ಬೀಜಿಂಗ್: ಹಾಂಗ್ ಕಾಂಗ್ ನಲ್ಲಿ ನಡೆದ ಭೀಕರ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಮೂವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಜನನಿಬಿಡ ಪ್ರದೇಶದಲ್ಲಿ ನಡೆದ ಈ ದೃಶ್ಯ ಬೆಚ್ಚಿ ಬೀಳುವಂತಿದೆ.
ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಕಾರನ್ನು ಗುದ್ದಿಸಿ ಮೂವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ. ಹಾಂಗ್ ಕಾಂಗ್ ನ ಸಂಚಾರದಟ್ಟಣೆಯ ಸರ್ಕಲ್ ನಲ್ಲಿಯೇ ಈ ಭೀಕರ ಘಟನೆ ನಡೆದಿದೆ. ಬಿಳಿ ಬಣ್ಣದ ಕಾರಿನಲ್ಲಿದ್ದ ವ್ಯಕ್ತಿಯೊಂದಿಗೆ ಮಾತನಾಡಿಕೊಂಡು, ಇಬ್ಬರು ಯುವಕರು ತಮ್ಮ ಕಾರಿನತ್ತ ಹೊರಟಿದ್ದು, ಈ ಸಂದರ್ಭದಲ್ಲಿ ಏಕಾಏಕಿ ಬಂದ ಬಿಳಿ ಬಣ್ಣದ ಕಾರಿನ ಚಾಲಕ ಈ ಯುವಕರಿಗೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕನೊಬ್ಬ ಕಾರಿನ ಕೆಳಗೆ ಬಿದ್ದಿದ್ದಾನೆ.
ಆದರೂ, ಬಿಡದ ಬಿಳಿ ಕಾರಿನ ಚಾಲಕ ಮತ್ತೆ ಗುದ್ದಿದ್ದು, ಇಬ್ಬರ ಮೇಲೆ ಕಾರು ಹರಿಸಿದ್ದಾನೆ. ಅಲ್ಲದೇ, ಅವರನ್ನು ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದಾನೆ. ಎದುರಿಗೆ ಬಂದ ಕಾರಿಗೂ ಡಿಕ್ಕಿ ಹೊಡೆಸಿ, ಸರ್ಕಲ್ ಸುತ್ತ ತಿರುಗಾಡಿ ಕಾರಿನಲ್ಲೇ ಅವರನ್ನು ಸಾಯಿಸಲು ಪ್ರಯತ್ನಿಸಿದ್ದು, ಈ ಭೀಕರ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.