ಕರಣ್ ಜೋಹರ್ ನಿರ್ದೇಶನದ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರದ ಎಲ್ಲ ಕಷ್ಟಗಳು ದೂರವಾಗಿವೆ. ರಣಬೀರ್ ಕಪೂರ್, ಐಶ್ವರ್ಯ ರೈ ಬಚ್ಚನ್, ಅನುಷ್ಕಾ ಶರ್ಮಾ ಅಭಿನಯದ ಚಿತ್ರ ನಿಗದಿಯಂತೆ ತೆರೆಕಾಣಲಿದೆ. ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರದ ಟಿಕೆಟ್ ಬೆಲೆ ಮಾತ್ರ ಅಭಿಮಾನಿಗಳ ತಲೆ ತಿರುಗುವಂತೆ ಮಾಡಿದೆ.
‘ಎ ದಿಲ್ ಹೇ ಮುಷ್ಕಿಲ್’ ಚಿತ್ರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ರಣಬೀರ್ ಹಾಗೂ ಐಶ್ ರೋಮ್ಯಾನ್ಸ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಡುಗಳು ಹಾಗೂ ಟ್ರೈಲರ್ ಗೆ ಅಭಿಮಾನಿಗಳು ಫುಲ್ ಮಾಕ್ಸ್ ನೀಡಿದ್ದಾರೆ. ಪಾಕ್ ನಟ ಫವಾದ್ ಖಾನ್ ಈ ಚಿತ್ರದಲ್ಲಿ ನಟಿಸಿರುವುದು ಎಂ ಎನ್ ಎಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಚಿತ್ರ ಬಿಡುಗಡೆಗೆ ಅಡ್ಡಿಯುಂಟು ಮಾಡಿತ್ತು. ಆದ್ರೀಗ ಎಲ್ಲ ಅಡ್ಡಿ-ಆತಂಕಗಳಿಗೆ ತೆರೆ ಬಿದ್ದಿದೆ.
ಇದೇ ಶುಕ್ರವಾರ ಚಿತ್ರ ತೆರೆಗೆ ಬರ್ತಾ ಇದೆ. ಫಸ್ಟ್ ಶೋ ನೋಡ್ತೀನಿ ಅಂತಾ ತುದಿಗಾಲಿನಲ್ಲಿ ಕುಳಿತಿರುವ ಅಭಿಮಾನಿಗಳಿಗೆ ಮಾತ್ರ ನಿರಾಶೆ ಕಾದಿದೆ. ಯಾಕೆಂದ್ರೆ ಈಗಾಗಲೇ ಚಿತ್ರದ ಟಿಕೆಟ್ ಬುಕ್ ಆಗಿದೆ. ಅಷ್ಟೇ ಅಲ್ಲ 2200 ರೂಪಾಯಿಗೆ ಟಿಕೆಟ್ ಸೇಲ್ ಆಗ್ತಾ ಇದೆ. 70-2200 ರೂಪಾಯಿಯವರೆಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ದೆಹಲಿಯ ಪಿವಿಆರ್ ಒಂದರಲ್ಲಿ 2200 ರೂಪಾಯಿಗೆ ಟಿಕೆಟ್ ಖರೀದಿಯಾಗ್ತಿದ್ದು, ಇದು ಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ.