ಮಾತನಾಡುವ ಗಿಳಿ ಕಂಡ್ರೆ ಯಾರಿಗೆ ಇಷ್ಟವಿಲ್ಲ. ಗಿಳಿ ನಾವಾಡಿದ ಮಾತನ್ನು ಅನುಕರಣೆ ಮಾಡಿದ್ರೆ ಖುಷಿಯಾಗುತ್ತೆ. ಆದ್ರೆ ಕುವೈತ್ ನಲ್ಲಿ ಗಿಳಿಯ ಮಾತು ವ್ಯಕ್ತಿಯೊಬ್ಬನ ಅಸಲಿ ಬಣ್ಣ ಬಿಚ್ಚಿಟ್ಟಿದೆ.
ಕುವೈತ್ ನಿವಾಸಿಯೊಬ್ಬ ಹೆಂಡತಿಯಿಲ್ಲದ ವೇಳೆ ಮನೆ ಕೆಲಸದಾಕೆ ಜೊತೆ ರೋಮ್ಯಾನ್ಸ್ ಮಾಡ್ತಿದ್ದ. ಬಣ್ಣ ಬಣ್ಣದ ಮಾತುಗಳನ್ನಾಡ್ತಿದ್ದ. ಮನೆಯಲ್ಲಿದ್ದ ಗಿಳಿ ಈ ಎಲ್ಲ ಮಾತುಗಳನ್ನು ಕೇಳಿಸಿಕೊಂಡಿದೆ. ಒಂದು ದಿನ ಆತನ ಪತ್ನಿ ಮನೆಗೆ ಬರ್ತಾ ಇದ್ದಂತೆ ಆತ ಆಡಿದ ಮಾತುಗಳನ್ನು ಗಿಳಿ ಆಡಿದೆ.
ಗಿಳಿ ಮಾತು ಕೇಳಿ ಮೊದಲು ಗೊಂದಲಕ್ಕೀಡಾದ ಮಹಿಳೆಗೆ ನಂತ್ರ ಎಲ್ಲವೂ ಅರ್ಥವಾಗಿದೆ. ಗಿಳಿಯನ್ನು ಸಾಕ್ಷಿಯಾಗಿರಿಸಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಮಹಿಳೆ. ಆದ್ರೆ ಪತಿಯ ಅದೃಷ್ಟ ಚೆನ್ನಾಗಿತ್ತು. ಪೊಲೀಸರು ಗಿಳಿಯ ಸಾಕ್ಷಿಯನ್ನು ನಿರಾಕರಿಸಿದ್ದಾರೆ.