ರೋಮ್: ಇಟಲಿಯಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ಭಾರೀ ಹಾನಿ ಸಂಭವಿಸಿದೆ. ರೋಮ್ ಮತ್ತು ವಿಸೋ ನಗರಗಳಲ್ಲಿ 2 ಬಾರಿ ಭೂಮಿ ಕಂಪಿಸಿದೆ.
ರಾತ್ರಿ ಭೂಮಿ ಕಂಪಿಸಿದ್ದರಿಂದ ಜನ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆಯ ಕಂಪನವಾಗಿದ್ದು, ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗಿದೆ. ಭೂಕಂಪನದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಲ್ಲಿಯೇ ರೋಮ್ ನಿವಾಸಿಗಳು ಕಾಲಕಳೆಯುವಂತಾಗಿದೆ. ಭೂಕಂಪನದಿಂದ ಜೀವಹಾನಿಯೂ ಆಗಿರಬಹುದೆಂದು ಹೇಳಲಾಗಿದೆ.
ಕಟ್ಟಡಗಳ ಅವಶೇಷಗಳಡಿ ಕೆಲವರು ಸಿಲುಕಿರಬಹುದಾದ ಸಾಧ್ಯತೆ ಇದ್ದು, ಕಾರ್ಯಾಚರಣೆ ಆರಂಭಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಜೀವಹಾನಿ ಸಂಭವಿಸಿಲ್ಲ.