Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಸಲಿಂಗಿಗಳ ಚುಂಬನವೇ ಸಾವಿಗೆ ಕಾರಣವಾಯ್ತಾ?

$
0
0
ಸಲಿಂಗಿಗಳ ಚುಂಬನವೇ ಸಾವಿಗೆ ಕಾರಣವಾಯ್ತಾ?

ವಾಷಿಂಗ್ಟನ್: ಫ್ಲೋರಿಡಾದ ಒರ್ಲಾಂಡೋದಲ್ಲಿರುವ ಪಲ್ಸ್ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿ 53 ಮಂದಿಯನ್ನು ಕೊಂದು ಹಾಕಿದ್ದ ಆಫ್ಘನ್ ಮೂಲದ ದಾಳಿಕೋರ ಉಮರ್ ಮತೀನ್ ನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಸಲಿಂಗಿಗಳ ಚುಂಬನಕ್ಕೆ ವಿರೋಧ ವ್ಯಕ್ತಪಡಿಸಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದ್ದು, ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ತನ್ನ ಸಂಘಟನೆಯ ಸದಸ್ಯನೇ ಈ ದಾಳಿ ಮಾಡಿರುವುದಾಗಿ ಐಸಿಸ್ ಹೇಳಿಕೊಂಡಿದೆ. ಆದರೆ, ಇದನ್ನು ಅಲ್ಲಗಳೆದಿರುವ ಅಮೆರಿಕ ಪೊಲೀಸರು, ಅಂತಹ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ತಿಳಿಸಿದ್ದಾರೆ. ಸಲಿಂಗಿಗಳು ಚುಂಬಿಸಿಕೊಳ್ಳುವುದಕ್ಕೆ ಐಸಿಸ್ ವಿರೋಧ ಹೊಂದಿದೆ. ಈ ಸಂಘಟನೆಯ ಸದಸ್ಯನಾಗಿದ್ದ ಉಮರ್ ಮತೀನ್ ಕೂಡ ಸಲಿಂಗಿಗಳ ಚುಂಬನದಿಂದ ಆಕ್ರೋಶಗೊಂಡು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

ಉಮರ್ ತಂದೆ ಈ ಕೃತ್ಯವನ್ನು ಖಂಡಿಸಿ ಕ್ಷಮೆಯಾಚಿಸಿದ್ದು, ಸಲಿಂಗಿಗಳು ಚುಂಬಿಸುವುದನ್ನು ಆತ ವಿರೋಧಿಸಿದ್ದ. ಈ ಕ್ಲಬ್ ಗೆ ಸಲಿಂಗಿಗಳೇ ಹೆಚ್ಚಾಗಿ ಬರುತ್ತಿದ್ದು, ಅಲ್ಲಿಗೆ ಉಮರ್ ಹಿಂದೆ ಹೋಗಿ ಬಂದಿದ್ದ ಎಂದು ಹೇಳಿದ್ದಾರೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>