ನವದೆಹಲಿ: ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಕಾಯಿಲೆಯಿಂದ ಮಗುವೊಂದು ಬಳಲುತ್ತಿದ್ದು, ಕೇವಲ ಒಂದು ವರ್ಷ ವಯಸ್ಸಿನ ಈ ಮಗುವಿಗೆ ಯವ್ವನಕ್ಕೆ ಬಂದವರಿಗೆ ಬರುವಂತೆ ಗಡ್ಡ, ಮೀಸೆ ಬಂದಿವೆ.
ಒಂದು ವರ್ಷದ ಈ ಮಗುವಿಗೆ ಗಡ್ಡ, ಮೀಸೆ ಬಂದಿರುವ ಜೊತೆಗೆ, ಜನನಾಂಗವೂ ಕೂಡ, ದೊಡ್ಡವರಂತೆ ಬೆಳವಣಿಗೆಯಾಗಿದೆ. ಈ ಮಗುವಿಗೆ 6 ತಿಂಗಳಾದ ಬಳಿಕ ದೇಹದಲ್ಲಿ ಅಸಹಜವಾದ ಬೆಳವಣಿಗೆ ಕಂಡು ಬರತೊಡಗಿದ್ದು, ಬೇರೆಯ ಮಕ್ಕಳಿಗಿಂತ ಹೆಚ್ಚು ತೂಕ, ಎತ್ತರ ಕಂಡು ಬಂದಿದೆ. ಮೊದಲಿಗೆ ಪೋಷಕರು ಇದನ್ನು ನಿರ್ಲಕ್ಷಿಸಿದ್ದಾರೆ. ಆ ನಂತರದಲ್ಲಿ ಮಗುವಿನ ಬೆಳವಣಿಗೆ, ಅದರ ದೇಹದಲ್ಲಿ ಆದ ಬದಲಾವಣೆ ಚಿಂತೆಗೀಡು ಮಾಡಿದೆ.
ಮಗುವಿನ ಅಸಹಜ ಬೆಳವಣಿಗೆಯಿಂದಾಗಿ ಕಂಗಾಲಾದ ಪೋಷಕರು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು, ಹಾರ್ಮೋನ್ ವ್ಯತ್ಯಾಸದಿಂದ ಈ ರೀತಿ ಆಗಿದೆ. ಇದನ್ನು ಅವಧಿ ಪೂರ್ವ ಹರೆಯ ಎಂದು ಕರೆಯುವುದಾಗಿ ತಿಳಿಸಿದ್ದಾರೆ.
ಮತ್ತೊಂದು ಅಚ್ಚರಿಯ ವಿಷಯ ಏನೆಂದರೆ, 25 ರ ಹರೆಯದ ತರುಣರಿಗೆ ಇರುವಂತೆ, ಈ ಮಗುವಿಗೆ ಲೈಂಗಿಕ ಹಾರ್ಮೋನುಗಳು ಹೆಚ್ಚಿನ ಪ್ರಮಾಣದಲ್ಲಿದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.