Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ನಾನು, ನನ್ನಿಷ್ಟ ಎಂದ ಫರ್ದೀನ್ ಖಾನ್

$
0
0
ನಾನು, ನನ್ನಿಷ್ಟ ಎಂದ ಫರ್ದೀನ್ ಖಾನ್

ಬಾಲಿವುಡ್ ನಟ ಫರ್ದೀನ್ ಖಾನ್ ಅವರ ಫೋಟೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕ್ಯೂಟ್ ಆಗಿದ್ದ ಫರ್ದೀನ್ ಖಾನ್ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳದೇ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಈ ಫೋಟೋ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು.

ಚಿತ್ರರಂಗದಲ್ಲಿ ನಾಯಕ- ನಾಯಕಿಯರಿಗೆ ಸೌಂದರ್ಯವೇ ಮುಖ್ಯ ಬಂಡವಾಳವಾಗಿದ್ದು, ಅಂತವುದರಲ್ಲಿ ಫರ್ದೀನ್ ಖಾನ್ ಇದ್ಯಾವುದಕ್ಕೂ ಗಮನ ನೀಡದೆ ಇರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೂ ಗುರಿಯಾಗಿತ್ತು.

ಇದೆಲ್ಲ ಟೀಕೆಗಳಿಗೂ ತಣ್ಣನೆಯ ಉತ್ತರ ನೀಡಿರುವ ಫರ್ದೀನ್ ಖಾನ್, ತಾವು ಈಗ ಹೇಗೆದ್ದೇನೋ ಅದರಲ್ಲಿ ಖುಷಿಯಾಗಿದ್ದೇನೆ. ಬೇರೆಯವರು ಈ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದಿದ್ದಾರೆ. ಫರ್ದೀನ್ ಖಾನ್ ಅವರ ಈ ಖಡಕ್ ಉತ್ತರಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದ್ದು, ಅವರಿಗೂ ವೈಯಕ್ತಿಕ ಬದುಕಿದೆ. ಆ ಕುರಿತು ಮೂರನೇಯವರು ಚಿಂತಿಸುವ ಅಗತ್ಯವಿಲ್ಲವೆಂಬ ಮಾತುಗಳು ಕೇಳಿ ಬಂದಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>