ಶಿಕ್ಷಣದಲ್ಲಿ ಕ್ರಿಯೇಟಿವಿಟಿ ಮುಖ್ಯ. ಕ್ರಿಯಾಶೀಲತೆ ಹೆಚ್ಚಿದ್ದಷ್ಟು ಮಕ್ಕಳಿಗೆ ಬೇಗ ಪಾಠ ಅರ್ಥವಾಗುತ್ತದೆ. ವಿಷಯ ತಲೆಯಲ್ಲಿ ಉಳಿಯುತ್ತದೆ. ಇದನ್ನು ಅರಿತಿರುವ ನೆದರ್ಲ್ಯಾಂಡ್ ಶಿಕ್ಷಕಿಯೊಬ್ಬರು ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.
ಮಾನವನ ಅಂಗ ರಚನೆ ಸೇರಿದಂತೆ ಜೀವಶಾಸ್ತ್ರದ ಕೆಲವು ಅಂಶಗಳ ಬಗ್ಗೆ ತಿಳಿಯಲು ಮಕ್ಕಳು ಕಷ್ಟಪಡುತ್ತಾರೆ. ಗ್ರೋನಿ ಹಾರ್ಟ್ ಸ್ಕೂಲಿನ ಶಿಕ್ಷಕಿ ಡೆಬಿ ಹೆರ್ಕನ್ಸ್ ಮಕ್ಕಳಿಗೆ ಇದನ್ನು ಸುಲಭ ಮಾಡಿದ್ದಾರೆ. ಶಾಲೆಗೆ ಬಂದ ಶಿಕ್ಷಕಿ, ಪಾಠ ಹೇಳಿ ಕೊಡುವ ವೇಳೆ ತಮ್ಮ ಎಂದಿನ ಉಡುಗೆಯನ್ನು ಕಳಚಿದ್ದಾರೆ. ಅವರು ಬಟ್ಟೆಯ ಒಳಗೆ ಬಿಗಿಯಾಗಿರುವ ದೇಹದ ಅಂಗ ರಚನೆಯುಳ್ಳ ಸೂಟೊಂದನ್ನು ಹಾಕಿಕೊಂಡು ಬಂದಿದ್ದರು. ಅದನ್ನು ಮಕ್ಕಳಿಗೆ ತೋರಿಸಿ ವಿವರಿಸಿದ್ದಾರೆ.
ದೇಹದ ವಿವಿಧ ಭಾಗಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಉತ್ತಮ ಶಿಕ್ಷಕರಾದವರು ಮಕ್ಕಳಿಗೆ ಸುಲಭವಾಗಿ ಪಾಠ ಅರ್ಥವಾಗಲು ಕ್ರಿಯೇಟಿವಿಟಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇದರಿಂದ ಪಾಠದಲ್ಲಿ ಆಸಕ್ತಿ ಇಲ್ಲದ ಮಕ್ಕಳೂ ಆಡುತ್ತಲೇ ಪಾಠ ಕಲಿಯುತ್ತಾರೆ.