ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಬರೋಬ್ಬರಿ 101 ವರ್ಷದ ವೃದ್ಧೆಯೊಬ್ಬರು, ಮುದ್ದಾದ ಹೆಣ್ಣುಮಗುವಿನ ತಾಯಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಇಟಲಿ ಮೂಲದ ಅನಾತೋಲಿಯಾ ವರ್ತಾದೆಲ್ಲಾ ಎಂಬ ವೃದ್ಧೆ ಮೊಮಕ್ಕಳು, ಮರಿ ಮಕ್ಕಳ ಮಕ್ಕಳನ್ನು ಕಾಣುವ ವಯಸ್ಸಿನಲ್ಲಿ ತಾಯಿಯಾಗಿದ್ದು, ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಟರ್ಕಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಂಡಾಶಯ ಕಸಿ ಮೂಲಕ ಈಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಯುರೋಪ್ ಕಾನೂನಿನ ಪ್ರಕಾರ, 100 ವರ್ಷ ದಾಟಿದವರಿಗೆ ಅಂಡಾಶ ಕಸಿ ಮಾಡುವಂತಿಲ್ಲ. ಆದರೆ, ಟರ್ಕಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
101ನೇ ವಯಸ್ಸಿನಲ್ಲಿ ಮಗು ಹೆತ್ತಿರುವ ಈ ಪ್ರಕರಣಕ್ಕೆ ವೈದ್ಯಕೀಯ ಲೋಕದಿಂದ ವಿರೋಧ ವ್ಯಕ್ತವಾಗಿದೆ. ಆಕೆಯ ದೇಹ ಮಗುವನ್ನು ಆರೈಕೆ ಮಾಡಲು ಸ್ಪಂದಿಸುವುದಿಲ್ಲ ಎಂದು ಹೇಳಲಾಗಿದೆ. ಆದರೆ, ವೃದ್ಧೆ ಮಾತ್ರ 17ನೇ ಮಗುವಿಗೆ ಜನ್ಮ ನೀಡಿದ್ದೇನೆ. ಇದಕ್ಕೆ ವೈದ್ಯರ ಸಹಕಾರ ಕಾರಣ ಎಂದು ಹೇಳಿದ್ದಾರೆ.
26 ವರ್ಷದ ಯುವಕನೊಬ್ಬನ ಅಂಡಾಶಯ ಕಸಿಯೊಂದಿಗೆ ಆಕೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಭಾರತದಲ್ಲಿ 72 ವರ್ಷದ ವೃದ್ಧೆ ಮಗುವಿಗೆ ಜನ್ಮ ನೀಡಿದ್ದು, ಸುದ್ದಿಯಾಗಿತ್ತು. 1931ರಲ್ಲಿ ದಕ್ಷಿಣಾ ಆಫ್ರಿಕಾದ ಮಹಿಳೆ 92ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದೆ.