ಚಿತ್ರದುರ್ಗ: ಡೆತ್ ನೋಟ್ ಬರೆದಿಟ್ಟು ಪೊಲೀಸ್ ಪೇದೆಯೊಬ್ಬ ನಾಪತ್ತೆಯಾದ ಘಟನೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರದಲ್ಲಿ ನಡೆದಿದೆ.
ಕವಿರಾಜ್ (27) ನಾಪತ್ತೆಯಾದವರು. ಅವರು ವಾಣಿವಿಲಾಸಪುರದ ಮನೆಯಲ್ಲಿ 3 ಪುಟಗಳ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿರುವುದಾಗಿ ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಅವರನ್ನು 4 ತಿಂಗಳ ಹಿಂದೆ ಹೈವೇ ಪೆಟ್ರೋಲಿಂಗ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ಇತ್ತೀಚೆಗೆ ಎ.ಸಿ.ಬಿ. ಗೆ ವರ್ಗಾವಣೆ ಮಾಡಲಾಗಿತ್ತು. ಪದೇ ಪದೇ ವರ್ಗಾವಣೆಯಿಂದ ಮನನೊಂದ ಅವರು, ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಫ್ತಿಯಲ್ಲಿ ಪ್ರಕರಣ ನಡೆದಿದೆ.