ಝಾನ್ಸಿಯ ಮೌರಾಣಿಪುರದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಾಯಿಯನ್ನು ದೇವರಂತೆಯೇ ಕಾಣುತ್ತಾರೆ !
ಈ ದೇವಸ್ಥಾನದಲ್ಲಿ ಶಿವ, ಭೈರವನಾಥನ ಜೊತೆಗೆ ನಾಯಿಯ ಮೂರ್ತಿಯೂ ಇರುವುದು ವಿಶೇಷ. ಭೈರವನಾಥನ ವಾಹನ ನಾಯಿಯಾದ್ದರಿಂದ ಮಹಾಕಾಳೇಶ್ವರದಲ್ಲಿ ನಾಯಿಗೆ ಅಗ್ರಸ್ಥಾನ.
ವಿಚಿತ್ರವೆಂಬಂತೆ ಕಳೆದ ಮಂಗಳವಾರ ಒಂದು ನಾಯಿ ಬಂದು ದೇವಸ್ಥಾನವನ್ನು ಪ್ರದಕ್ಷಿಣೆ ಮಾಡುತ್ತಿತ್ತಂತೆ. ನಾಯಿಯ ಈ ಪ್ರದಕ್ಷಿಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಒಂದು ವಾರ ಮುಂದುವರೆದಿದೆ. ಇದರಿಂದ ದೈವೀಭಕ್ತರು ಇದು ಸಾಕ್ಷಾತ್ ಭೈರವನಾಥನ ವಾಹನ ಎಂದು ನಾಯಿಯ ಸೇವೆ ಮಾಡುತ್ತಿದ್ದಾರೆ.
ಮಹಾಕಾಳೇಶ್ವರ ದೇವಸ್ಥಾನದ ಅರ್ಚಕರಾದ ಮಹಾಂತ್ ಅಟ್ಟಲಾಚಾರ್ಯ ಅವರು, “ಈ ಮೊದಲು ಕೂಡ ದೇವಸ್ಥಾನಕ್ಕೆ ಒಂದು ನಾಯಿ ಬರುತ್ತಿತ್ತು. ಅದನ್ನು ನಾವು ದೇವರ ಸೇವಕ ಎಂದೇ ಕರೆಯುತ್ತಿದ್ದೆವು. ಕಾಲಾನಂತರದಲ್ಲಿ ಅದು ಸಾವನ್ನಪ್ಪಿತು” ಎನ್ನುತ್ತಾರೆ. ನಾಯಿಯ ಈ ಸೇವೆಯನ್ನು ನೋಡಲು ಹಲವಾರು ಕಡೆಯಿಂದ ಭಕ್ತಾದಿಗಳು ಬರುತ್ತಿದ್ದಾರೆ.