ಮುಂಬೈ: ಎ.ಐ.ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ‘ಭಾರತ ಮಾತಾ ಕೀ ಜೈ’ ಘೋಷಣೆ ಕೂಗುವ ವಿಚಾರದಲ್ಲಿ ವಿವಾದದ ಹೇಳಿಕೆ ನೀಡಿದ್ದರು. ಅಲ್ಲದೇ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಬಗ್ಗೆ ಟೀಕಿಸಿದ್ದರು.
ಅವರ ಹೇಳಿಕೆ ವಿರೋಧಿಸಿ, ಮಹಾರಾಷ್ಟ್ರ ನವನಿರ್ಮಾಣ ವೇದಿಕೆ ಅಧ್ಯಕ್ಷ ರಾಜ್ ಠಾಕ್ರೆ ಏನು ಮಾಡಿದ್ದಾರೆ ನೋಡಿ. ರಾಜ್ ಠಾಕ್ರೆ ಅವರು, ಮುಂಬೈನಲ್ಲಿ ತಮ್ಮ 48ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಹುಟ್ಟುಹಬ್ಬಕ್ಕೆಂದು ಕಾರ್ಯಕರ್ತರು ಅಭಿಮಾನಿಗಳು ತಂದಿದ್ದ ಅಸಾದುದ್ದೀನ್ ಓವೈಸಿ ಭಾವಚಿತ್ರ ಇದ್ದ ಕೇಕ್ ಕತ್ತರಿಸುವ ಮೂಲಕ ಗಮನ ಸೆಳೆದರು. ಓವೈಸಿ ಭಾವಚಿತ್ರದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ಭಾರತ್ ಮಾತಾ ಕೀ ಜೈ ಘೋಷಣೆ ಕೂಗದಿದ್ದರೆ ಹೀಗೆಯೇ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ 48 ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಜ್ ಠಾಕ್ರೆ, ಮಹಾರಾಷ್ಟ್ರ ಮತ್ತು ಹಿಂದೂಗಳ ಬಗ್ಗೆ ಯಾರೇ ಅವಹೇಳನಕಾರಿ ಮಾತುಗಳನ್ನಾಡಿದರೆ, ಸಹಿಸುವುದಿಲ್ಲ ಎಂದು ಹೇಳಿದ್ದಾರೆ.