ಕೇಂದ್ರ ರೈಲ್ವೇ ಸಚಿವರಾಗಿ ಸುರೇಶ್ ಪ್ರಭು ಅಧಿಕಾರ ವಹಿಸಿಕೊಂಡ ನಂತರ, ಹಲವಾರು ಕ್ರಾಂತಿಕಾರಕ ಕ್ರಮಗಳನ್ನು ಕೈಗೊಂಡು ರೈಲ್ವೇ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ.
ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದಾಗ, ಟ್ವಿಟರ್ ಮೂಲಕ ಮಾಹಿತಿ ಕೊಟ್ಟಲ್ಲಿ ತಕ್ಷಣಕ್ಕೆ ಸ್ಪಂದಿಸುತ್ತಾರೆ. ಅದೆಲ್ಲಾ ಇರಲಿ, ಶತಾಬ್ಧಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಜಿರಲೆ ಇದ್ದ ಆಮ್ಲೆಟ್ ಕೊಟ್ಟಿರುವುದು ಸುದ್ದಿಯಾಗಿದೆ. ಪಶ್ಚಿಮ ಬಂಗಾಳದ ನ್ಯೂಜಲ್ ಫೈಗುರಿಯಿಂದ ರೈಲು ಹೌರಾಗೆ ಹೊರಟಿದ್ದು, ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಮರೇಶ್ ಎಂಬುವವರು ಬೆಳಗಿನ ಉಪಾಹಾರಕ್ಕೆ ಆಮ್ಲೆಟ್ ಸೇರಿದಂತೆ ತಿಂಡಿಯನ್ನು ಆರ್ಡರ್ ಮಾಡಿದ್ದರು.
ರೈಲು ಬರ್ಸೋಯಿ ಸಮೀಪ ಬಂದಾಗ, ಅವರಿಗೆ ಕೇಟರಿಂಗ್ ಸಿಬ್ಬಂದಿ ಉಪಾಹಾರ ಸರ್ವ್ ಮಾಡಿದ್ದು, ಆಮ್ಲೆಟ್ ನಲ್ಲಿ ಜಿರಲೆ ಪತ್ತೆಯಾಗಿದೆ. ಕೂಡಲೇ, ರೈಲ್ವೇ ಅಧಿಕಾರಿಗಳು ಮತ್ತು ಕೇಟರಿಂಗ್ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದ್ದಾರೆ. ಅವರು ಬದಲಿ ಆಮ್ಲೆಟ್ ಕೊಡುವುದಾಗಿ ಹೇಳಿ ವಿಷಯ ತಣ್ಣಗಾಗಿಸಲು ಮುಂದಾಗಿದ್ದಾರೆ. ಇದಕ್ಕೆ ಒಪ್ಪದ ಸಹಪ್ರಯಾಣಿಕರು ರೈಲ್ವೇ ಸಚಿವರಿಗೆ ದೂರು ಕೊಡಲು ಮುಂದಾಗಿದ್ದಾರೆ.