ಕೆನಡಾ ಮೂಲದ ಉಗುರಿನ ವಿನ್ಯಾಸಕಿ ಕ್ರಿಸ್ಟೇನ್ ರೊಟೆನ್ಬರ್ಗ್ ತನ್ನ ಉಗುರನ್ನು ಹೊಸ ವಿಧಾನದಲ್ಲಿ ಅಲಂಕರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾಳೆ.
ಬೇರೆ ಬೇರೆ ಬಣ್ಣದ ನೇಲ್ ಪಾಲಿಶ್ ಬಳಸಿ ಒಟ್ಟಾರೆ 116 ಲೇಯರ್ ಗಳನ್ನು ಮಾಡಿದ್ದಾಳೆ. ಈ ಉಂಗುರಿನ ಸಿಂಗಾರಕ್ಕೆ ಅವಳಿಟ್ಟ ಹೆಸರು ‘ಪಾಲಿಶ್ ಮೌಂಟನ್’. ಇವಳ ಈ ಕಸರತ್ತನ್ನು ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 8.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಈ ವಿನ್ಯಾಸಕಿ ಒಟ್ಟು 12 ತಾಸುಗಳ ಅವಧಿಯಲ್ಲಿ ‘ಪಾಲಿಶ್ ಮೌಂಟನ್’ ಅನ್ನು ನಿರ್ಮಿಸಿದ್ದಾಳೆ. ಕ್ರಿಸ್ಟೇನ್ ರೊಟೆನ್ಬರ್ಗ್ ಮೆಟಾಲಿಕ್, ಎಕ್ರೆಲಿಕ್, ಗ್ಲಿಟರ್ ಮುಂತಾದ ಬಣ್ಣಗಳನ್ನು ಉಪಯೋಗಿಸಿ ಹೊಸ ರೀತಿಯಲ್ಲಿ ಉಗುರನ್ನು ವಿನ್ಯಾಸ ಮಾಡಿದ್ದಾರೆ.