ರಾಂಚಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ, ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ನಡೆಯುತ್ತಿರುವ 4 ನೇ ಏಕದಿನ ಪಂದ್ಯ ಕುತೂಹಲ ಮೂಡಿಸಿದೆ.
ಸರಣಿಯಲ್ಲಿ 2-1 ಅಂತರದಿಂದ ಮುಂದಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಜಯಿಸಿ ಸರಣಿ ವಶ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದರೆ, ನ್ಯೂಜಿಲೆಂಡ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 260 ರನ್ ಕಲೆಹಾಕಿದೆ. ನ್ಯೂಜಿಲೆಂಡ್ ಪರವಾಗಿ ಮಾರ್ಟಿನ್ ಗುಪ್ಟಿಲ್ 72, ಟಾಮ್ ಲೋಥಮ್ 39, ಕೇನ್ ವಿಲಿಯಮ್ ಸನ್ 41, ರಾಸ್ ಟೇಲರ್ 35, ಜಿಮ್ಮಿ ನಿಶಾಮ್ 6, ಬ್ರಾಡ್ಲಿ ವೇಯ್ಟಿಂಗ್ 14, ಅಂಟಾನ್ ಡಿವಿಸ್ಚ್ 11, ಮಿಚೆಲ್ ಸ್ಯಾಟ್ನರ್ 16, ಟಿಮ್ ಸೋಧಿ 5 ರನ್ ಗಳಿಸಿದ್ದಾರೆ.
ಭಾರತದ ಪರವಾಗಿ, ಉಮೇಶ್ ಯಾದವ್ 1, ಅಮಿತ್ ಮಿಶ್ರಾ 2, ಅಕ್ಷರ್ ಪಟೇಲ್ 1, ಹಾರ್ದಿಕ್ ಪಾಂಡ್ಯ 1, ಧವಳ್ ಕುಲಕರ್ಣಿ 1 ವಿಕೆಟ್ ಪಡೆದಿದ್ದಾರೆ. ಭಾರತಕ್ಕೆ 261 ಗೆಲುವಿನ ಗುರಿ ನೀಡಲಾಗಿದ್ದು, ಪಂದ್ಯ ಕುತೂಹಲ ಮೂಡಿಸಿದೆ.