ಸ್ಮಾರ್ಟ್ ಫೋನ್ ಇಲ್ಲ ಅನ್ನೋ ಕಾರಣಕ್ಕೆ ವಾಟ್ಸಾಪ್ ಬಳಸದೇ ಇರುವವರಿಗೆಲ್ಲ ಖುಷಿ ಸುದ್ದಿ ಇದೆ. ನೀವು ನಿಮ್ಮ ಡೆಸ್ಕ್ ಟಾಪ್ ಮೂಲಕವೂ ವಾಟ್ಸಾಪ್ ಬಳಸಬಹುದು. ಇದಕ್ಕಾಗೇ ವಾಟ್ಸಾಪ್ ನ ಹೊಸ ವರ್ಷನ್ ಬಿಡುಗಡೆ ಮಾಡಲಾಗಿದೆ.
ವಾಟ್ಸಾಪ್ ಡೆಸ್ಕಟಾಪ್ 0.2.2243 ಅನ್ನು ನೀವು ಡೌನ್ ಲೋಡ್ ಮಾಡಿಕೊಂಡ್ರೆ ಡೆಸ್ಕ್ ಟಾಪ್ ನಲ್ಲೂ ಮೊಬೈಲ್ ನಲ್ಲಿ ಬಳಸಿದಂತೆಯೇ ವಾಟ್ಸಾಪ್ ಬಳಸಬಹುದು. ಡೆಸ್ಕ್ ಟಾಪ್ ವಾಟ್ಸಾಪ್ ನ ಹೊಸ ವರ್ಷನ್ ಇದಾಗಿದ್ದು, ಇತ್ತೀಚೆಗಷ್ಟೆ ಅಪಡೇಟ್ ಮಾಡಲಾಗಿದೆ.
ಇದರಲ್ಲಿ ವಿಶಿಷ್ಟ ಫೀಚರ್ ಗಳನ್ನು ಅಳವಡಿಸಲಾಗಿದೆ. ನಿರ್ದಿಷ್ಟ ಸಂಭಾಷಣೆಯನ್ನು ನೀವು ಸರ್ಚ್ ಮಾಡಬಹುದು. ಹೊಚ್ಚ ಹೊಸ ಎಮೊಜಿ ಮತ್ತು ಸಣ್ಣ ಪುಟ್ಟ ಯುಐ ಬದಲಾವಣೆಗಳನ್ನು ಮಾಡಲಾಗಿದೆ. ಎನಿಮೇಟೆಡ್ ಜಿಐಎಫ್ ಗಳನ್ನು ಶೇರ್ ಮಾಡಲು ಬಟನ್ ಒಂದನ್ನು ಅಳವಡಿಸಲಾಗಿದೆ. ಬಳಕೆದಾರರು ವಾಟ್ಸಾಪ್ ಡೆಸ್ಕ್ ಟಾಪ್ ನ ಲೇಟೆಸ್ಟ್ ವರ್ಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು, ಇದು ಆಟೋ-ಎಂಜಿನ್ ಅಪಡೇಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.