X46 ತಯಾರಿಸಿದ ಬೆನ್ನಲ್ಲೇ ಲಾವಾ ಈಗ x81 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಜೊತೆಗೆ ಒಂದು ವರ್ಷದ ಸ್ಕ್ರೀನ್ ರಿಪ್ಲೇಸ್ ಮೆಂಟ್ ವಾರಂಟಿ ಕೂಡ ಸಿಗಲಿದೆ.
ಈ ಅಂಡ್ರಾಯ್ಡ್ ಫೋನ್ ಮಾರ್ಶ್ ಮೈಲೋ ಆಧಾರಿತ ಸ್ಟಾರ್ ಓಎಸ್ 3.0 ದಲ್ಲಿ ಕಾರ್ಯ ನಿರ್ವಹಿಸಲಿದೆ. ಲಾವಾ x81 ನಲ್ಲಿ 5 ಇಂಚಿನ ಎಚ್ ಡಿ ಐಪಿಎಸ್ ಡಿಸ್ಪ್ಲೇ ಇದೆ. ಇದರ ರೆಸಲ್ಯೂಶನ್ 720×1280 ಫಿಕ್ಸೆಲ್ ಇದೆ. ಈ ಫೋನ್ ನ ಗ್ಲಾಸ್ ಗಳು ಸ್ಕ್ರ್ಯಾಚ್ ನಿಂದ ಹಾನಿಯಾಗಬಾರದೆಂದು ಕಾರ್ನಿಂಗ್ ಗರಿಲಾ ಗ್ಲಾಸ್ 3 ಕೋಟಿಂಗ್ ಮಾಡಲಾಗಿದೆ. 2.5 ಡಿ ಕರ್ವ್ಡ್ ಗ್ಲಾಸ್ ಕೂಡ ಅಳವಡಿಸಿದ್ದಾರೆ.
x81 ನಲ್ಲಿ 1.3GHz ನ ಕ್ವಾಡ್ ಕೋರ್ ಪ್ರೊಸೆಸರ್ ನೊಂದಿಗೆ ಮೂರು ಜಿಬಿ ಯ ರ್ಯಾಮ್ ಅನ್ನು ಕೊಡಲಾಗುತ್ತದೆ. ಈ ಫೋನ್ ನ ಇಂಟರ್ನಲ್ ಮೆಮೊರಿ 16 ಜಿಬಿ ಇದ್ದು, ಇದನ್ನು ಮೈಕ್ರೋ ಎಸ್ಡಿ ಕಾರ್ಡ್ ನ ಸಹಾಯದಿಂದ 64 ಜಿಬಿಯ ತನಕ ಹೆಚ್ಚಿಸಿಕೊಳ್ಳಬಹುದಾಗಿದೆ. x81 ಸ್ಮಾರ್ಟ್ ಫೋನ್ ನಲ್ಲಿ 13 ಮೆಗಾ ಫಿಕ್ಸೆಲ್ ಹಿಂದಿನ ಕ್ಯಾಮೆರಾ ಹಾಗೂ ಮುಂದಿನ ಕ್ಯಾಮೆರಾ 5 ಮೆಗಾ ಫಿಕ್ಸೆಲ್ ದ ಜೊತೆಗೆ ಡ್ಯೂಯೆಲ್ ಪ್ಲ್ಯಾಶ್ ನ ಸೌಲಭ್ಯವೂ ಇದೆ.
x81 ಫೋನ್ VoLTE ಮತ್ತು 4 ಜಿ, 3 ಜಿ, ವೈಫೈ, ಜಿಪಿಎಸ್, ಮೈಕ್ರೋ ಯು ಎಸ್ ಬಿ, ಬ್ಲೂಟೂತ್ ಮುಂತಾದವುಗಳನ್ನು ಸಪೋರ್ಟ್ ಮಾಡುತ್ತದೆ. ಈ ಎಲ್ಲ ಸೌಲಭ್ಯವಿರುವ x81 ಫೋನ್ ಜೂನ್ 13 ರಿಂದ ಫ್ಲಿಪ್ ಕಾರ್ಟ್ ಮತ್ತ ರಿಟೇಲ್ ಸ್ಟೋರ್ ಗಳಲ್ಲಿ ಸಿಗಲಿದೆ. ಇದರ ಬೆಲೆ 11,499 ರೂ.ಗಳೆಂದು ಕಂಪನಿ ತಿಳಿಸಿದೆ.