ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾಕ್ಕೆ ನಾಯಕಿ ಫಿಕ್ಸ್ ಆಗಿದ್ದಾರೆ. ಈ ಮೊದಲು ದರ್ಶನ್ ಅವರೊಂದಿಗೆ ಅಂಜಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.
ದರ್ಶನ್ ಸ್ನೇಹಿತ ಅಣಜಿ ನಾಗರಾಜ್ ನಿರ್ಮಾಣದ, ಚಿಂತನ್ ನಿರ್ದೇಶನದ ‘ಚಕ್ರವರ್ತಿ’ ಸಿನಿಮಾದ ಶೂಟಿಂಗ್ ಗೆ ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ದರ್ಶನ್ ಅವರೊಂದಿಗೆ ಈ ಚಿತ್ರದಲ್ಲಿ ಮಲೆನಾಡ ಬೆಡಗಿ ದೀಪಾ ಸನ್ನಿಧಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ದರ್ಶನ್ ಅಭಿನಯದ ಭಾರೀ ಯಶಸ್ಸು ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಸಾರಥಿ’ಯಲ್ಲಿ ದೀಪಾ ನಟಿಸಿದ್ದರು.
ದರ್ಶನ್ ಅವರೊಂದಿಗೆ 5 ವರ್ಷಗಳ ಬಳಿಕ ದೀಪಾ ಸನ್ನಿಧಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ, ‘ಸಾರಥಿ’ ನಂತರ ಪುನೀತ್ ಅಭಿನಯದ ‘ಪರಮಾತ್ಮ’, ಯಶ್ ಅಭಿನಯದ ‘ಜಾನು’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ದೀಪಾ ನಟಿಸಿದ್ದಾರೆ. ಇದೀಗ ದರ್ಶನ್ ಅವರೊಂದಿಗೆ ಎರಡನೇ ಬಾರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.