ಬಾಲಿವುಡ್ ಬೆಡಗಿ ಪೂನಂ ಪಾಂಡೆ ಚಿತ್ರರಂಗದಲ್ಲಿ ಮಿಂಚಿದ್ದಕ್ಕಿಂತ ಜಾಸ್ತಿ ತನ್ನ ವರ್ತನೆಯಿಂದಲೇ ಸಕತ್ ಫೇಮಸ್. ಸಮಯ ಸಿಕ್ಕಾಗಲೆಲ್ಲಾ ಒಂದು ಹಾಟ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಖಯಾಲಿ ಹೊಂದಿರುವ ಪೂನಂ, ಈ ಹಿಂದೆ ವಿರಾಟ್ ಕೊಹ್ಲಿಗಾಗಿ ಸ್ಪೆಷಲ್ ವಿಡಿಯೋ ಒಂದನ್ನು ಮಾಡಿದ್ದಳು.
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ, ಈ ಸೀಸನ್ ನಲ್ಲಿ ತಮ್ಮ ಆಕರ್ಷಕ ಆಟದ ಕಾರಣಕ್ಕಾಗಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಈಗಾಗಲೇ ಹತ್ತು ಹಲವು ದಾಖಲೆ ಮಾಡಿರುವ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.
ಇನ್ನು 81 ರನ್ ಗಳಿಸಿದರೆ ಐಪಿಎಲ್ ಸೀಸನ್ ನಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ. ಅಲ್ಲದೇ ವಿಶ್ವ ಜಾಹೀರಾತು ಕ್ಷೇತ್ರದಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ ಟ್ವಿಟ್ಟರ್ ನಲ್ಲಿ ಆಪಾರ ಅಭಿಮಾನಿ ಬಳಗವಿದ್ದು, ಈ ಪೈಕಿ ಪೂನಂ ಪಾಂಡೆ ಕೂಡಾ ಇದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿಯೆಡೆಗಿನ ತನ್ನ ಪ್ರೀತಿಯ ಕುರಿತು ಮತ್ತೇ ಹೇಳಿಕೊಂಡಿರುವ ಪೂನಂ ಪಾಂಡೆ ಹೃದಯಾಂತರಾಳದಿಂದ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾರೆ.