ಟೆಲಿಕಾಂ ಕಂಪನಿ ವೋಡಾಫೋನ್ ಇಂಡಿಯಾ, ಗ್ರಾಹಕರಿಗೆ ದೀಪಾವಳಿ ಉಡುಗೊರೆ ನೀಡ್ತಾ ಇದೆ. ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಶುಭ ಕೋರುತ್ತಿದೆ. ಅಕ್ಟೋಬರ್ 28 ರಂದು ವೋಡಾಫೋನ್ ಮಳಿಗೆಗೆ ಹೋಗುವ ಗ್ರಾಹಕರಿಗೆ ಕಂಪನಿ ಉಚಿತ ಗಿಫ್ಟ್ ಹಾಗೂ ಸಿಹಿ ತಿಂಡಿಯನ್ನು ನೀಡಲಿದೆ.
ದೆಹಲಿ ಹಾಗೂ ಎನ್ ಸಿ ಆರ್ ನ ಒಟ್ಟು 52 ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಕಂಪನಿ ಉಡುಗೊರೆ ನೀಡಲಿದೆ. ಗ್ರಾಹಕರ ಇಚ್ಚೆ ಪ್ರಕಾರ ಕೊಡುಗೆ ನೀಡಲು ವೋಡಾಫೋನ್ ಮುಂದಾಗಿದೆ. ತಮಿಳುನಾಡಿನಲ್ಲಿಯೂ ಗ್ರಾಹಕರಿಗೆ ವೋಡಾಫೋನ್, ಉಡುಗೊರೆ ನೀಡಲು ಸಿದ್ದತೆ ನಡೆಸಿದೆ.
ತಮಿಳುನಾಡಿನಲ್ಲಿ ವೋಡಾಫೋನ್ ಮಳಿಗೆಗೆ ಹೋಗುವ ಗ್ರಾಹಕರಿಗೆ ಅವರ ಅವಶ್ಯಕತೆಗನುಗುಣವಾಗಿ ಕೊಡುಗೆಗಳನ್ನು ನೀಡಲಿದೆ. ಈಗಾಗಲೇ ತಮಿಳುನಾಡಿನಲ್ಲಿ ಈ ಕೊಡುಗೆ ನೀಡಲಾಗ್ತಾ ಇದ್ದು, ಅಕ್ಟೋಬರ್ 27 ರವರೆಗೆ ಲಭ್ಯವಿದೆ. ತಮಿಳುನಾಡಿನಲ್ಲಿ ಸುಮಾರು 60 ವೋಡಾಫೋನ್ ಮಳಿಗೆಗಳಿದ್ದು, 16 ಮಿಲಿಯನ್ ಗ್ರಾಹಕರನ್ನು ಕಂಪನಿ ಹೊಂದಿದೆ.