗಾಗಿ ಮತ್ತೆ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

25 ಸಾವಿರ ಬಂಡವಾಳ ಹೂಡಿ ತಿಂಗಳಿಗೆ 30 ಸಾವಿರ ಗಳಿಸಿ

$
0
0

ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದೀರಾ? ಹಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಈ ಬ್ಯುಸಿನೆಸ್ ಬಗ್ಗೆ ನೀವಿನ್ನೂ ಕೇಳಿರಲು ಸಾಧ್ಯವಿಲ್ಲ. ಕಡಿಮೆ ಹೂಡಿಕೆ ಮಾಡಿ ಹೊಸ ಬ್ಯುಸಿನೆಸ್ ನಲ್ಲಿ ಸಾಕಷ್ಟು ಹಣ ಗಳಿಸುವ ಅವಕಾಶವಿದೆ.

ನಮ್ಮ ದೇಶದಲ್ಲಿ ತೆರಿಗೆಯ ಹೊಸ ವಿಧಾನ ಜಿಎಸ್ಟಿ ಜಾರಿಗೆ ಬಂದಿದೆ. ಆದ್ರೆ ಈ ಬಗ್ಗೆ ಅನೇಕ ಜನರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ತಿಳಿದುಕೊಳ್ಳುವ ಹಾಗೂ ಎದುರಾಗುವ ಸಮಸ್ಯೆ ಬಗೆಹರಿಸಿಕೊಳ್ಳುವ ಅವಶ್ಯಕತೆಯಿದೆ. ಇದೇ ಕಾರಣಕ್ಕೆ ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿದೆ.

ಜಿಎಸ್ಟಿ ಜಾರಿಯಾದ ಮೇಲೆ ವ್ಯಾಪಾರಿಗಳಿಗೆ ಹಣಕಾಸು ವರದಿ ಸಲ್ಲಿಸಲು ಕಷ್ಟವಾಗ್ತಿದೆ. ಹಾಗಾಗಿ ಅನೇಕ ಕಂಪನಿಗಳು ಜಿಎಸ್ಟಿ ಸಲಹಾ ಸೌಲಭ್ಯ ಕೇಂದ್ರಗಳಿಗೆ ಹೋಗ್ತಿವೆ. ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಎಲ್ಲರೂ ಜಿಎಸ್ಟಿ ಸೌಲಭ್ಯ ಕೇಂದ್ರಗಳಿಂದ ಸೇವೆ ಪಡೆಯುತ್ತಿದ್ದಾರೆ. ಹಾಗಾಗಿ ಸಲಹಾ ಕೇಂದ್ರಗಳಿಗೆ ಬೇಡಿಕೆ ಹೆಚ್ಚಾಗ್ತಿದೆ.

ಸಲಹಾ ಕೇಂದ್ರಗಳನ್ನು ತೆರೆಯುವುದು ತುಂಬಾ ಸುಲಭ. ವ್ಯಾನಿಕ್ ಟೆಕ್ ಸಲ್ಯೂಷನ್ ಕೇವಲ 25000 ರೂಪಾಯಿಯಲ್ಲಿ ಸಲಹಾ ಕೇಂದ್ರ ತೆರೆಯಲು ನೆರವಾಗ್ತಿದೆ. ಹೊಸ ಉದ್ಯೋಗ ಶುರುಮಾಡಲು ಬಯಸುವವರು ವ್ಯಾನಿಕ್ ಟೆಕ್ ಸಲ್ಯೂಷನ್ ಜೊತೆ ಸೇರಿ ಜಿಎಸ್ಟಿ ಸಲಹಾ ಕೇಂದ್ರ ತೆರೆಯಬಹುದು. ಕಂಪನಿಗಳಿಗೆ ಜಿಎಸ್ಟಿ ಬಗ್ಗೆ ಮಾಹಿತಿ ನೀಡಿ ಸುಲಭವಾಗಿ ಹಣ ಗಳಿಸಬಹುದು.

ಜಿಎಸ್ಟಿ ನಂಬರ್ ನೋಂದಣೆ, ಜಿಎಸ್ಟಿ ರಿಟರ್ನ್ ಫೈಲಿಂಗ್ ಜೊತೆಗೆ ವಿದ್ಯುತ್ ಬಿಲ್ ಪಾವತಿ, ಪಾನ್ ಕಾರ್ಡ್, ಡಿಟಿಹೆಚ್ ರೀಚಾರ್ಜ್, ಮೊಬೈಲ್ ರಿಚಾರ್ಜ್ ಸೌಲಭ್ಯವನ್ನೂ ಸಲಹಾ ಕೇಂದ್ರದಲ್ಲಿ ನೀಡಬಹುದಾಗಿದೆ. ಕಂಪನಿ ವೆಬ್ ಸೈಟ್ ಗೆ ಹೋಗಿ ನೀವು ಅರ್ಜಿ ತುಂಬಬೇಕಾಗುತ್ತದೆ. 100 ರಿಂದ 150 ಚದರ ಅಡಿ ಕಚೇರಿ ಸ್ಥಳ, ಪ್ರಿಂಟರ್, ಕಂಪ್ಯೂಟರ್, ಸ್ಕ್ಯಾನರ್, ಕಾರ್ಡ್ ಸ್ವೈಪ್ ಯಂತ್ರಗಳ ಅವಶ್ಯಕತೆಯಿದೆ. ಮೂರು ವರ್ಷ 25 ಸಾವಿರ ಖರ್ಚು ಮಾಡಬೇಕು. ಪ್ರತಿ ತಿಂಗಳು 30 ಸಾವಿರ ಗಳಿಕೆ ಮಾಡಬಹುದಾಗಿದೆ.

ಇಲ್ಲಿದೆ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳ ಮಾಹಿತಿ

$
0
0

ವಿಧಾನಸಭೆ ಚುನಾವಣೆಗೆ ಇದೇ ಮೇ 12 ರಂದು ಮತದಾನ ನಡೆಯಲಿದ್ದು, ಮೇ 15 ರಂದು ಫಲಿತಾಂಶ ಪ್ರಕಟವಾಗಲಿದೆ. ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶದ ಬಗ್ಗೆ ಹೇಳಲಾಗಿದ್ದರೂ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಕುತೂಹಲವಿದೆ. ರಾಜ್ಯದಲ್ಲಿ ಯಾವ ಪಕ್ಷಗಳು ಅಧಿಕಾರ ನಡೆಸಿವೆ ಎಂಬುದರ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ್ದು ಕಾಂಗ್ರೆಸ್ ಪಕ್ಷ. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರು. ಇನ್ನು ಕರ್ನಾಟಕ ಎಂದು ನಾಮಕರಣವಾದ ಸಂದರ್ಭ ಮತ್ತು ನಂತರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿತ್ತು.

1947 ರಿಂದ 1983 ರ ವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆ. 1983 ರಿಂದ 1989 ರ ವರೆಗೆ ಜನತಾಪಕ್ಷದ ಆಡಳಿತ ರಾಜ್ಯದಲ್ಲಿತ್ತು. 1989 ರಿಂದ 1994 ರ ವರೆಗೆ ಕಾಂಗ್ರೆಸ್ ಸರ್ಕಾರ ಇದ್ದರೆ, 1994 ರಿಂದ 1999 ರ ವರೆಗೆ ಜನತಾದಳ ಆಡಳಿತ ನಡೆಸಿದೆ. 1999ರಿಂದ 2004 ರ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು.

2004 ರಲ್ಲಿ ಅತಂತ್ರ ಫಲಿತಾಂಶ ಬಂದಿದ್ದರಿಂದ ಕಾಂಗ್ರೆಸ್–ಜೆ.ಡಿ.ಎಸ್. ಸಮ್ಮಿಶ್ರ ಸರ್ಕಾರ 2004 ರಿಂದ 2006 ರ ವರೆಗೆ ಆಡಳಿತದಲ್ಲಿತ್ತು. 2006 ರಿಂದ 2008 ರ ವರೆಗೆ ಜೆ.ಡಿ.ಎಸ್.–ಬಿ.ಜೆ.ಪಿ. ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಿದೆ.

2008 ರಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವ ಮೂಲಕ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬಂದಿತ್ತು. 2013 ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚಿಸಿತು. ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ಬರಲಿದೆ. ಇಲ್ಲವೇ ಅತಂತ್ರ ಸರ್ಕಾರ ರಚನೆಯಾಗುತ್ತಾ ಎಂಬುದು ಕುತೂಹಲ ಮೂಡಿಸಿದೆ.

ಮಲಗಿದ್ದ ಪತ್ನಿ ಮೇಲೆ ಆಸಿಡ್ ಎರಚಿದ ಕಿರಾತಕ…!

$
0
0

ಆಸಿಡ್ ದಾಳಿಯಿಂದ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯ ಪಹಾರ್ಗಂಜ್ ನಲ್ಲಿ ನಡೆದಿದೆ. ತನ್ನ ಪತ್ನಿಗೆ ಇನ್ನೊಬ್ಬನೊಂದಿಗೆ ಸಂಬಂಧ ಇದೆ ಎಂದು ಅನುಮಾನಿಸಿದ ಪತಿ, ಆಕೆ ಮಲಗಿರುವಾಗ ಆಸಿಡ್ ದಾಳಿ ನಡೆಸಿದ್ದಾನೆ.

24 ವರ್ಷದ ನಿಷಾ ಆಸಿಡ್ ದಾಳಿಗೆ ಒಳಗಾದ ಮಹಿಳೆ. ಈಕೆಯ ಜೊತೆ ಒಂದೇ ರೂಮ್ ನಲ್ಲಿ ಮಲಗಿದ್ದ ಮತ್ತೊಬ್ಬ ಮಹಿಳೆ ಲಕ್ಷ್ಮಿ ಕೂಡಾ ಆಸಿಡ್ ದಾಳಿಯಲ್ಲಿ ಗಾಯಗೊಂಡಿದ್ದಾರೆ. ನಿಷಾಳ ಪತಿ ರಿತೇಶ್ ಪ್ರತಿದಿನ ಪತ್ನಿಗೆ ತೊಂದರೆ ಕೊಡ್ತಿದ್ದ. ಆಕೆಗೆ ಬೇರೊಬ್ಬನೊಂದಿಗೆ ಸಂಬಂಧವಿದೆ ಎಂದು ಜಗಳವಾಡ್ತಿದ್ದ. ಇದ್ರಿಂದ ಬೇಸತ್ತಿದ್ದ ನಿಷಾ ಕಳೆದ ಒಂದು ತಿಂಗಳಿನಿಂದ ತಾಯಿ ಮನೆಯಲ್ಲಿ ವಾಸವಾಗಿದ್ಲು.

ಘಟನೆ ಸಂಬಂಧ ನಿಷಾ ಪತಿ ರಿತೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳು ಕೂಡಾ ಇವೆ ಅಂತಾ ಪೊಲೀಸರು ತಿಳಿಸಿದ್ದಾರೆ. ಶೇಕಡಾ 45 ರಷ್ಟು ಭಾಗ ಸುಟ್ಟಗಾಯಗಳಿಂದ ಬಳಲುತ್ತಿರುವ ನಿಷಾ ಮತ್ತು ಲಕ್ಷ್ಮಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಡ್ ಫೋನ್ ಹಾಕಿಕೊಂಡು ಮಲಗ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ

$
0
0

ಮಲಗೋವಾಗ ಎಲೆಕ್ಟ್ರಾನಿಕ್ ವಸ್ತುಗಳನ್ನು ಹತ್ತಿರ ಇಟ್ಟುಕೊಳ್ಳಬಾರದು ಎಂದು ಗೊತ್ತಿದ್ದರೂ ಕೆಲವರು ಈ ಕೆಟ್ಟ ಅಭ್ಯಾಸದಿಂದ ಹೊರಬರುವುದೇ ಇಲ್ಲ. ಹೀಗೆ ಮಲಗುವಾಗ ಹೆಡ್ ಫೋನ್ ಹಾಕಿಕೊಂಡು ಮಲಗೋ ಹವ್ಯಾಸ ಮಹಿಳೆಯೊಬ್ಬಳ ಪ್ರಾಣಕ್ಕೇ ಎರವಾಗಿದೆ.

ಹೌದು….ತಮಿಳುನಾಡಿನ ಕಾನತೂರ್ ಎಂಬಲ್ಲಿ 46 ವರ್ಷದ ಫಾತಿಮಾ ಎಂಬುವವರು ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಮಲಗಿದ್ದರು. ಮರುದಿನ ಬೆಳಗ್ಗೆ ಪತಿ ಅಬ್ದುಲ್ ಆಕೆಯನ್ನು ಎಬ್ಬಿಸಲು ನೋಡಿದ್ದಾರೆ. ಆದರೆ ಎಷ್ಟು ಬರಿ ಕೂಗಿದರೂ ಆಕೆ ಎದ್ದಿಲ್ಲ. ಇದರಿಂದ ಗಾಬರಿಗೊಂಡ ಅಬ್ದುಲ್, ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಫಾತಿಮಾ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ವಿದ್ಯುದಾಘಾತವೇ ಸಾವಿಗೆ ಕಾರಣ. ವೈರ್ ನಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುದಾಘಾತವಾಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಒಟ್ಟಾರೆ ಆಕೆಗಿದ್ದ ಈ ಅಭ್ಯಾಸವೇ ಸಾವಿಗೆ ಕಾರಣವಾಗಿದ್ದು ವಿಪರ್ಯಾಸ.

Viewing all 90003 articles
Browse latest View live




Latest Images