ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನರಿಗೆ ಬರುವ ಜೂನ್ 1 ರಿಂದ ಮತ್ತೊಂದು ಹೊರೆ ಬೀಳಲಿದೆ. ಇದರಿಂದಾಗಿ ಮೊಬೈಲ್ ಕರೆ ದರ, ಪ್ರಯಾಣ, ಸಿನಿಮಾ ವೀಕ್ಷಣೆ ದರಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ.
ಕೇಂದ್ರ ಸರ್ಕಾರ ಜೂನ್ 1 ರಿಂದ ಎಲ್ಲ ಸೇವೆಗಳ ಮೇಲೆ ಶೇ 0.5 ರಷ್ಟು ‘ಕೃಷಿ ಕಲ್ಯಾಣ್ ಸೆಸ್’ ವಿಧಿಸಲಿದ್ದು, ಇದರಿಂದಾಗಿ ಈಗ ಇರುವ ತೆರಿಗೆ ಪ್ರಮಾಣ ಶೇ. 14.5 ರಿಂದ ಶೇ.15 ಕ್ಕೆ ಏರಿಕೆಯಾಗಲಿದೆ.
ಈ ಮೊದಲು ಶೇ.14 ರಷ್ಟಿದ್ದ ಸೇವಾ ತೆರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ‘ಸ್ವಚ್ಚ ಭಾರತ್ ಯೋಜನೆ’ ಗಾಗಿ 0.5 ರಷ್ಟು ಏರಿಕೆ ಮಾಡಿದ್ದ ಕಾರಣ ಶೇ.14.5 ಕ್ಕೆ ಏರಿಕೆಯಾಗಿತ್ತು. ಈಗ ಮತ್ತೇ ಶೇ.0.5 ರಷ್ಟು ‘ಕೃಷಿ ಕಲ್ಯಾಣ್ ಸೆಸ್’ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.