ಆಗ್ರಾ: ದೇಶದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗತಿಮಾನ್ ಎಕ್ಸ್ ಪ್ರೆಸ್ ಆಗ್ರಾದ ನಿಲ್ದಾಣದಲ್ಲಿ ಫ್ಲಾಟ್ ಫಾರಂಗೆ ಡಿಕ್ಕಿ ಹೊಡೆದಿದೆ. ಗುರುವಾರ ಫ್ಲಾಟ್ ಫಾರಂಗೆ ಆಗಮಿಸಿದ ರೈಲು ಎಂಡಿಂಗ್ ನಲ್ಲಿ ಡಿಕ್ಕಿ ಹೊಡೆದಿದೆ.
ದೆಹಲಿಯಿಂದ ಆಗಮಿಸಿದ ಗತಿಮಾನ್ ಎಕ್ಸ್ ಪ್ರೆಸ್ ರೈಲು ಆಗ್ರಾದ ಕಂಟೋನ್ಮೆಂಟ್ ರೈಲು ನಿಲ್ದಾಣದ ಫ್ಲಾಟ್ ಫಾರಂ ನಂ.6ಕ್ಕೆ ಬಂದಿದೆ. ಈ ಸಂದರ್ಭದಲ್ಲಿ ತುದಿಗೆ ತಲುಪುವ ಮೊದಲೇ ನಿಲ್ಲಬೇಕಿತ್ತಾದರೂ, ಅದು ಸಾಧ್ಯವಾಗದೇ ತುದಿಯಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ರೈಲಿಗೆ ಡ್ಯಾಮೇಜ್ ಆಗಿದೆ. ಅಲ್ಲದೇ, ತಡೆಗೋಡೆಯೂ ಹಾಳಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.
ದೆಹಲಿಯಿಂದ ಆಗ್ರಾಕ್ಕೆ 188 ಕಿಲೋ ಮೀಟರ್ ದೂರವಿದ್ದು, ಈ ರೈಲು 100 ನಿಮಿಷದಲ್ಲಿ ತಲುಪಲಿದೆ. ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್ ಪ್ರೆಸ್ ದೇಶದ ಅತಿವೇಗದ ರೈಲು ಎಂಬ ಹೆಗ್ಗಳಿಕೆ ಹೊಂದಿದೆ.