ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನ ವಿಶ್ವಪರಂಪರೆಯ ತಾಣವಾಗಿದೆ. ಏಕಕೊಂಬಿನ ಘೇಂಡಾಮೃಗ(ಖಡ್ಗಮೃಗ)ಗಳಿಗೆ ಹೆಸರುವಾಸಿಯಾಗಿರುವ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ.
430 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಕಾಜಿರಂಗ ಉದ್ಯಾನದ ಪ್ರದೇಶದಲ್ಲಿ ಎತ್ತರದ ಆನೆ ಹುಲ್ಲು ಬೆಳೆದಿದ್ದು, ಉಷ್ಣವಲಯದ ಕಾಡು, ಜೌಗು ಪ್ರದೇಶ ಒಳಗೊಂಡಿದೆ. ಬ್ರಹ್ಮಪುತ್ರ ಮೊದಲಾದ 4 ನದಿಗಳು ಈ ಪ್ರದೇಶದಲ್ಲಿ ಹರಿಯುತ್ತವೆ. ಅಸ್ಸಾಂ ಜನರ ಬದುಕಿನೊಂದಿಗೇ ಬೆಸೆದುಕೊಂಡಿರುವ ಕಾಜಿರಂಗ ಉದ್ಯಾನವನ್ನು 1905ರಲ್ಲಿ ಮೀಸಲು ಅರಣ್ಯವಾಗಿ ಘೋಷಿಸಲಾಗಿದೆ. ಖಡ್ಗಮೃಗ ಸೇರಿದಂತೆ ಅನೇಕ ಪ್ರಾಣಿಗಳು ಇಲ್ಲಿವೆ.
ಅಸ್ಸಾಂನ ಗೋಲಾಘಾಟ್ ಹಾಗೂ ನಾಗಾಂವ್ ಜಿಲ್ಲೆ ವ್ಯಾಪ್ತಿಯಲ್ಲಿ ಈ ಉದ್ಯಾನವಿದೆ. ಹುಲಿ, ಚಿರತೆ, ಪುನುಗು ಬೆಕ್ಕು, ಜಿಂಕೆ, ಕರಡಿ, ಲಂಗೂರ್, ಚಿರತೆ, ಆನೆ, ಕಾಡುಕೋಣ ಮೊದಲಾದವುಗಳು ಇಲ್ಲಿದ್ದು, ಜೀವವೈವಿಧ್ಯತೆಗಳ ತಾಣವಾಗಿದೆ.