ಗುಜರಾತ್ ನ ಜೂನಾಗಢ ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಬಿ.ಎ. ಗೋಲಕಿಯಾ ಅವರು ಹಸುವಿನ ಮೂತ್ರದಲ್ಲಿ ಚಿನ್ನ ಇರುತ್ತದೆಂದು ಹೇಳಿದ್ದಾರೆ!
ಗೋಲಕಿಯಾ, ತಾವು ಕೈಗೊಂಡ 4 ವರ್ಷದ ಸಂಶೋಧನೆಯಲ್ಲಿ ಸುಮಾರು 400 ಕ್ಕೂ ಅಧಿಕ ಹಸುಗಳ ಮೂತ್ರವನ್ನು ಪರೀಕ್ಷಿಸಿದ್ದಾರೆ. ಅವರ ಈ ಪರೀಕ್ಷೆಯ ಮೂಲಕ ಗಿರ್ ಹಸುವಿನ ತಳಿಯ ಒಂದು ಲೀಟರ್ ಗೋಮೂತ್ರದಲ್ಲಿ ಸುಮಾರು 3 mg ಇಂದ 10 mg ಚಿನ್ನ ಸಿಗುತ್ತದೆಂದು ತಿಳಿದು ಬಂದಿದೆ. ಹಸು ಮೂತ್ರದ ಹೊರತಾಗಿ ಒಂಟೆ, ಕೋಣ ಮತ್ತು ಟಗರಿನ ಮೂತ್ರವನ್ನು ಪರೀಕ್ಷಿಸಿದಾಗ ಅದ್ಯಾವುದರಲ್ಲೂ ಚಿನ್ನ ಸಿಗಲಿಲ್ಲವಂತೆ.
ಕ್ರೊಮೊಟೊಗ್ರಫಿ-ಮಾಸ್ ಸ್ಪೆಕ್ಟ್ರೊಮೆಟ್ರಿ ತಂತ್ರಜ್ಞಾನವನ್ನು ಬಳಸಿ ಗೋಲಕಿಯಾ ಅವರ ತಂಡ, ಈ ಸಂಶೋಧನೆ ನಡೆಸಿದೆ. “ಪ್ರಾಚೀನ ಗ್ರಂಥಗಳಲ್ಲಿ ಗೋಮೂತ್ರದಲ್ಲಿ ಸ್ವರ್ಣವಿರುವ ಬಗ್ಗೆ ಉಲ್ಲೇಖವಿತ್ತಾದರೂ ಅದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಸಿಕ್ಕಿರಲಿಲ್ಲ. ಈಗ ಅದನ್ನು ನಾವು ಕಂಡುಹಿಡಿದಿದ್ದೇವೆ” ಎಂದಿದ್ದಾರೆ ಗೋಲಕಿಯಾ.
ಗೋಲಕಿಯಾ, “ಗೋಮೂತ್ರದಲ್ಲಿ ಚಿನ್ನದ ಹೊರತಾಗಿ 388 ಔಷಧೀಯ ಗುಣಗಳಿವೆ. ಇದರ ಔಷಧೀಯ ಗುಣದಿಂದ ನಾವು ಅನೇಕ ರೋಗಗಳನ್ನು ಗುಣಪಡಿಸಬಹುದು” ಎಂದಿದ್ದಾರೆ.
ಬಹುಶಃ ಇದಕ್ಕೇ ಇರಬೇಕು ಹಿಂದಿನ ಕಾಲದ ಜನರು ಹಸುಗಳನ್ನು ಪೂಜಿಸುತ್ತಿದ್ದರು. ಇಂದಿಗೂ ಕೆಲವು ಧರ್ಮದಲ್ಲಿ ಹಸುಗಳ ಪೂಜೆ ಕೈಗೊಳ್ಳುವ ಸಂಪ್ರದಾಯ ಇದೆ. ಇದನ್ನು ಭೂಲೋಕದ ಕಾಮಧೇನು ಎಂದೇ ಕರೆಯುತ್ತಾರೆ. ಚಿನ್ನದ ಬೆಲೆ ಗಗನಕ್ಕೇರಿರುವಾಗ ಹಸು ಚಿನ್ನ ಕೊಟ್ಟರೆ..?